ಆ್ಯಪ್ನಗರ

ಗ್ರಾಪಂನಲ್ಲೆ ತಾಡಪಾಲು ವಿತರಣೆ

ಇನ್ನು ಮುಂದೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡುವ ತಾಡಪಾಲುಗಳನ್ನು ರೈತರು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿ, ಪಡೆಯಬಹುದು ಎಂದು ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ಬಸಣ್ಣ ತಿಳಿಸಿದರು.

Vijaya Karnataka 16 Dec 2018, 5:00 am
ಜಗಳೂರು : ಇನ್ನು ಮುಂದೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡುವ ತಾಡಪಾಲುಗಳನ್ನು ರೈತರು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿ, ಪಡೆಯಬಹುದು ಎಂದು ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ಬಸಣ್ಣ ತಿಳಿಸಿದರು.
Vijaya Karnataka Web distribution of gram panchayats
ಗ್ರಾಪಂನಲ್ಲೆ ತಾಡಪಾಲು ವಿತರಣೆ


ತಾಲೂಕಿನ ಹನುಮಂತಾಪುರ ಗ್ರಾಪಂನಲ್ಲಿ ನೀಡುವ ರಿಯಾಯಿತಿ ದರದ ತಾಡಪಾಲುಗಳ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ತಾಡಪಾಲ್‌ ವಿತರಣೆ ಮಾಡಲಾಗುತ್ತಿತ್ತು. ಆದರೆ ಬೇಡಿಕೆಗನುಸಾರ ತಾಡಪಾಲುಗಳು ಪೂರೈಕೆಯಾಗದೆ ಕೆಲ ರೈತರು ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ಈ ಬಾರಿ ಎಲ್ಲ 22 ಗ್ರಾಪಂ ಕೇಂದ್ರದಲ್ಲಿ ಡಿ.20 ರವರೆಗೆ ಅಗತ್ಯ ದಾಖಲೆಗಳೊಂದಿಗೆ ರೈತರಿಂದ ಅರ್ಜಿ ಪಡೆದು, ಡಿ.30ರಂದು ಲಾಟರಿ ಮೂಲಕ ವಿತರಣೆ ಮಾಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಈ ವೇಳೆ ಕೃಷಿ ಇಲಾಖೆಯ ಅನುವುಗಾರರಾದ ಚಿದಾನಂದಪ್ಪ, ಮಹಮದ್‌ ಅನ್ವರ್‌, ಬಸಪ್ಪ, ಸತ್ಯಮೂರ್ತಿ, ಸತೀಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ