ಆ್ಯಪ್ನಗರ

ರಂಜಾನ್‌ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಬೇಡ: ಮುಸ್ಲಿಮ್‌ ಚಿಂತಕರ ಚಾವಡಿ

​​ಪವಿತ್ರ ರಂಜಾನ್‌ ಹಬ್ಬದ ಮಾಸದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ಮಾಡದೆ ಮನೆಗಳಲ್ಲೇ ಮಾಡುತ್ತಾ ಸರಕಾರದ ಆದೇಶವನ್ನು ಮುಸ್ಲಿಂ ಸಮಾಜ ಪಾಲನೆ ಮಾಡುತ್ತಿದೆ.

Vijaya Karnataka Web 15 May 2020, 7:59 pm
ಹರಿಹರ: ರಾಜಕಾರಣಿಗಳಾದ ಸಿ.ಎಂ. ಇಬ್ರಾಹಿಂ ಹಾಗೂ ಅಬ್ದುಲ್‌ ಜಬ್ಬಾರ್‌ರವರು ರಂಜಾನ್‌ ಹಬ್ಬಕ್ಕಾಗಿ ಮಸೀದಿ ಮತ್ತು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಮಾಡಿಕೊಂಡಿರುವ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪುರಸ್ಕರಿಸ ಬಾರದೆಂದು ಮುಸ್ಲಿಂ ಚಿಂತಕರ ಚಾವಡಿಯ ಜೆ.ಕಲೀಂಬಾಷಾ ಆಗ್ರಹಿಸಿದ್ದಾರೆ.
Vijaya Karnataka Web ನಮಾಜ್
ನಮಾಜ್


ಪವಿತ್ರ ರಂಜಾನ್‌ ಹಬ್ಬದ ಮಾಸದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ಮಾಡದೆ ಮನೆಗಳಲ್ಲೇ ಮಾಡುತ್ತಾ ಸರಕಾರದ ಆದೇಶವನ್ನು ಮುಸ್ಲಿಂ ಸಮಾಜ ಪಾಲನೆ ಮಾಡುತ್ತಿದೆ. ಹಬ್ಬಕ್ಕೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿ ಎಂದು ಮಾಡಿರುವ ಮನವಿ ಇವರು ಮುಸ್ಲಿಂ ಸಮಾಜದವರ ಬಗ್ಗೆ ಮೊಸಳೆ ಕಣ್ಣೀರಿನ ಕಾಳಜಿಯೆ ಹೊರತು ನಿಜವಾದ ಕಾಳಜಿಯಲ್ಲ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮೇ 27ರವರೆಗೆ ಅಲ್ಲಿನ ಆಡಳಿತ ಕರ್ಫ್ಯೂ ವಿಧಿಸಿ ಆದೇಶಿಸಿದೆ. ಇಸ್ಲಾಂ ಧರ್ಮ ಹುಟ್ಟಿದ ನಾಡಿನಲ್ಲೇ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲು ನಿರ್ಬಂಧ ವಿಧಿಸಿರುವುದು ಕೊರೊನಾ ವೈರಸ್‌ನ ಭಯಾನಕತೆಯನ್ನು ತೆರೆದಿಡುತ್ತದೆ. ಸಾಮೂಹಿಕ ಪ್ರಾರ್ಥನೆಯಿಂದ ಕೊರೊನಾ ವೈರಸ್‌ ಹರಡಿದರೆ ಈ ರಾಜಕಾರಣಿಗಳು ಹೊಣೆ ಹೊರಲು ಸಿದ್ಧರಿದ್ದಾರೆಯೆ ಎಂದು ಕಲೀಂ ಬಾಷಾ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ