ಆ್ಯಪ್ನಗರ

'ಕೆರೆ ಗೌಡ್ರು' ಎಂದೇ ಖ್ಯಾತರಾಗಿದ್ದ ದಾವಣಗೆರೆಯ ವೈದ್ಯ ಡಾ. ಮಂಜುನಾಥ ಗೌಡ ಇನ್ನಿಲ್ಲ

ಜಗಳೂರು ತಾಲೂಕು ತುಪ್ಪದಹಳ್ಳಿ ಮೂಲದ ಡಾ. ಮಂಜುನಾಥ್ ಗೌಡ ಅವರು ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದರು. 22 ಕೆರೆಗೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಇವರು 'ಕೆರೆ ಗೌಡ್ರು' ಎಂದೇ ಜನಪ್ರಿಯರಾಗಿದ್ದರು.

Vijaya Karnataka 8 Sep 2020, 11:35 pm
ದಾವಣಗೆರೆ: ವೈದ್ಯರು ಹಾಗೂ 22 ಕೆರೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷರೂ ಆದ ಡಾ. ಮಂಜುನಾಥ ಗೌಡ ಅವರು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
Vijaya Karnataka Web Dr Manjunatha Gowda


ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅವರು ಮಂಗಳವಾರ ಅಸುನೀಗಿದ್ದಾರೆ.

ಡಾ. ಮಂಜುನಾಥ ಗೌಡ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್‌ ಸೋಂಕು ತಗುಲಿತ್ತು. ಇದರಿಂದ ಅವರು ಇತ್ತೀಚೆಗೆ ಮುಕ್ತರಾಗಿದ್ದರೂ ಇತರ ಕೆಲವು ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಕೊರೊನಾದಿಂದ ಚೇತರಿಸಿಕೊಂಡರೂ ಅವರು ಪಿತ್ತಕೋಶದ ವೈಫಲ್ಯ ಉಂಟಾಗಿ ಡಾ. ಮಂಜುನಾಥ ಗೌಡ ಕೊನೆಯುಸಿರೆಳೆದಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ಜಗಳೂರು ತಾಲೂಕು ತುಪ್ಪದಹಳ್ಳಿ ಮೂಲದ ಮಂಜುನಾಥ್ ಗೌಡರು ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದರು. ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ ದಾವಣಗೆರೆ, ಜಗಳೂರಿನ 22 ಕೆರೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷರಾಗಿ, ಕೆರೆ ಗೌಡ್ರು ಎಂದೆ ಖ್ಯಾತರಾಗಿದ್ದರು. ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ