ಆ್ಯಪ್ನಗರ

ಲೇಡಿಸ್‌ ಟೈಲರ್‌ ಬಳಿ ಹಣ ಕಿತ್ತ ನಕಲಿ ಪೊಲೀಸ್‌!

ವಾಹನದ ವಿಮೆ ಕಟ್ಟಿಲ್ಲ ಎಂದು ಹೇಳಿ ಲೇಡಿಸ್‌ ಟೈಲರ್‌ರೊಬ್ಬರಿಂದ ನಕಲಿ ಪೊಲೀಸ್‌ನೊಬ್ಬ 400 ರೂ. ಹಣ ಲಪಟಾಯಿಸಿರುವ ಘಟನೆ ನೂತನ ಕಾಲೇಜ್‌ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

Vijaya Karnataka 20 Jul 2019, 5:00 am
ದಾವಣಗೆರೆ: ವಾಹನದ ವಿಮೆ ಕಟ್ಟಿಲ್ಲ ಎಂದು ಹೇಳಿ ಲೇಡಿಸ್‌ ಟೈಲರ್‌ರೊಬ್ಬರಿಂದ ನಕಲಿ ಪೊಲೀಸ್‌ನೊಬ್ಬ 400 ರೂ. ಹಣ ಲಪಟಾಯಿಸಿರುವ ಘಟನೆ ನೂತನ ಕಾಲೇಜ್‌ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
Vijaya Karnataka Web fake police racketeering near ladies tyler
ಲೇಡಿಸ್‌ ಟೈಲರ್‌ ಬಳಿ ಹಣ ಕಿತ್ತ ನಕಲಿ ಪೊಲೀಸ್‌!


ನಕಲಿ ಪೊಲೀಸ್‌ ಗಜೇಂದ್ರ ಎಂಬುವನು ಆಂಜನೇಯ ಬಡಾವಣೆಯ ನಯನ ಲೇಡಿಸ್‌ ಟೈಲರ್‌ ಭೀಮರಾವ್‌ ಬಳಿ ಹಣ ಕಿತ್ತ ವ್ಯಕ್ತಿ. ಭೀಮರಾವ್‌ ಮತ್ತು ಅಳಿಯ ರಾಜಪ್ಪ ಹಾಗೂ ಸ್ನೇಹಿತ ವಿಕ್ರಮ ನೂತನ್‌ ಕಾಲೇಜ್‌ ಬಳಿ ಮಾತನಾಡುತ್ತಿರುವಾಗ ಗಂಜೇಂದ್ರ ಕಾರಿನಲ್ಲಿ ಬಂದು ನಾನು ಪೊಲೀಸ್‌ ಅದೀನಿ ಎಂದು ಹೇಳಿ ಗದರಿಸಿದ್ದಾನೆ. ಆಗ ಭೀಮರಾವ್‌ ನಿಮ್ಮ ಐಡಿ ಕಾರ್ಡ್‌ ತೋರಿಸಿ ಅಂತ ಕೇಳಿದಕ್ಕೆ ಬ್ರೌನ್‌ ಶೂ ತೋರಿಸಿದ್ದಾನೆ.

ತದ ನಂತರ ಬೈಕ್‌ ನಂಬರ್‌ ಪಡೆದು, ಮೊಬೈಲ್‌ನಲ್ಲಿ ಟೈಪಿಸಿದಂತೆ ನಾಟಕ ಮಾಡಿ ನಿಮ್ಮ ಬೈಕ್‌ನ 5 ವರ್ಷದ ವಿಮೆ ಬಾಕಿ ಇದೆ. 1 ವರ್ಷಕ್ಕೆ 1,600 ರೂ. ನಂತೆ ಫೈನ್‌ ಆಗುತ್ತದೆ. ಅದಕ್ಕಾಗಿ 5000 ರೂ. ಹಣ ನೀಡಿ ಅಂತ ಬೇಡಿಕೆ ಇಟ್ಟಿದ್ದಾನೆ. ನನ್ನ ಬಳಿ ಹಣ ಇಲ್ಲ ಎಂದ ಭೀಮರಾವ್‌ಗೆ ಕಾರನ್ನು ಹಿಂಬಾಲಿಸಲು ನಕಲಿ ಪೊಲೀಸ್‌ ಗಜೇಂದ್ರ ತಾಕೀತು ಮಾಡಿದ್ದಾನೆ. ಅಲ್ಲದೇ ನಾನು ಪೊಲೀಸ್‌ ನಿಮ್ಮನ್ನು ಜೈಲಿಗೆ ಹಾಕುತ್ತೇನೆ ಎಂದು ಬಲವಂತವಾಗಿ ಹೆದರಿಸಿ ಹಣ ಕಿತ್ತು ಪರಾರಿಯಾಗಲು ಯತ್ನಿಸಿದಾಗ ಭೀಮರಾವ್‌ಗೆ ಅನುಮಾನ ಬಂದಿದ್ದು, ವಿಚಾರ ಮಾಡಿದಾಗ ನಕಲಿ ಪೊಲೀಸ್‌ ಎಂದು ತಿಳಿದಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ