ಆ್ಯಪ್ನಗರ

ಕೌಟುಂಬಿಕ ಕಲಹ: ಮಕ್ಕಳ ಜತೆ ದಂಪತಿ ಆತ್ಮಹತ್ಯೆ

ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ.

ವಿಕ ಸುದ್ದಿಲೋಕ 18 Aug 2017, 11:49 am
ದಾವಣಗೆರೆ: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
Vijaya Karnataka Web family crisis four members suicide
ಕೌಟುಂಬಿಕ ಕಲಹ: ಮಕ್ಕಳ ಜತೆ ದಂಪತಿ ಆತ್ಮಹತ್ಯೆ


ಫಾಲಾಕ್ಷಿ (34) ಮತ್ತು ಶಶಿಕಲಾ (28) ದಂಪತಿ ಹಾಗೂ ಏಳು ವರ್ಷದ ಪುತ್ರ ಕಾರ್ತಿಕ್, ಆರು ವರ್ಷದ ಪುತ್ರಿ ವರ್ಷಿಣಿ ಆತ್ಮಹತ್ಯೆ ಶರಣಾದವರು. ಬೆಳಗ್ಗೆ ಸಂಬಂಧಿಕರು ಬಾಗಿಲು ತೆರೆದಾಗ ವಿಚಾರ ಗೊತ್ತಾಗಿದೆ. ಘಟನೆ ಸ್ಥಳಕ್ಕೆ ಬಸವಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಫಾಲಾಕ್ಷಿ ನಿನ್ನೆ ಕುಟುಂಬ ಸಹಿತ ತಂಗಿ ಮನೆಗೆ ಹೋಗಿ ಗೌರಿ ಹಬ್ಬದ ಬಾಗಿನ ಕೊಟ್ಟು ಬಂದಿದ್ದರು. ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗುತ್ತೇವೆ ಎಂದು ಹೇಳಿ ಬಂದಿದ್ದರು. ಮನೆಗೆ ವಾಪಸಾಗುವಾಗ ಕೇಕ್ ತಂದು ರಾತ್ರಿ ಅದಕ್ಕೆ ವಿಷ ಬೆರಸಿ ಮಕ್ಕಳೊಂದಿಗೆ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇವರು ಇತ್ತೀಚೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು, ಸಾಲ ತೀರಿಸುವ ಒತ್ತಡ ಇತ್ತು. ಇದು ಕೂಡ ಘಟನೆಗೆ ಕಾರಣ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ