ಆ್ಯಪ್ನಗರ

ಸಾಗುವಳಿ ಪತ್ರ ಶೀಘ್ರ ವಿಲೇಗೆ ರೈತರ ಮನವಿ

ಬಗರ್‌ ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕೆ ಸಲ್ಲಿಸಿದ ಅರ್ಜಿ ಶೀಘ್ರ ವಿಲೇವಾರಿ ಮಾಡಬೇಕು ಮತ್ತು ಆನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಹುಚ್ಚವ್ವನಹಳ್ಳಿ ಮಂಜುನಾಥ ರೈತ ಸಂಘದ ಬಣದಿಂದ ಉಪ ತಹಸೀಲ್ದಾರ್‌ ಕಚೇರಿಗೆ ಸೋಮವಾರ ಭೇಟಿ ನೀಡಿ ಮನವಿ ಸಲ್ಲಿಸಿದರು.

Vijaya Karnataka 14 May 2019, 5:00 am
ಮಾಯಕೊಂಡ : ಬಗರ್‌ ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕೆ ಸಲ್ಲಿಸಿದ ಅರ್ಜಿ ಶೀಘ್ರ ವಿಲೇವಾರಿ ಮಾಡಬೇಕು ಮತ್ತು ಆನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಹುಚ್ಚವ್ವನಹಳ್ಳಿ ಮಂಜುನಾಥ ರೈತ ಸಂಘದ ಬಣದಿಂದ ಉಪ ತಹಸೀಲ್ದಾರ್‌ ಕಚೇರಿಗೆ ಸೋಮವಾರ ಭೇಟಿ ನೀಡಿ ಮನವಿ ಸಲ್ಲಿಸಿದರು.
Vijaya Karnataka Web farmers request to cultivate a quick wave
ಸಾಗುವಳಿ ಪತ್ರ ಶೀಘ್ರ ವಿಲೇಗೆ ರೈತರ ಮನವಿ


ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್‌ ಮಾತನಾಡಿ, ಆನಗೋಡು ಮತ್ತು ಮಾಯಕೊಂಡ ಹೋಬಳಿಯ ನೂರಾರು ರೈತರು ಬಗರ್‌ ಹುಕುಂ ಸಾಗುವಳಿ ಹಕ್ಕು ಪತ್ರ ಪಡೆಯಲು ಹಲವಾರು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ. ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದರೂ ಕಂದಾಯ ಇಲಾಖೆ ಹಕ್ಕುಪತ್ರ ಕೊಡಲು ವಿನಾಃ ಕಾರಣ ತಡ ಮಾಡುತ್ತಿದೆ. ಅದಷ್ಟು ಬೇಗ ಸಾಗುವಳಿ ಪತ್ರ ಕೊಡಬೇಕು ಎಂದು ಒತ್ತಾಯಿಸಿದರು.

ಆನಗೋಡು ಹೋಬಳಿ ವ್ಯಾಪ್ತಿಯ ಪಂಚಾಯಿತಿಗಳಿಗೆ ಸೇರಿದ ಗ್ರಾಮಗಳಲ್ಲಿ ಕುಡಿವ ನೀರಿಲ್ಲದೆ ಜನ ಪರಿತಪಿಸುತ್ತಿದ್ದಾರೆ. ಆದರೂ ಇಂದಿಗೂ ಸರಕಾರ ನೀರು ಪೂರೈಸುವಲ್ಲಿ ವಿಫಲವಾಗಿದೆ. ದನ ಕರುಗಳು ನೀರಿಲ್ಲದೆ ಸೊರಗಿವೆ ಎಂದು ಸರಕಾರದ ವಿರುದ್ದ ಹರಿಹಾಯ್ದರು. ಅಧಿಕಾರಿಗಳು ಕುಡಿವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಆನಗೋಡು ಹೋಬಳಿ ಅಧ್ಯಕ್ಷ ಎನ್‌.ಸಿ.ಕೃಷ್ಣಮೂರ್ತಿ ಮಾತನಾಡಿ, ಸರಕಾರ ಮತ್ತು ಅಧಿಕಾರಿಗಳು ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿವೆ. ಬಗರ್‌ ಹುಕುಂ ಸಾಗುವಳಿ ಹಕ್ಕು ಪತ್ರ ಮತ್ತು ಗ್ರಾಮಗಳಿಗೆ ಕುಡಿವ ನೀರಿನ ಸಮರ್ಪಕ ಪೂರೈಕೆ ಮಾಡದಿದ್ದರೆ ರಸ್ತೆಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್‌ ಹಾಲೇಶಪ್ಪ ಮಾತನಾಡಿ, ರೈತರು ಸಲ್ಲಿಸಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಕಳಿಸಿಕೊಡಲಾಗುವುದು ಎಂದರು.

ಕರಿಲಕ್ಕೇನಹಳ್ಳಿ ನಾಗರಾಜ್‌, ಬುಳ್ಳಾಪುರ ಪೂಜಾರ್‌ ನಾಗಪ್ಪ, ನರಸಿಂಹಪುರ ಮಂಜಣ್ಣ, ಗುಮ್ಮನೂರ್‌ ರಾಜಪ್ಪ, ಭೀಮಪ್ಪ, ರಾಮಪ್ಪ, ರುದ್ರೇಶ್‌, ಕೆಂಚಮ್ಮನಹಳ್ಳಿ ಹನುಮಂತರಪ್ಪ, ಹುಲಿಕಟ್ಟೆ ಮಂಜಪ್ಪ ಮ್ಯಾಸರಳ್ಳಿ ಸಂಜೀವಪ್ಪ, ವೆಂಕಟೇಶ್‌, ಆಲೂರುಹಟ್ಟಿ ಪುಟ್ಟಾನಾಯ್ಕ, ಮತ್ತು ನಾನಾ ಗ್ರಾಮಗಳ ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ