ಆ್ಯಪ್ನಗರ

ಶ್ರೀರಾಮ ಫೈನಾನ್ಸ್‌ ಕಚೇರಿಗೆ ಬೆಂಕಿ: 3 ಲಕ್ಷ ಹಾನಿ

ನಗರದ ಪಿಬಿ ರಸ್ತೆಯಲ್ಲಿರುವ ಶ್ರೀರಾಮ ಫೈನಾನ್ಸ್‌ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 6ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿರುವ ಘಟನೆ ನಡೆದಿದೆ.

Vijaya Karnataka 4 Jul 2019, 2:52 pm
ದಾವಣಗೆರೆ: ನಗರದ ಪಿಬಿ ರಸ್ತೆಯಲ್ಲಿರುವ ಶ್ರೀರಾಮ ಫೈನಾನ್ಸ್‌ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 6ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿರುವ ಘಟನೆ ನಡೆದಿದೆ.
Vijaya Karnataka Web fire at srirama finance office 3 lakhs damaged
ಶ್ರೀರಾಮ ಫೈನಾನ್ಸ್‌ ಕಚೇರಿಗೆ ಬೆಂಕಿ: 3 ಲಕ್ಷ ಹಾನಿ


ಕಚೇರಿಯಲ್ಲಿದ್ದ ಎಸಿ, ಯುಪಿಎಸ್‌ ಬ್ಯಾಟರಿ, ಸಿಸಿ ಕ್ಯಾಮೆರಾ, ದಾಖಲೆ ಪತ್ರಗಳು ಬೆಂಕಿಗೆ ಆಹುತಿಯಾಗಿದೆ. ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಹೊಗೆ ಬರುತ್ತಿದ್ದನ್ನು ಗಮನಿಸಿದ ದಾರಿಹೋಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷ ಣವೇ ಮೂರು ಅಗ್ನಿಶಾಮಕ ವಾಹನಗಳಲ್ಲಿ ಜಯರಾಮ್‌, ಬಸವಪ್ರಭು ಶರ್ಮ ನೇತೃತ್ವದ ಶಿವಣ್ಣ, ರವಿ, ಸಿದ್ದಪ್ಪ, ಆಂಜನೇಯ, ಶಬ್ಬೀರ್‌ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿಯಿತು.

ಕಟ್ಟಡದೊಳಗೆ ದಟ್ಟ ಹೊಗೆ ತುಂಬಿದ್ದರಿಂದ ಕಿಟಕಿಗಳ ಗಾಜುಗಳನ್ನು ಒಡೆದು ಹೊಗೆ ಹೋಗಲು ಅಗ್ನಿ ಶಾಮಕದಳದ ಸಿಬ್ಬಂದಿ ಅವಕಾಶ ಮಾಡಿಕೊಟ್ಟರು. ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಫೈರ್‌ಮೆನ್‌ಗಳು ಹರಸಾಹಸಪಟ್ಟು ಅಂತಿಮವಾಗಿ ಬೆಂಕಿ ನಂದಿಸಲು ಯಶಸ್ವಿಯಾದರು.

'ಕೆಲ ದಿನಗಳ ಹಿಂದೆ ನಗರದ ಅಂಬೇಡ್ಕರ್‌ ವೃತ್ತದ ಬಳಿಯ ಸೋನಿ ಶೋರೂಂ ಕಟ್ಟಡಕ್ಕೆ ಇದೇ ರೀತಿ ಬೆಂಕಿ ಬಿದ್ದು ಕೋಟ್ಯಾಂತರ ರೂ. ಹಾನಿ ಸಂಭವಿಸಿತ್ತು. ಇಂತಹ ಘಟನೆಗಳು ಸಾಕಷ್ಟು ಆದರೂ ಮಾಲೀಕರು ರಾಷ್ಟ್ರೀಯ ಕಟ್ಟಡಗಳ ನಿಯಮಾವಳಿಗಳನ್ನು ಪಾಲಿಸದೇ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದರಿಂದ ಅಗ್ನಿ ಅವಘಡಗಳು ನಡೆಯುತ್ತಿದೆ. ಇಂತಹ ಸಮಯದಲ್ಲಿ ಬೆಂಕಿ ನಂದಿಸಲು ಸಾಕಷ್ಟು ಕಷ್ಟವಾಗುತ್ತಿದೆ' ಎಂದು ಬಸವಪ್ರಭು ಶರ್ಮ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ