ಆ್ಯಪ್ನಗರ

ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ಆತಂಕ

ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ನಗರದ ಸಾರ್ವಜನಿಕ ಆಸ್ಪತ್ರೆ ಜನೌಷಧಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಸಮಯ ರೋಗಿಗಳಲ್ಲಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆಯಿತು.

Vijaya Karnataka 3 Jun 2019, 5:00 am
ಹರಿಹರ : ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ನಗರದ ಸಾರ್ವಜನಿಕ ಆಸ್ಪತ್ರೆ ಜನೌಷಧಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಸಮಯ ರೋಗಿಗಳಲ್ಲಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆಯಿತು.
Vijaya Karnataka Web fire burns in hospital patients anxiety
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ಆತಂಕ


ಜನೌಷಧಿ ಕೇಂದ್ರದ ಗೋಡೆ ಮೇಲೆ ಸಾಗಿರುವ ವಿದ್ಯುತ್‌ಲೈನ್‌ನಲ್ಲಿ ಬೆಳಿಗ್ಗೆ 6ಕ್ಕೆ ಶಬ್ದ ಬಂದು ನಂತರ ಬೆಂಕಿ ಕಾಣಿಸಿಕೊಂಡಿದೆ. ನೋಡ, ನೋಡುತ್ತಲೆ ಬೆಂಕಿ ಜ್ವಾಲೆ ವಿಸ್ತರಿಸುತ್ತಾ ಹೋಯಿತು. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಗಳು ಸೇರಿ ತಕ್ಷ ಣ ಮೇನ್‌ ಸ್ವಿಚ್‌ ಆಫ್‌ ಮಾಡಿದ್ದಾರೆ.

ವಿಷಯ ತಿಳಿದ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಕ್ರಮೇಣ ಬೆಂಕಿಯೂ ನಂದಿತು. ಘಟನೆಯಿಂದ ಅದೃಷ್ಟಾವಷಾತ್‌ ಯಾವುದೆ ಆಸ್ತಿ, ಪ್ರಾಣ ಹಾನಿಯಾಗಿಲ್ಲ.

ಓಲ್ಡ್‌ ವೈರಿಂಗ್‌:
ಆಸ್ಪತ್ರೆಯ ಈ ಭಾಗದಲ್ಲಿರುವ ವಿದ್ಯುತ್‌ ವೈರಿಂಗ್‌ ಅವಧಿ ಮುಗಿದಿದೆ. ಇದನ್ನು ಬದಲಿಸಲು ಆಸ್ಪತ್ರೆ ಆಡಳಿತದವರು ಮುಂದಾಗಿಲ್ಲ. ಇದರ ಪರಿಣಾಮವಾಗಿ ಶಾರ್ಟ್‌ ಸಕ್ರ್ಯೂಟ್‌ ಆಗಿದೆ. ಇದೆ ಘಟನೆ ರೋಗಿಗಳಿರುವ ವಾರ್ಡ್‌, ಆಪರೇಷನ್‌ ಥಿಯೇಟರ್‌ನಲ್ಲಾಗಿದ್ದರೆ ರೋಗಿಗಳು ಭಯ ಬೀಳುತ್ತಿದ್ದರು.

ಪತ್ರಿಕೆಯೊಂದಿಗೆ ಮಾತನಾಡಿದ ಆಸ್ಪತ್ರೆ ಸಿಇಒ ಡಾ.ಹನುಮನಾಯ್ಕ, 'ವೈಯರಿಂಗ್‌ ಹಳೇಯಾಗಿರುವುದು ಶಾರ್ಟ್‌ ಸಕ್ರ್ಯೂಟ್‌ಗೆ ಕಾರಣವಾಗಿರಬಹುದು. ಯಾವುದೆ ಹಾನಿ ಉಂಟಾಗಿಲ್ಲ. ಆ ಭಾಗದಲ್ಲಿ ಹೊಸದಾಗಿ ವೈರಿಂಗ್‌ ಮಾಡಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ