ಆ್ಯಪ್ನಗರ

ಇಂದು ನಗರಸಭೆ ಅಭ್ಯರ್ಥಿಗಳ ಭವಿಷ್ಯ

ನಗರಸಭೆಯ 31 ವಾರ್ಡುಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 135 ಅಭ್ಯರ್ಥಿಗಳ ಭವಿಷ್ಯ ಇರುವ ಇವಿಎಂ ಯಂತ್ರಗಳು ಗಿರಿರಾಜ ಆಂಗ್ಲ ಮಾಧ್ಯಮ ಶಾಲೆಯ ಕೊಠಡಿಯಲ್ಲಿ ಭದ್ರವಾಗಿದೆ.

Vijaya Karnataka 31 May 2019, 5:00 am
ಹರಿಹರ : ನಗರಸಭೆಯ 31 ವಾರ್ಡುಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 135 ಅಭ್ಯರ್ಥಿಗಳ ಭವಿಷ್ಯ ಇರುವ ಇವಿಎಂ ಯಂತ್ರಗಳು ಗಿರಿರಾಜ ಆಂಗ್ಲ ಮಾಧ್ಯಮ ಶಾಲೆಯ ಕೊಠಡಿಯಲ್ಲಿ ಭದ್ರವಾಗಿದೆ.
Vijaya Karnataka Web future of municipal candidates today
ಇಂದು ನಗರಸಭೆ ಅಭ್ಯರ್ಥಿಗಳ ಭವಿಷ್ಯ


ಶುಕ್ರವಾರ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಒಟ್ಟು ಮೂರು ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮೊದಲ ಸುತ್ತಿನಲ್ಲಿ 1ರಿಂದ 13ನೇ ವಾರ್ಡು, ಎರಡನೇ ಸುತ್ತಿನಲ್ಲಿ 14ರಿಂದ 25ನೇ ವಾರ್ಡು, ಮೂರನೆ ಸುತ್ತಿನಲ್ಲಿ 26ರಿಂದ 31 ವಾರ್ಡುಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ಸುತ್ತಿನ ಮತ ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟ ಮಾಡಲಾಗುವುದು.

ಎಲ್ಲ ಸುತ್ತುಗಳ ಮತ ಎಣಿಕೆ ನಂತರ ಆಯಾ ವಾರ್ಡುಗಳ ಚುನಾವಣಾಧಿಕಾರಿಗಳು ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವರು. ಶಾಲೆಯ ಒಂದು ಕೊಠಡಿಯಲ್ಲಿ 13 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಒಂದು ಟೇಬಲ್‌ಗೆ ತಲಾ ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ