ಆ್ಯಪ್ನಗರ

ಹನ್ನೇರಡು ವರ್ಷಕ್ಕೆ ಪಿಂಚಣಿ ಹಣ ನೀಡಿ

ವೇತನ ಆಯೋಗ ವ್ಯಾಪ್ತಿಯಿಂದ ಪಿಂಚಣಿ ಯೋಜನೆ ಪ್ರತ್ಯೇಕಿಸಬೇಕು ಹಾಗೂ ಪಿಂಚಣಿ ಸಂಗ್ರಹ ಹಣವನ್ನು 12 ವರ್ಷಕ್ಕೆ ನೀಡಬೇಕು ಎಂದು ಅಖಿಲ ಭಾರತ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ. ಬೆನಕನಕೊಂಡ ಅಭಿಪ್ರಾಯಪಟ್ಟರು.

Vijaya Karnataka 18 Dec 2018, 5:00 am
ದಾವಣಗೆರೆ : ವೇತನ ಆಯೋಗ ವ್ಯಾಪ್ತಿಯಿಂದ ಪಿಂಚಣಿ ಯೋಜನೆ ಪ್ರತ್ಯೇಕಿಸಬೇಕು ಹಾಗೂ ಪಿಂಚಣಿ ಸಂಗ್ರಹ ಹಣವನ್ನು 12 ವರ್ಷಕ್ಕೆ ನೀಡಬೇಕು ಎಂದು ಅಖಿಲ ಭಾರತ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ. ಬೆನಕನಕೊಂಡ ಅಭಿಪ್ರಾಯಪಟ್ಟರು.
Vijaya Karnataka Web give a pension money for twelve years
ಹನ್ನೇರಡು ವರ್ಷಕ್ಕೆ ಪಿಂಚಣಿ ಹಣ ನೀಡಿ


ನಗರದ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಭಾರತ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಪಿಂಚಣಿದಾರರ ದಿನಾಚರಣೆ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಶೇ.40ರಷ್ಟು ಪಿಂಚಣಿ ಹಣವನ್ನು ಕೇಂದ್ರ ಸಂಗ್ರಹಿಸಿ 15 ವರ್ಷಕ್ಕೆ ಒಟ್ಟು ಮೊತ್ತ ಕೊಡುತ್ತಿದ್ದು, ಈ ಅವಧಿಯನ್ನು 12 ವರ್ಷಕ್ಕೆ ಕಡಿತಗೊಳಿಸಬೇಕು. ಅಲ್ಲದೇ ಡಿಒಟಿ ಸಂಸ್ಥೆ ಬಿಎಸ್‌ಎನ್‌ಎಲ್‌ ಸಂಸ್ಥೆಯಾಗಿ ಪರಿವರ್ತನೆಯಾಗಿದ್ದು, ಬಿಎಸ್‌ಎನ್‌ಎಲ್‌ ನಿವೃತ್ತ ನೌಕರರನ್ನು 1972ರ ಪಿಂಚಣಿ ಕಾಯಿದೆ ಅನ್ವಯ ಕೇಂದ್ರ ಸರಕಾರ ನಿವೃತ್ತ ನೌಕರರು ಎಂದು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪಿಂಚಣಿ ಹಣ ಭಿಕ್ಷೆಯಲ್ಲ:
ವಕೀಲ ಕೆ.ಎನ್‌. ಜಯಪ್ರಕಾಶ್‌ ಮಾತನಾಡಿ, ಸರಕಾರ ನಮಗೆ ಪಿಂಚಣಿ ಹಣ ಕೊಡುತ್ತಿರುವುದು ಭಿಕ್ಷೆಯಲ್ಲ, ಅದು ನಮ್ಮ ಶ್ರಮ, ಬೆವರಿನ ಫಲ. ಇನ್ನು ಐಎಂಎಫ್‌ ಸಂಸ್ಥೆ ಒತ್ತಡದಿಂದ ಸರಕಾರ ಜಾರಿಗೊಳಿಸಿದ ಹೊಸ ಪಿಂಚಣಿ ಯೋಜನೆ (ಎನ್‌ಪಿಪಿ) ಮೋಸದ ಜಾಲವಾಗಿದ್ದು, ಈ ಯೋಜನೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಹೇಳಿದರು.

ಹೊಸ ಯೋಜನೆಯನ್ನು ಆರಂಭದಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ಕಾರ್ಮಿಕ ಸಂಘಟನೆಗಳು ಎಡವಿದ್ದು, ಈಗ ಎಚ್ಚರಗೊಂಡು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಪಿಂಚಣಿ ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಆಗಬೇಕು. ಇನ್ನು ಎನ್‌ಪಿಎಸ್‌ ನೌಕರರ ಹೋರಾಟ ಬೆಂಬಲಿಸಿ ಅವರ ಭವಿಷ್ಯ ಭದ್ರ ಪಡಿಸಲು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ವಲಯ ಉಪಕಾರ್ಯದರ್ಶಿ ಟಿ. ಷಣ್ಮುಖಪ್ಪ, ಜಿಲ್ಲಾ ಖಜಾಂಚಿ ಕೆ. ನಂದಗೋಪಾಲ್‌, ನರಸಣ್ಣ, ಜಯರಾಜ ಕುಮಾರ್‌ ಸೇರಿದಂತೆ ಇತರರಿದ್ದರು.

1972ರಲ್ಲಿ ತಿದ್ದುಪಡಿ
ಸ್ವಾತಂತ್ರ್ಯ ಪೂರ್ವದಲ್ಲಿ ಪಿಂಚಣಿ ಕಾನೂನು ಜಾರಿಗೆ ಬಂದಿದ್ದು, 1972ರಲ್ಲಿ ತಿದ್ದುಪಡಿ ಮಾಡಲಾಗಿದೆ. 1986ರಿಂದ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಕಾರ್ಯ ನಿರ್ವಹಿಸುತ್ತಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ 1857ಕ್ಕೂ ಮೊದಲೇ ಈ ಕಾನೂನು ಜಾರಿಯಲ್ಲಿದ್ದು, ರಾಜಧನಕ್ಕೆ ಮಾತ್ರ ಸೀಮಿತಗೊಂಡಿತ್ತು. 2ನೇ ಮಹಾಯುದ್ಧ ಸಂದರ್ಭದಲ್ಲಿ ಸೇನೆಗೆ ಜನರನ್ನು ಆಕರ್ಷಿಸಲು ಈ ಯೋಜನೆಗೆ ಹೆಚ್ಚು ಮಹತ್ವ ನೀಡಲಾಯಿತು ಎಂದು ಜಯಪ್ರಕಾಶ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ