ಆ್ಯಪ್ನಗರ

ಜೂ.9ರಿಂದ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ಪಾದಯಾತ್ರೆ

ಶಿಕ್ಷ ಣ, ಉದ್ಯೋಗದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಜೂ.9ರಿಂದ 24ರ ವರೆಗೆ ಶ್ರೀಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಸಮಾಜದವರು ಕಿವಿಕೊಡಬಾರದು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.

Vijaya Karnataka 8 Jun 2019, 5:00 am
ದಾವಣಗೆರೆ : ಶಿಕ್ಷ ಣ, ಉದ್ಯೋಗದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಜೂ.9ರಿಂದ 24ರ ವರೆಗೆ ಶ್ರೀಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಸಮಾಜದವರು ಕಿವಿಕೊಡಬಾರದು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.
Vijaya Karnataka Web hike for reservation increase from june 9
ಜೂ.9ರಿಂದ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ಪಾದಯಾತ್ರೆ


ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ವಾಲ್ಮೀಕಿ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಮೀಸಲಾತಿ ಸಂಬಂಧಪಟ್ಟಂತೆ ಗುರುವಾರ ಪ್ರತಿಭಟನೆ ನಡೆದಿದೆ. ಆದರೆ ಕೆಲವರು ಸೋಷಿಯಲ್‌ಮೀಡಿಯಾ ಬಳಸಿಕೊಂಡು ಪಾದಯಾತ್ರೆ ಮುಂದೂಡಲಾಗಿದೆ ಎಂದು ಹಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದರು.

ರಾಜನಹಳ್ಳಿಯ ಶ್ರೀಮಠದಲ್ಲಿರುವ ಲಿಂಗೈಕ್ಯ ಶ್ರೀಪುಣ್ಯಾನಂದಪುರಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಜೂ.9ರಂದು ಬೆಳಗ್ಗೆ 10.30ಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದೆ. ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಕಾಗಿನೆಲೆ ಶ್ರೀಗಳು, ನಂದಿಗುಡಿ ಸ್ವಾಮೀಜಿ, ಆವರಗೊಳ್ಳದ ಶ್ರೀಗಳು ಸೇರಿದಂತೆ ಇನ್ನಿತರ ಸ್ವಾಮೀಜಿಗಳು ಭಾಗವಹಿಸುವರು ಎಂದರು.

ಲಕ್ಷಕ್ಕೂ ಹೆಚ್ಚು ಜನ ಭಾಗಿ:

ಈ ಬೃಹತ್‌ ಪಾದಯಾತ್ರೆಯಲ್ಲಿ ಆರಂಭದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಹೋರಾಟದಲ್ಲಿ ಲಕ್ಷ ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಒಂದು ವೇಳೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಎಚ್‌.ಕೆ.ರಾಮಚಂದ್ರಪ್ಪ, ಕೆ.ಎಚ್‌.ಓಬಳಪ್ಪ, ಹದಡಿ ಎಂ.ಬಿ.ಹಾಲಪ್ಪ, ಬಿ.ವೀರಣ್ಣ, ಕುರ್ಕಿ ಮುರುಗೇಂದ್ರಪ್ಪ ದೊಡ್ಡಮನೆ, ಗುಮ್ಮನೂರು ಮಲ್ಲಿಕಾರ್ಜುನ್‌, ಅಣ್ಣಾಪುರದ ಹೇಮಣ್ಣ, ಗೋಣಿವಾಡದ ಮುರುಗೆಪ್ಪ, ಕಂದಗಲ್ಲು ಮಂಜಣ್ಣ, ಅಣಜಿ ಅಂಜಿನಪ್ಪ, ಚಟ್ಟೋಬನಹಳ್ಳಿ ಕರಿಓಬಣ್ಣ, ವಿನಾಯಕ ಪೈಲ್ವಾನ್‌, ಲಕ್ಷ ್ಮಣ, ಟಿ.ಡಿ.ಶ್ರೀನಿವಾಸ್‌, ರಾಘು ದೊಡ್ಮನಿ, ಕಲ್ಕರೆ ಮಂಜಣ್ಣ, ಲೋಕಿಕೆರೆ ಓಬಳೇಶ್‌, ಮಹಾಲಕ್ಷ್ಮೀಚಂದ್ರಪ್ಪ, ವಿಜಯಶ್ರೀ, ಹೊನ್ನಾಳಿಯ ಚಂದ್ರಪ್ಪ, ಹರಿಹರದ ಪುಟ್ಟಪ್ಪ ಮತ್ತಿತರರಿದ್ದರು.

ಬಾಕ್ಸ್‌...

ಖಾರವಾಗಿ ಮಾತನಾಡಿದ್ದು ನಾನೇ: ಸ್ವಾಮೀಜಿ

ದಾವಣಗೆರೆ:
'ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವ ಧ್ವನಿ ನನ್ನದೇ' ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಮಠದ ಭಕ್ತರೊಬ್ಬರಿಗೆ ಖಾರವಾಗಿ ಮಾತನಾಡಿರುವ ಆಡಿಯೊ ವೈರಲ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, 'ಆತ ತನ್ನ ವರ್ತನೆ ತಿದ್ದಿಕೊಳ್ಳಲಿ ಎಂಬ ಸದುದ್ದೇಶದಿಂದ ಸ್ವಲ್ಪ ಖಾರವಾಗಿ ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವ ಉದ್ದೇಶವಿಲ್ಲ' ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ