ಆ್ಯಪ್ನಗರ

ಹೊನ್ನಾಳಿ: ಮತಕ್ಕಾಗಿ ಆಣೆ ಪ್ರಮಾಣದ ವರಸೆ

ಪಪಂ ಚುನಾವಣೆಗೆ ಒಂದು ದಿನ ಬಾಕಿ ಉಳಿದಿದ್ದು, ಪಟ್ಟಣದ ಬೀದಿ ಬೀದಿಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷ ಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಬುಧವಾರ ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಅಂತ್ಯಗೊಳಿಸಿದರು.

Vijaya Karnataka 30 Aug 2018, 4:30 pm
ಹೊನ್ನಾಳಿ : ಪಪಂ ಚುನಾವಣೆಗೆ ಒಂದು ದಿನ ಬಾಕಿ ಉಳಿದಿದ್ದು, ಪಟ್ಟಣದ ಬೀದಿ ಬೀದಿಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷ ಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಬುಧವಾರ ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಅಂತ್ಯಗೊಳಿಸಿದರು.
Vijaya Karnataka Web honnali vote for the vote
ಹೊನ್ನಾಳಿ: ಮತಕ್ಕಾಗಿ ಆಣೆ ಪ್ರಮಾಣದ ವರಸೆ


ಪ್ರತಿ ವಾರ್ಡ್‌ನಲ್ಲೂ ಹಲವು ಆಟೋ ರಿಕ್ಷಾಗಳಲ್ಲಿ ಕರಪತ್ರ ಇಟ್ಟುಕೊಂಡು ಮತದಾರರಿಗೆ ಹಂಚಿ, ಮತ ಹಾಕುವಂತೆ ಹುರಿಯಾಳುಗಳು ಮನವಿ ಮಾಡಿದರು. ಕಾಂಗ್ರೆಸ್‌, ಬಿಜೆಪಿ 18 ರಲ್ಲಿ 17 ಹಾಗೂ ಜೆಡಿಎಸ್‌ 5 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಪಕ್ಷೇತರರು ಕಣದಲ್ಲಿ ಇದ್ದಾರೆ.

ಆಣೆ, ಪ್ರಮಾಣದ ವರಸೆ :

ಹಲವು ವರ್ಷಗಳಿಂದ ತಾವು ಸ್ಪರ್ಧಿಸಿರುವ ವಾರ್ಡ್‌ಗಳಲ್ಲೇ ನೆಲೆಸಿರುವ ಕೆಲ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚಿಸುವ ಜತೆಗೆ, ತಮಗೆ ಪರಿಚಿತರ ಹತ್ತಿರ ತಮಗೇ ಮತ ನೀಡಬೇಕು ಎಂದು ಆಣೆ, ಪ್ರಮಾಣ ಮಾಡಿಸಿಕೊಂಡಿದ್ದಾರೆ. ಜತೆಗೆ ಹೊರಗಿನ ವಾರ್ಡ್‌ ಅಭ್ಯರ್ಥಿಗಳಿಗೆ ಮತ ನೀಡದಂತೆ ತಾಕೀತು ಸಹ ಮಾಡುತ್ತಿದ್ದಾರೆ. ಪ್ರತಿ ಮತದಾರರ ನೇರ ಸಂಪರ್ಕ ಸಾಧ್ಯವಾಗದೇ ಇದ್ದರೆ, ಅವರ ಬಂಧುಗಳು, ಹತ್ತಿರದ ಸ್ನೇಹಿತರ ಮೂಲಕ ಒತ್ತಡ ಹಾಕುವ ತಂತ್ರ ಅನುಸರಿಸಿದರು.

ವಾರ್ಡ್‌ಗಳಿಗೆ ಸರ್ಪಗಾವಲು:

ಪ್ರಮುಖರು ಸ್ಪರ್ಧಿಸಿರುವ ಕೆಲ ಪ್ರತಿಷ್ಠಿತ ವಾರ್ಡ್‌ಗಳಲ್ಲಿ ಬೆಂಬಲಿಗರು ಬೇರೆ ಅಭ್ಯರ್ಥಿಗಳ ಪ್ರಚಾರಕ್ಕೆ ಅಡ್ಡಗಾಲು ಹಾಕಿದ ಪ್ರಕರಣಗಳು ವರದಿಯಾಗಿವೆ. ಬೀದಿ ಬೀದಿಗಳಲ್ಲಿ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳುವ ಕೆಲ ಸ್ಥಳೀಯ ಮುಖಂಡರು ಬೇರೆ ಅಭ್ಯರ್ಥಿಗಳ ಚಲನವಲನ, ಪ್ರಚಾರದ ವೈಖರಿ ಮೇಲೆ ಹದ್ದಿನ ಕಣ್ಣು ನೆಟ್ಟಿದ್ದಾರೆ. ಮತದಾರರಿಗೆ ಯಾವುದೇ ಆಮಿಷ ಒಡ್ಡಿದರೂ ತಕ್ಷ ಣ ಆ ವಿಷಯವನ್ನು ಪೊಲೀಸರಿಗೆ ಮುಟ್ಟಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಗೆದ್ದವರು ಅದೇ ವಾರ್ಡ್‌ಗಳಿಂದ ಕಣಕ್ಕಿಳಿಯಲು ಈ ಬಾರಿಯ ಮೀಸಲಾತಿ ವ್ಯವಸ್ಥೆಯಿಂದಾಗಿ ಸಾಧ್ಯವಾಗದೇ ಬೇರೆ ವಾರ್ಡ್‌ಗಳಿಗೆ ವಲಸೆ ಹೋಗಿದ್ದಾರೆ. ಒಟ್ಟಾರೆಯಾಗಿ ಕಳೆದ ಬಾರಿ ಎರಡು ಪಕ್ಷ ಗಳ ನಡುವೆ ಇದ್ದ ಸ್ಪರ್ಧೆ ಈ ಬಾರಿ ಕಾಂಗ್ರೆಸ್‌, ಬಿಜೆಪಿ. ಜೆಡಿಎಸ್‌ ಪಕ್ಷ ಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಕಣದಲ್ಲಿ 53 ಅಭ್ಯರ್ಥಿಗಳು

ಈ ಬಾರಿ ಪಟ್ಟಣದ 18 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 17 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಸಿಳಿಸಿವೆ. ಈ ಹಿಂದೆ ಪಟ್ಟಣದಲ್ಲಿ ಜೆಡಿಎಸ್‌ ಸ್ಪರ್ಧಿಸದೇ ಇದ್ದು ಈ ಬಾರಿ ಜೆಡಿಎಸ್‌ ಪಕ್ಷ ದಿಂದ ಕೂಡ 5 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಉಳಿದಂತೆ 14 ಜನ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಒಟ್ಟು 53 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ