ಆ್ಯಪ್ನಗರ

ಅಕ್ರಮ ಮಳಿಗೆ ವಿತರಣೆ: ಕ್ರಮಕ್ಕೆ ಆಗ್ರಹ

ನಗರದ ಮುಸ್ಲಿಂ ಹಾಸ್ಟೆಲ್‌ ಕಟ್ಟಡ ಸಂಕೀರ್ಣದ ವಾಣಿಜ್ಯ ಮಳಿಗೆಗಳನ್ನು ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಸಿರಾಜ್‌ ಅಕ್ರಮವಾಗಿ ವಿತರಣೆ ಮಾಡಿದ್ದು, ಅವರ ವಿರುದ್ಧ ವಕ್ಫ್ ಸಮಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ದಸ್ತಗೀರ್‌ ಎಸ್‌. ಅಸಾದುಲ್ಲಾ ಆಗ್ರಹಿಸಿದರು.

Vijaya Karnataka 25 Nov 2018, 5:00 am
ದಾವಣಗೆರೆ : ನಗರದ ಮುಸ್ಲಿಂ ಹಾಸ್ಟೆಲ್‌ ಕಟ್ಟಡ ಸಂಕೀರ್ಣದ ವಾಣಿಜ್ಯ ಮಳಿಗೆಗಳನ್ನು ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಸಿರಾಜ್‌ ಅಕ್ರಮವಾಗಿ ವಿತರಣೆ ಮಾಡಿದ್ದು, ಅವರ ವಿರುದ್ಧ ವಕ್ಫ್ ಸಮಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ದಸ್ತಗೀರ್‌ ಎಸ್‌. ಅಸಾದುಲ್ಲಾ ಆಗ್ರಹಿಸಿದರು.
Vijaya Karnataka Web illegal shop distribution demand for action
ಅಕ್ರಮ ಮಳಿಗೆ ವಿತರಣೆ: ಕ್ರಮಕ್ಕೆ ಆಗ್ರಹ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸ್ಟೆಲ್‌ ಸಂಕೀರ್ಣದ ಡಿಡಿಪಿಐ ಕಚೇರಿ ಎದುರಿನ ಮಳಿಗೆಗಳನ್ನು ಬಹಿರಂಗ ಹರಾಜು ನಡೆಸದೇ, ಬಾಡಿಗೆ ಕರಾರು ಮಾಡಿಕೊಳ್ಳದೇ ವಿತರಣೆ ಮಾಡಲಾಗಿದೆ. ಈ ಮಳಿಗೆಗಳ ಬಾಡಿಗೆ ಹಣ ಒಂದು ವರ್ಷದಿಂದ ಬಾಕಿಯಿದ್ದು, 14.48 ಲಕ್ಷ ಬರಬೇಕಿದೆ. ತಿಂಗಳಿಗೆ 1.53 ಲಕ್ಷ ಬಾಡಿಗೆ ಹಣ ಬರುತ್ತಿದ್ದರೂ ಪಾಲಿಕೆಗೆ ಕಟ್ಟ ಬೇಕಾದ 16 ಲಕ್ಷ ಕಂದಾಯವನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಮೂರು ವರ್ಷಗಳ ಹಿಂದೆ ಸಿರಾಜ್‌ ಅವರನ್ನು ವಕ್ಫ್ ಬೋರ್ಡ್‌ಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆಗಿನಿಂದಲೂ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಮಾಹಿತಿ ಕಲೆ ಹಾಕಲು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದಕ್ಕೆ ಕೆಲ ಕಿಡಿಗೇಡಿಗಳು ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ನನಗೆ ರಕ್ಷಣೆಕೊಡಿ ಎಂದು ಎಸ್ಪಿಗೆ ಹೇಳಿದ್ದು ನ್ಯಾಯ ಸಿಕ್ಕಿಲ್ಲ ಎಂದು ವಿಷಾದಿಸಿದರು.

ಮುಖಂಡರಾದ ಅಕ್ಬರ್‌, ದೂದ್‌ಪೀರ್‌, ಟಿಪ್ಪುಸುಲ್ತಾನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ