ಆ್ಯಪ್ನಗರ

ಜೀಸಸ್‌ ಪ್ರೇಯರ್‌ ಹಾಲ್‌ಗೆ ಭೂಮಿ-ತಕರಾರು

ಅವರಗೆರೆಯಲ್ಲಿ ನಾಗರೀಕ ಸೌಲಭ್ಯಕ್ಕೆಂದು ಕಾಯ್ದಿರಿಸಿದ್ದ ಜಾಗವನ್ನು ಜೀಸಸ್‌ ಪ್ರೇಯರ್‌ ಹಾಲ್‌ ಟ್ರಸ್ಟ್‌ನವರಿಗೆ ನೀಡಲು ಮುಂದಾಗಿರುವ ಮಹಾನಗರ ಪಾಲಿಕೆಗೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಿಂದು ಜಾಗರಣ ವೇದಿಕೆ ತರಕಾರು ಅರ್ಜಿ ಸಲ್ಲಿಸಿದೆ.

Vijaya Karnataka 29 Jul 2018, 5:00 am
ದಾವಣಗೆರೆ : ಅವರಗೆರೆಯಲ್ಲಿ ನಾಗರೀಕ ಸೌಲಭ್ಯಕ್ಕೆಂದು ಕಾಯ್ದಿರಿಸಿದ್ದ ಜಾಗವನ್ನು ಜೀಸಸ್‌ ಪ್ರೇಯರ್‌ ಹಾಲ್‌ ಟ್ರಸ್ಟ್‌ನವರಿಗೆ ನೀಡಲು ಮುಂದಾಗಿರುವ ಮಹಾನಗರ ಪಾಲಿಕೆಗೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಿಂದು ಜಾಗರಣ ವೇದಿಕೆ ತರಕಾರು ಅರ್ಜಿ ಸಲ್ಲಿಸಿದೆ.
Vijaya Karnataka Web land dispute to jesus prayer hall
ಜೀಸಸ್‌ ಪ್ರೇಯರ್‌ ಹಾಲ್‌ಗೆ ಭೂಮಿ-ತಕರಾರು


ಜೀಸಸ್‌ ಪ್ರೇಯರ್‌ ಹಾಲ್‌ ಟ್ರಸ್ಟ್‌ ಅವರಗೆರೆಯಲ್ಲಿರುವ ಕಾಯ್ದಿರಿಸಿರುವ ಜಾಗವನ್ನು ಪ್ರಾರ್ಥನಾ ಮಂದಿರ ನಿರ್ಮಿಸಲು 30 ವರ್ಷದ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಾರ್ವಜನಿಕ ಪ್ರಕಟಣೆ ನೀಡಿ ಆಕ್ಷೇಪ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ವೇದಿಕೆ ಈ ತಕರಾರು ದಾಖಲಿಸಿದೆ.

ಈ ಗ್ರಾಮದ ಸನಂ 221/2, 10, 11,12ರಲ್ಲಿ ನಾಗರೀಕ ಸೌಲಭ್ಯಕ್ಕೆಂದು ಜಾಗ ಮೀಸಲಿರಿಸಲಾಗಿದೆ. ಟ್ರಸ್ಟ್‌ ಈ ಜಾಗವನ್ನು ಪ್ರಾರ್ಥನಾ ಮಂದಿರ ನಿರ್ಮಿಸಲು ಪರವಾನಗಿ ಕೇಳುತ್ತಿರುವುದರ ಹಿಂದೆ ದುರುದ್ದೇಶವಿದೆ. ಬಡವರಿಗೆ, ದೀನ ದಲಿತರಿಗೆ ಆಮಿಷ ತೋರಿಸಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳಿಸುವ ಹುನ್ನಾರ ನಡೆದಿದೆ ಎಂದು ನಂಬಲರ್ಹ ವಲಯದಿಂದ ತಿಳಿದು ಬಂದಿದೆ. ಹಾಗಾಗಿ ಈ ಜಾಗವನ್ನು ಟ್ರಸ್ಟ್‌ಗೆ ನೀಡಬಾರದು ಎಂದು ತಕಾರರು ಅರ್ಜಿಯಲ್ಲಿ ತಿಳಿಸಿಲಾಗಿದೆ.

ನಾಗರೀಕ ಸೌಲಭ್ಯಕ್ಕೆಂದು ಕಾಯ್ದರಿಸಿದ ಜಾಗವನ್ನು ಹೀಗೆ ಕ್ರಿಶ್ಚಿಯನ್‌ ಮಿಷನರಿಗೆ ನೀಡುವುದು ಮುನ್ಸಿಪಲ್‌ ಕಾನೂನಿಗೆ ವಿರುದ್ಧವಾಗಿದೆ. ಈ ಜಾಗದಲ್ಲಿ ಪಾರ್ಕ್‌, ಆಟದ ಮೈದಾನ, ಲೈಬ್ರರಿ, ವ್ಯಾಯಾಮ ಶಾಲೆ, ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಬಳಸಬೇಕು ಎಂದು ತಕರಾರು ಅರ್ಜಿಯಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ