ಆ್ಯಪ್ನಗರ

ಮೋದಿ, ಅಮಿತ್‌ ಶಾ, ಬಿಎಸ್‌ವೈ ಅಶ್ಲೀಲ ಫೋಟೋ ಪೋಸ್ಟ್‌; ಒಬ್ಬನ ಬಂಧನ

ಮೂವರೂ ನಾಯಕರ ಭಾವಚಿತ್ರಗಳನ್ನು ಎಡಿಟ್ ಮಾಡಿ ಬೇರೆ ಬೇರೆ ಪ್ರಾಣಿಗಳು ಹಾಗೂ ಮಹಿಳೆಯರ ಅಶ್ಲೀಲವಾದ ಫೋಟೊಗಳನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಈತ ಅಪ್‌ಲೋಡ್ ಮಾಡಿದ್ದ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ

Vijaya Karnataka Web 11 Aug 2020, 10:00 pm
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ, ಅಸಹ್ಯ ಫೋಟೊಗಳನ್ನು ಶೇರ್ ಮಾಡಿರುವ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Vijaya Karnataka Web ಅರೆಸ್ಟ್‌
ಅರೆಸ್ಟ್‌


ಹೊನ್ನಾಳಿ ತಾಲೂಕಿನ ಬೈರನಹಳ್ಳಿ ಗ್ರಾಮದ ನವೀನ ಜಿ.ಎಚ್. ಬಂಧಿತ.

ಈ ಮೂವರೂ ನಾಯಕರ ಭಾವಚಿತ್ರಗಳನ್ನು ಎಡಿಟ್ ಮಾಡಿ ಬೇರೆ ಬೇರೆ ಪ್ರಾಣಿಗಳು ಹಾಗೂ ಮಹಿಳೆಯರ ಅಶ್ಲೀಲವಾದ ಫೋಟೊಗಳನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಈತ ಅಪ್‌ಲೋಡ್ ಮಾಡಿದ್ದ.

ಶಿವಮೂರ್ತಿ ಎಂಬವರು ನೀಡಿದ ದೂರಿನ ಮೇರೆಗೆ ಸಿಇಎನ್‌ ಠಾಣೆಯ ಪೊಲೀಸರು ನವೀನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ