ಆ್ಯಪ್ನಗರ

ಮರಾಠ ಜನಾಂಗಕ್ಕೋಸ್ಕರ ನಿಗಮ, ಕರ್ನಾಟಕ ಬಂದ್‌ ಕೈಬಿಡಿ: ಬೈರತಿ ಬಸವರಾಜ್‌ ಮನವಿ

ರಾಜ್ಯ ಸರಕಾರದ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ನಡೆಯನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‌ನ್ನು ಕೈಬಿಡುವಂತೆ ಸಚಿವ ಬೈರತಿ ಬಸವರಾಜ್‌ ಮನವಿ ಮಾಡಿದ್ದಾರೆ. ನಿಗಮ ಕೇವಲ ಜನಾಂಗಕ್ಕಷ್ಟೇ, ಭಾಷೆಗಲ್ಲ ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

Vijaya Karnataka Web 4 Dec 2020, 1:13 pm
ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ (ಡಿಸೆಂಬರ್‌ 5) ಕರೆ ನೀಡಿರುವ ಕರ್ನಾಟಕ ಬಂದ್ ಅನ್ನು ಕೈ ಬಿಡುವಂತೆ ಸಚಿವ ಬೈರತಿ ಬಸವರಾಜ್ ಮನವಿ ಮಾಡಿದ್ದಾರೆ.
Vijaya Karnataka Web BYRATI BASAVARAJ
ಬೈರತಿ ಬಸವರಾಜ್‌, ಸಚಿವ (ಸಂಗ್ರಹ ಚಿತ್ರ)


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ರಾಜ್ಯದ ಮರಾಠ ಜನಾಂಗಕ್ಕೆ ನಿಗಮ ಮಾಡಿದ್ದಾರೆ. ಮರಾಠಿಗರು ಕರ್ನಾಟಕಕ್ಕೆ ನಿನ್ನೇ ಮೊನ್ನೆ ಬಂದಿಲ್ಲ, ಅನಾದಿ ಕಾಲದಿಂದಲೂ ಇಲ್ಲೇ ಇದ್ದಾರೆ ಎಂದರು.

ಭಾಷೆಗಾಗಿ ನಿಗಮ ಮಾಡಿಲ್ಲ, ಇದು ಜನಾಂಗಕ್ಕೋಸ್ಕರ ಮಾಡಿರುವ ನಿಗಮವಾಗಿದೆ. ಬೆಳಗಾವಿ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಮಾಡೋದು ಅಷ್ಟೊಂದು ಸಮಂಜಸವಲ್ಲ. ಗಡಿ ವಿಚಾರದಲ್ಲಿ, ಕನ್ನಡ ನಾಡು-ನುಡಿ ವಿಚಾರದಲ್ಲಿ ಧಕ್ಕೆಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಕುರುಬ ಹೋರಾಟಕ್ಕೆ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡೋದು: ಬೈರತಿ ಬಸವರಾಜ್‌ ಪ್ರಶ್ನೆ

ಸರಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆಯ ನಡೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ, ಕೆಲವೊಂದು ಕಡೆ ಕರ್ನಾಟಕ ಬಂದ್‌ಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಪೊಲೀಸ್‌ ಇಲಾಖೆ ಕೂಡ ಬಂದ್‌ಗೆ ಯಾವುದೇ ಅನುಮತಿ ನೀಡದಿರುವುದು ಡಿಸೆಂಬರ್‌ 5ರ ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು: ಕರ್ನಾಟಕ ಬಂದ್‌ಗೆ ಅನುಮತಿಯಿಲ್ಲ, ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ: ಕಮಲ್‌ ಪಂತ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ