ಆ್ಯಪ್ನಗರ

ಸ್ವಯಂಕೃತ ಅಪರಾಧದಿಂದ ವಿಶ್ವನಾಥ್‌ಗೆ ಹಾನಿ: ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

ಸ್ವಯಂಕೃತ ಅಪರಾಧದಿಂದ ವಿಶ್ವನಾಥ್‌ ರಾಜಕೀಯದಲ್ಲಿ ಹಾಳಾಗಿದ್ದಾರೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಶಾಸಕ ವಿಶ್ವನಾಥ್‌ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.

Vijaya Karnataka Web 30 Jun 2018, 9:19 pm
ದಾವಣಗೆರೆ: ಸ್ವಯಂಕೃತ ಅಪರಾಧದಿಂದ ವಿಶ್ವನಾಥ್‌ ರಾಜಕೀಯದಲ್ಲಿ ಹಾಳಾಗಿದ್ದಾರೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಶಾಸಕ ವಿಶ್ವನಾಥ್‌ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web Kaginele


ಹರಿಹರ ಸಮೀಪದ ಬೆಳ್ಳೂಡಿಯ ಶಾಖಾ ಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ವಿಶ್ವನಾಥ್‌ ಸಮಾಜದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ನಮ್ಮನ್ನು ಟೀಕೆ ಮಾಡುವ ಜೊತೆಗೆ ಸಮಾಜವನ್ನು ಅವರು ಟೀಕೆ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ ಎಂದರೆ ನಾವು ಏನು ಮಾತನಾಡುವುದಿಲ್ಲ. ನಾವು ಅವರ ಬಗ್ಗೆ ಟೀಕೆ ಮಾಡಿಲ್ಲ. ಅವರಿಗೆ ನೋವಾದಾಗ ನಾವು ಸಮಾಧಾನ ಹೇಳಿದ್ದೇವೆ.

ಅವರ ವೈಯಕ್ತಿಕ ಪ್ರತಿಷ್ಠೆಗಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಿಶ್ವನಾಥ ಕಾಂಗ್ರೆಸ್‌ ಹೈಕಮಾಂಡಗೆ ಪತ್ರ ಬರೆದಿದ್ದರು. ಆ ಪತ್ರವನ್ನು ನನಗೆ ಸಿದ್ದರಾಮಯ್ಯ ತೋರಿಸಿದ್ದರು. ಬೇರೆ ಯಾವುದೇ ಸಮಾಜದ ಪ್ರಮುಖರು ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಲಿಲ್ಲ. ಆದ್ರೆ ವಿಶ್ವನಾಥ ಮಾತ್ರ ಹೇಳಿಕೆ ನೀಡುತ್ತಲೇ ಹೋದ್ರು.

ವಿಶ್ವನಾಥ್‌ ನಮ್ಮ ಸಮಾಜದ ನಾಯಕರು, ಆನೆ ಕೆರೆಯಲ್ಲಿ ಸ್ನಾನ ಮಾಡುತ್ತದೆ. ದಡಕ್ಕೆ ಬಂದ ಮಣ್ಣನ್ನು ತನ್ನ ತಲೆಯ ಮೇಲೆ ಎತ್ತಿ ಹಾಕಿಕೊಳ್ಳುತ್ತದೆ. ಹೀಗಾಗಿ ಅವರು ಸಹ ತಮ್ಮ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಮೇಲೆ, ಮಠದ ಮೇಲೆ ಹಾಕುತ್ತಿದ್ದಾರೆ ಇದು ಸರಿಯಲ್ಲ. ರಾಜಕೀಯದಲ್ಲಿ ನಾನು ಮೂಗು ತೂರಿಸಿಲ್ಲ.

ಘಟಸರ್ಪ:
ವಿಶ್ವನಾಥ್ ಒಂದು ಕಾಲದಲ್ಲಿ ದೇವೇಗೌಡರನ್ನು ಘಟಸರ್ಪ ಎಂದು ಕರೆದಿದ್ದರು. ಸಿದ್ದರಾಮಯ್ಯರನ್ನು ಕಪ್ಪೆ ಎಂದಿದ್ದರು. ಈಗ ಅವರು ಎಲ್ಲಿದ್ದಾರೆ ಎಂಬುದನ್ನು ತಿಳಿಸಬೇಕು. ಕುರುಬ ಸಮಾಜದ ಮಠ ಕಟ್ಟುವಲ್ಲಿ ವಿಶ್ವನಾಥ್‌ ಕೆಲ್ಸಾ ಮಾಡಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ನಾನು ಯಾರ ಪರವಾಗಿ ಕೆಲ್ಸಾ ಮಾಡಿಲ್ಲ. ಈಶ್ವರಪ್ಪರಿಗೆ ಬಿಜೆಪಿಯಲ್ಲಿ ತೊಂದರೆ ಆದಾಗ ಮಾತಾಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ