ದಾವಣಗೆರೆ: ರೈಲು ನಿಲ್ದಾಣಗಳಲ್ಲಿ ನಡೆಯುವ ಅಪರಾಧಗಳನ್ನು ತಗ್ಗಿಸಲು ರೈಲ್ವೆ ಪೊಲೀಸ್ ಇಲಾಖೆ ಪ್ರಯಾಣಿಕರಿಗೆ ವಿಸಿಟಿಂಗ್ ಕಾರ್ಡ್ ಕೊಡುವ ಮೂಲಕ ಹೊಸ ಮಾದರಿಯೊಂದು ಕಂಡುಕೊಂಡಿದೆ. ರೈಲ್ವೆ ಹಳಿ ಹಾಗೂ ನಿಲ್ದಾಣಗಳಲ್ಲಿ ಕಳ್ಳತನ, ವಂಚನೆ, ಕೊಲೆ ಹಾಗೂ ದರೋಡೆ ಸೇರಿದಂತೆ ಇನ್ನಿತರ ಕ್ರೈಂ ಚಟುವಟಿಕೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಅಲ್ಲದೆ, ಪ್ರಯಾಣಿಕರ ಜೊತೆ ನಿರಂತರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸ್ ನಿರಂತರವಾಗಿ ಪ್ರಯಾಣಿಕರಿಗೆ ವಿಸಿಟಿಂಗ್ ಕಾರ್ಡ್ ನೀಡುತ್ತದೆ.
ವಿಸಿಟಿಂಗ್ ಕಾರ್ಡ್ಗಳನ್ನು ಪ್ರಯಾಣಿಕರಿಗೆ ವಿತರಿಸುವ ಮೂಲಕ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ನಗರದ ರೈಲ್ವೇ ಪೊಲೀಸರು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.
ರೈಲ್ವೇ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಸ್ಪಿ ಸಿರಿಗೌರಿ ಪ್ರಾಯೋಗಿಕ ಹಂತವಾಗಿ ಬೆಂಗಳೂರು, ಯಶವಂತಪುರ ಹಾಗೂ ಕಂಟ್ಮೊನೆಂಟ್ನಲ್ಲಿ ಮೊದಲು ಜಾರಿಗೊಳಿಸಲಾಗಿದ್ದು, ಬಂಗಾರಪೇಟೆ, ಮಂಡ್ಯ, ಮೈಸೂರು, ಹಾಸನ ಹಾಗೂ ಅರಸಿಕೇರೆಯಲ್ಲಿ ನಡೆದಿದೆ. ಈಗ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದೆ.
ಈ ವಿಸಿಟಿಂಗ್ ಕಾರ್ಡ್ನಲ್ಲಿ ಹೆಸರು, ಪೋನ್ ನಂಬರ್ ಇದ್ದು, ‘ಸದಾ ನಿಮ್ಮ ಸೇವೆಯಲ್ಲಿ’ ಇಂಗ್ಲೀಷ್ ನಲ್ಲಿ ‘ಹ್ಯಾಪಿ ಟೂ ಹೆಲ್ಪ್’ ಶೀರ್ಷಿಕೆ ಇದೆ. ಅಲ್ಲದೇ ವಾಟ್ಸಾಪ್ ಮೂಲಕ ಈ ವಿಸಿಟಿಂಗ್ ಕಾರ್ಡ್ನ್ನು ಹೆಚ್ಚೆಚ್ಚು ಪ್ರಯಾಣಿಕರಿಗೆ ಫಾರ್ವಡ್ ಮಾಡಲಾಗುತ್ತಿದೆ.
ಈ ವಿಸಿಟಿಂಗ್ ಕಾರ್ಡ್ನಿಂದ ಅಪರಾಧ ಮಾಹಿತಿ ಜೊತೆಗೆ ಪ್ರಯಾಣದ ಸಂದರ್ಭಗಳಲ್ಲಿ ಏನಾದರೂ ತೊಂದರೆ ಉಂಟಾದರೆ ಅದರಲ್ಲಿರುವ ನಂಬರ್ಗೆ ಕರೆ ಮಾಡಿದರೆ ರೈಲ್ವೆ ಪೊಲೀಸರು ಕೂಡಲೇ ಸ್ಪಂದಿಸಲಿದ್ದಾರೆ.
ಒಂದು ವೇಳೆ ವಸ್ತುಗಳು ಕಳುವಾದರೆ ಆಥವಾ ಗೊಂದಲವಿದ್ದರೂ ಪ್ರಯಾಣಿಕರು ಕರೆ ಮಾಡಬಹುದಾಗಿದೆ. ಒಟ್ಟಾರೆ ಈ ಮೂಲಕ ಪ್ರಯಾಣಿಕರಲ್ಲಿ ಮಾನಸಿಕ ಧೈರ್ಯ ತುಂಬುವ ಜೊತೆಗೆ ಹೆಚ್ಚಿನ ಬಾಂಧವ್ಯ ಮೂಡಿಸಲು ಈ ವಿಸಿಟಿಂಗ್ ಕಾರ್ಡ್ ಸಹಕಾರಿಯಾಗಲಿದೆ. ಅಲ್ಲದೇ ಪೊಲೀಸರ ವಿನೂತನ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.