ಆ್ಯಪ್ನಗರ

ಮತದಾರನ ಓಲೈಕೆಗೆ ಬಲಾಬಲ ಪ್ರದರ್ಶನ

ಬಹಿರಂಗ ಪ್ರಚಾರಕ್ಕೆ ತೆರೆ ಮುನ್ನ ಗುರುವಾರ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಧುಮುಕಿದ್ದವು. ಅಭ್ಯರ್ಥಿಗಳು ರೋಡ್‌ ಶೋ ಮೂಲಕ ಬಲಾ ಬಲ ಪ್ರದರ್ಶಿಸಿ ಮತದಾರರ ಕೊನೇ ಕ್ಷಣದ ಓಲೈಕೆಗೆ ಮುಂದಾದರು. ಕೊನೇ ದಿನ ಬಿಜೆಪಿಯ ಉತ್ತರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಪರವಾಗಿ ಚಿತ್ರನಟಿ ಮಯೂರಿ, ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಚಿತ್ರನಟ ಶ್ರೀನಗರ ಕಿಟ್ಟಿ ಸ್ಟಾರ್‌ ಪ್ರಚಾರಕರಾಗಿ ಕಣಕ್ಕೆ ಕೊನೇ ಕ್ಷಣದಲ್ಲಿ ಕಿಚ್ಚು ಹಚ್ಚಿದರು.

Vijaya Karnataka 12 May 2018, 2:52 pm
ದಾವಣಗೆರೆ : ಬಹಿರಂಗ ಪ್ರಚಾರಕ್ಕೆ ತೆರೆ ಮುನ್ನ ಗುರುವಾರ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಧುಮುಕಿದ್ದವು. ಅಭ್ಯರ್ಥಿಗಳು ರೋಡ್‌ ಶೋ ಮೂಲಕ ಬಲಾ ಬಲ ಪ್ರದರ್ಶಿಸಿ ಮತದಾರರ ಕೊನೇ ಕ್ಷಣದ ಓಲೈಕೆಗೆ ಮುಂದಾದರು. ಕೊನೇ ದಿನ ಬಿಜೆಪಿಯ ಉತ್ತರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಪರವಾಗಿ ಚಿತ್ರನಟಿ ಮಯೂರಿ, ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಚಿತ್ರನಟ ಶ್ರೀನಗರ ಕಿಟ್ಟಿ ಸ್ಟಾರ್‌ ಪ್ರಚಾರಕರಾಗಿ ಕಣಕ್ಕೆ ಕೊನೇ ಕ್ಷಣದಲ್ಲಿ ಕಿಚ್ಚು ಹಚ್ಚಿದರು.
Vijaya Karnataka Web powerful performance for voter turnout
ಮತದಾರನ ಓಲೈಕೆಗೆ ಬಲಾಬಲ ಪ್ರದರ್ಶನ


ಕಳೆದ ಕೆಲ ದಿನಗಳಿಂದ ಚುನಾವಣೆ ಪ್ರಚಾರದ ಅಬ್ಬರಗಳೇ ಎಲ್ಲೆಡೆ ತುಂಬಿ ಹೋಗಿದ್ದವು. ಗುರುವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹಾಗಾಗಿ ಅಭ್ಯರ್ಥಿಗಳು ತಮ್ಮ ಸಾವಿರಾರು ಹಿಂಬಾಲಕರ ಜತೆಗೆ ಮತ ಬೇಟೆಗೆ ರೋಡ್‌ ಶೋ ನಡೆಸಿದರು.

ಚಿತ್ರನಟಿ ಮಯೂರಿ ಪ್ರಚಾರ

ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಪರ ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ಚಿತ್ರನಟಿ ಮಯೂರಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು. ಬೆಳಗ್ಗೆ 11 ಕ್ಕೆ ಇಲ್ಲಿನ ರಾಮ್‌ ಅಂಡ್‌ ಕೋ ವೃತ್ತದಿಂದ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಜನರತ್ತ ಕೈ ಬೀಸುತ್ತಾ, ಮಕ್ಕಳಿಗೆ ಪ್ಲಯಿಂಗ್‌ ಕಿಸ್‌ ಎಸೆಯುತ್ತಾ ರೋಡ್‌ ಶೋ ನಡೆಸಿದರು. ಇಲ್ಲಿಂದ ಆರಂಭವಾದ ಶೋ ಎಂಸಿಸಿ ಬಿ, ಎ ಬ್ಲಾಕ್‌, ವಿನೋಬ ನಗರ ಸೇರಿದಂತೆ ಈ ಭಾಗದ ಬಡಾವಣೆಗಳಲ್ಲಿ ಸಂಚರಿಸಿತು.

ನಂತರ ಮಧ್ಯಾಹ್ನ 3 ಕ್ಕೆ ನಿಟುವಳ್ಳಿಯ ದುಗ್ಗಮ್ಮ ದೇವಳದಿಂದ ರೋಡ್‌ ಶೋ ನಡೆಸಿದರು. ಉತ್ತರ ಭಾಗದ ನಿಟ್ಟುವಳ್ಳಿ, ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್‌ ಬಡಾವಣೆಗಳಲ್ಲಿ ರೋಡ್‌ ಶೋ ನಡೆಸಲಾಯಿತು. ಮಯೂರಿಗೆ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌, ಮಾಜಿ

ಎಸ್‌ಎಸ್‌, ಎಸ್‌ಎಸ್‌ಎಂ ರೋಡ್‌ ಶೋ

ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಜತೆಯಾಗಿ ಅಪಾರ ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿದರು. ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಳದಲ್ಲಿ ಪೂಜೆ ಸಲ್ಲಿಸಿದ ನಂತರ ರೋಡ್‌ ಶೋ ಆರಂಭವಾಯಿತು. ಇಲ್ಲಿಂದ ಎಚ್‌ಕೆಆರ್‌ ಸರ್ಕಲ್‌, ಲೆನಿನ್‌ ಸರ್ಕಲ್‌, ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಪಿಜೆ ಬಡಾವಣೆ, ಪಿಬಿ ರಸ್ತೆ, ವಿನೋಬನಗರ ಸೇರಿ ಎರಡೂ ಕ್ಷೇತ್ರಗಳ ಬಡಾವಣೆಗಳಲ್ಲಿ ಮತ ಯಾಚಿಸಿದರು.

ಬೈಕ್‌ ರಾರ‍ಯಲಿ:

ಇದಕ್ಕೂ ಮುನ್ನ ಸಚಿವ ಮಲ್ಲಿಕಾಜುನ್‌ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಬೈಕ್‌ ರಾರ‍ಯಲಿ ನಡೆಸಲಾಯಿತು. ಇಲ್ಲಿನ ಒಳಾಂಗಣ ಕ್ರೀಡಾಂಗಣದಿಂದ ಆರಂಭವಾದ ರಾರ‍ಯಲಿ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಮತ ಯಾಚಿಸಲಾಯಿತು.

ಎಂಟು ಕ್ಷೇತ್ರ ಗೆಲ್ಲುತ್ತೇವೆ

ಜಿಲ್ಲೆಯಲ್ಲಿ ಹಿಂದಿಗಿಂತ ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚಿನ ಪೂರಕ ವಾತಾವರಣವಿದೆ. ಕಳೆದ ಬಾರಿ ಏಳು ಕ್ಷೇತ್ರದಲ್ಲಿ ಗೆದ್ದಿದ್ದೆವು, ಈ ಬಾರಿ ಎಂಟೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಕಾಂಗ್ರೆಸ್‌ ಸರಕಾರ ಮಾಡಿರುವ ಜನಪರ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದರು. ನಾವು ಹೆಚ್ಚಿನ ಮತದಲ್ಲಿ ಗೆಲ್ಲುತ್ತೇವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ