ಆ್ಯಪ್ನಗರ

ಗುಳೇ ತಡೆ, ಕುಡಿವ ನೀರಿಗೆ ಆದ್ಯತೆ

ಲೋಕಸಭೆ ಚುನಾವಣೆ ಜತೆಗೆ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ, ವಲಸೆ ತಡೆಯಲು ಗ್ರಾಮಸ್ಥರಿಗೆ ಖಾತ್ರಿಯಡಿ ಕೆಲಸ ಕೊಡಲು ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದಾಗಿ ನೂತನ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜೇಂದ್ರ ತಿಳಿಸಿದರು.

Vijaya Karnataka 23 Feb 2019, 5:00 am
ದಾವಣಗೆರೆ : ಲೋಕಸಭೆ ಚುನಾವಣೆ ಜತೆಗೆ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ, ವಲಸೆ ತಡೆಯಲು ಗ್ರಾಮಸ್ಥರಿಗೆ ಖಾತ್ರಿಯಡಿ ಕೆಲಸ ಕೊಡಲು ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದಾಗಿ ನೂತನ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜೇಂದ್ರ ತಿಳಿಸಿದರು.
Vijaya Karnataka Web priority is preferred for drinking water
ಗುಳೇ ತಡೆ, ಕುಡಿವ ನೀರಿಗೆ ಆದ್ಯತೆ


ನಗರದ ಜಿಪಂ ಕಚೇರಿಯಲ್ಲಿ ಶುಕ್ರವಾರ ಸಿಇಒ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ''ಇದೇ ಮೊದಲ ಬಾರಿಗೆ ಜಿಪಂ ಸಿಇಒ ಆಗಿ ನೇಮಕಗೊಂಡಿದ್ದೇನೆ. ಮೊದಲು ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಕುಡಿವ ನೀರಿನ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. ಕುಡಿವ ನೀರಿನ ಸಮಸ್ಯೆ ಬಾರದಂತೆ ತಡೆಯಲು ಚೆಕ್‌ಡ್ಯಾಂ, ಹಳ್ಳಗಳಲ್ಲಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೀಗಾದರೆ ಮಳೆಗಾಲ ಸೇರಿದಂತೆ ಇನ್ನಿತರ ಕಾಲಗಳಲ್ಲಿ ಮಳೆ ಬಂದರೆ ಇವುಗಳು ತುಂಬಿಕೊಳ್ಳುತ್ತದೆ. ಹೀಗಾದಾಗ ಬೋರ್‌ವೆಲ್‌ ರೀಚಾರ್ಜ್‌ ಆಗಿ ನಮಗೆ 2ರಿಂದ 3 ವರ್ಷ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ. ಇನ್ನು ಜಗಳೂರು ಸೇರಿದಂತೆ ಇನ್ನಿತರ ಕಡೆ ವಲಸೆ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ವಲಸೆ ಹೋಗುವ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಖಾತರಿಯಲ್ಲಿ ಕೆಲಸ ಕೊಡಿಸಲಾಗುವುದು ಎಂದರು.

ಇನ್ನು ಖಾತರಿಯಲ್ಲಿ ಕೆಲಸ ಮಾಡಿದವರಿಗೆ ಜಿಲ್ಲೆಯಲ್ಲಿ 3.24 ಕೋಟಿ ಹಣ ಬರಬೇಕಾಗಿದ್ದು, ಬಂದ ನಂತರ ಶೀಘ್ರವೇ ಫಲಾನುಭವಿಗಳ ಖಾತೆಗೆ ಹಾಕಲಾಗುವುದುಎಂಎಂದರು.

ಸಿಇಒ ಸ್ವವಿವರ
ಬೆಂಗಳೂರು ಮೂಲದ ಸಿಇಒ ಬಸವರಾಜೇಂದ್ರ 1998ರ ಐಎಎಸ್‌ ಬ್ಯಾಚ್‌ನವರಾಗಿದ್ದು, ಬೆಂಗಳೂರಿನ ಯುಎಸ್‌ಇ ಕಾಲೇಜಿನಲ್ಲಿ ಬಿಇ ಎಲೆಕ್ಟ್ರಾನಿಕ್ಸ್‌ ಮಾಡಿದ್ದಾರೆ. ಮೊದಲು ಮಂಗಳೂರು, ಜಮಖಂಡಿ, ತಿಪಟೂರಿನಲ್ಲಿ ಎಸಿಯಾಗಿ, ಬಳ್ಳಾರಿ ಗಣಿ ತನಿಖಾ ದಳದ ಉಪ ಕಾರ್ಯದರ್ಶಿ, ಕ್ಯೂನಿಕ್ಸ್‌ ನಿರ್ದೇಶಕರಾಗಿ, ಬಿಡಿಎನಲ್ಲೂ ಕೆಲಸ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ