ಆ್ಯಪ್ನಗರ

ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಸೌಲಭ್ಯಕ್ಕಾಗಿ ಪ್ರತಿಭಟನೆ

ರಾಜ್ಯಾದ್ಯಂತ ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 23 Jul 2019, 5:00 am
ದಾವಣಗೆರೆ : ರಾಜ್ಯಾದ್ಯಂತ ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web protest for the convenience of sc and st hostels
ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಸೌಲಭ್ಯಕ್ಕಾಗಿ ಪ್ರತಿಭಟನೆ


ಇಲ್ಲಿನ ಡಿಸಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಅಲ್ಲಿ ಪ್ರತಿಭಟನೆ ನಡೆಸಿ ನಂತರ ಡಿಸಿಗೆ ಮನವಿ ಸಲ್ಲಿಸಿದರು.

ದಸಂಸ ಅಂಬೇಡ್ಕರ್‌ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ಸೂತ್ರಗಳೊಂದಿಗೆ ನಾಡಿನಾದ್ಯಂತ ದಲಿತ ಸಮುದಾಯಕ್ಕೆ ಶಿಕ್ಷಣ ಕೊಡಿಸಲು ಹಲವಾರು ಹೋರಾಟ ರೂಪಿಸಿದೆ. ಹೋರಾಟದ ಫಲವಾಗಿ ಹಾಸ್ಟೆಲ್‌ಗಳನ್ನು ಆರಂಭಿಸಲಾಯಿತು. ಆದರೆ, ಈ ಹಾಸ್ಟೆಲ್‌ಗಳಿಗೆ ಸರಕಾರ ಈವರೆಗೂ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ರಾಜ್ಯಾದ್ಯಂತ 30-40 ವರ್ಷಗಳ ಹಿಂದೆ ಕಟ್ಟಿರುವ ಹಳೆಯ ಹಾಸ್ಟೆಲ್‌ ಕಟ್ಟಡಗಳನ್ನು ನವೀಕರಿಸುವ ಬದಲು ಹೊಸ ವಿನ್ಯಾಸ ತಯಾರಿಸಿ ಮಾದರಿ ಕಟ್ಟಡಗಳನ್ನು ನಿರ್ಮಿಸಬೇಕು. ಅವೈಜ್ಞಾನಿಕವಾಗಿ ಅಡುಗೆ ಕೆಲಸ ಮಾಡುತ್ತಿರುವವರಿಗೆ ನಿಯಮ ಬಾಹಿರವಾಗಿ ಜೂನಿಯರ್‌ ವಾರ್ಡನ್‌ ಹುದ್ದೆ ನೀಡಿ ಮೂರ್ನಾಲ್ಕು ಹಾಸ್ಟೆಲ್‌ಗಳ ನಿರ್ವಹಣೆ ಜವಾಬ್ಧಾರಿ ನೀಡಿರುವುದು ಸರಿಯಲ್ಲ. ದಲಿತ ವಿದ್ಯಾರ್ಥಿಗಳ ವಿದ್ಯಾರ್ಜನೆ ಕುಂಠಿತವಾಗುತ್ತಿರುವುದರಿಂದ ಜೂನಿಯರ್‌ ವಾರ್ಡನ್‌ಗಳ ಹುದ್ದೆಯನ್ನು ರದ್ದು ಮಾಡಿ ನಿಯಮಾನುಸಾರ ಅರ್ಹ ಪದವೀಧರರನ್ನು ನೇಮಕ ಮಾಡಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡಿರುವ ಪ್ರೋತ್ಸಾಹ ಧನವನ್ನು ಮೂರು ವರ್ಷದಿಂದ ತಡೆ ಹಿಡಿದಿದ್ದು ಕೂಡಲೇ ಬಿಡುಗಡೆ ಮಾಡಬೇಕು, ವಿದ್ಯಾರ್ಥಿ ವೇತನ ನೇರ ಖಾತೆಗೆ ಜಮೆ ಮಾಡಬೇಕು ಸೇರಿ 11 ಬೇಡಿಕೆ ಈಡೇರಿಸಲು ಮನವಿಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಸತೀಶ್‌ ಬಾಡಾ ಮುಖಂಡರಾದ ಎಂ. ಎಚ್‌. ಬಸವರಾಜ, ಕಬೇರಪ್ಪ, ರಾಘವೇಂದ್ರ, ವಿಶ್ವನಾಥ, ಅಣ್ಣಪ್ಪ, ಪ್ರಕಾಶ್‌, ಡಿ. ಆಂಜಿನಪ್ಪ, ಶಶಿನಾಯ್ಕ, ಅಭಿ, ವೀರೇಶ್‌ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ