ಆ್ಯಪ್ನಗರ

ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ

ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದರು.

Vijaya Karnataka 25 Jun 2019, 5:00 am
ಚನ್ನಗಿರಿ : ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದರು.
Vijaya Karnataka Web protests demanding forest cover
ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ


ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ರೈತರು, ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿ, ತಾಲೂಕಿನ ಚಿಕ್ಕಾಸಂದಿ, ಚಿಕ್ಕಮಳಲಿ, ಉಬ್ರಾಣಿ, ಖಗ್ಗಿ, ಗೌರಾಪುರ, ಮುಗುಳೇಹಳ್ಳಿ, ಶಂಕರಿಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿದಿನವು ಆನೆಗಳ ದಾಳಿ ನಡೆದಿದ್ದು, ಅಡಕೆ ಮತ್ತು ಬಾಳೆ ತೋಟಗಳು ಸಂಪೂರ್ಣ ಹಾಳಾಗುತ್ತಿದೆ. ರೈತರು ರಾತ್ರಿ ವೇಳೆ ಅಡ್ಡಾಡಲು ಭಯ ಪಡುವಂತಾಗಿದೆ. ಭಾನುವಾರ ಚಿಕ್ಕಾಸಂದಿ ಗ್ರಾಮದ ಧನಂಜಯ ಎಂಬುವರ ತೋಟಕ್ಕೆ ನುಗ್ಗಿರುವ ಆನೆ ಮೋಟರ್‌ ಸ್ಟಾರ್ಟರ್‌ ಸೇರಿ ಎಲ್ಲಾ ವಸ್ತುಗಳನ್ನು ತುಳಿದು ಹಾಳು ಮಾಡಿದೆ ಎಂದು ತಿಳಿಸಿದರು.

ಕಾಡಿನ ಭಾಗದಲ್ಲಿ ನಿರ್ಮಾಣ ಮಾಡಿರುವಂತಹ ಇಪಿಟಿ ಗುಂಡಿಗಳು ಮಳೆಯ ನೀರಿನಿಂದ ಮುಚ್ಚಿ ಹೋಗಿದ್ದು, ಪ್ರಾಣಿಗಳು ಸರಾಗವಾಗಿ ಗ್ರಾಮದ ಒಳಗಿನ ತೋಟಗಳಿಗೆ ಬಂದು ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆಯಿಂದ ಸಹಾಯ ಧನ ನೀಡುತ್ತಿದ್ದರೂ ಅದು ರೈತರಿಗೆ ಆಗಿರುವ ಹಾನಿಯ ಕನಿಷ್ಟ ಭಾಗವನ್ನು ತುಂಬುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ತೋಟಗಳನ್ನು ಹಾಳು ಮಾಡುತ್ತಿರುವ ಆನೆಗಳನ್ನು ತಕ್ಷ ಣವೇ ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಲುಕು ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಪದಾಧಿಕಾರಿಗಳಾದ ದೋಳೇರ ಗದ್ದಿಗೇಶ್‌, ನಾಗೇನಹಳ್ಳಿ ಹಾಲಪ್ಪ, ಜಿ.ಕೃಷ್ಣಪ್ಪ, ಜಯ್ಯಪ್ಪ , ಮಲ್ಲಿಕಾರ್ಜುನ್‌ ಹಾಗೂ ರೈತರು ಪಾಲ್ಗೊಂಡಿದ್ದರು.

ಆನೆಗಳ ಹಾವಳಿ ಮತ್ತು ಹಿಡಿಯಲು ಮೇಲಾಧಿಕಾರಿಗಳಿಗೆ ಈಗಾಗಲೇ ಪತ್ರವನ್ನು ಬರೆಯಲಾಗಿದೆ. ಅದರಂತೆ ಸರಕಾರದಿಂದ ಆದೇಶ ಬಂದ ನಂತರ ಆನೆ ಕ್ಯಾಂಪ್‌ನ ಮಾವುತರು ಸಿದ್ಧವಾದ ಕೂಡಲೇ ಕಾರ್ಯಾಚರಣೆ ಪ್ರಾರಂಭ ಮಾಡಲಾಗುವುದು.
- ದಿನೇಶ್‌, ಚನ್ನಗಿರಿ ವಲಯಾರಣ್ಯಾಧಿಕಾರಿ

ನಮ್ಮ ಭಾಗದಲ್ಲಿ ಆನೆಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಕಾರಕ್ಕೆ ಮತ್ತು ಅರಣ್ಯ ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗನೆ ಅರಣ್ಯ ಇಲಾಖೆಗೆ ಆದೇಶ ದೊರಕಲಿದೆ.
- ಮಾಡಾಳ್‌ ವಿರುಪಾಕ್ಷ ಪ್ಪ, ಶಾಸಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ