ಆ್ಯಪ್ನಗರ

ಆರ್‌ಟಿಇ ಶುಲ್ಕ ಬಿಡುಗಡೆ ಆಗದಿದ್ದರೆ ಜು.17ಕ್ಕೆ ಪ್ರತಿಭಟನೆ

ಆರ್‌ಟಿಇ ಶುಲ್ಕ ಬಾಕಿ ಹಣ ವಾರದೊಳಗೆ ಬಿಡುಗಡೆ ಮಾಡದಿದ್ದರೇ ಜುಲೈ 17ರಂದು ನಗರದ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಲು ಜಿಲ್ಲಾ ಖಾಸಗಿ ಅನುದಾನ ರಹಿತ ಆರ್‌ಟಿಇ ಶಾಲೆಗಳ ಮತ್ತು ಪೋಷಕರ ಸಂಘ ನಿರ್ಧರಿಸಿದೆ.

Vijaya Karnataka 1 Jul 2019, 5:00 am
ದಾವಣಗೆರೆ : ಆರ್‌ಟಿಇ ಶುಲ್ಕ ಬಾಕಿ ಹಣ ವಾರದೊಳಗೆ ಬಿಡುಗಡೆ ಮಾಡದಿದ್ದರೇ ಜುಲೈ 17ರಂದು ನಗರದ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಲು ಜಿಲ್ಲಾ ಖಾಸಗಿ ಅನುದಾನ ರಹಿತ ಆರ್‌ಟಿಇ ಶಾಲೆಗಳ ಮತ್ತು ಪೋಷಕರ ಸಂಘ ನಿರ್ಧರಿಸಿದೆ.
Vijaya Karnataka Web protests on july 17 if rte fee is not released
ಆರ್‌ಟಿಇ ಶುಲ್ಕ ಬಿಡುಗಡೆ ಆಗದಿದ್ದರೆ ಜು.17ಕ್ಕೆ ಪ್ರತಿಭಟನೆ


ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜಿಲ್ಲಾ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜು.10ರೊಳಗೆ ತಾಲೂಕು ಮಟ್ಟದ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವುದು ಮತ್ತು ಆಯಾ ಜಿಲ್ಲೆಯ ಸಂಸದರು, ತಾಲೂಕು ಶಾಸಕರಿಗೂ ಮನವಿ ಸಲ್ಲಿಸಿ ಅಧಿವೇಶನದಲ್ಲಿ ಚರ್ಚಿಸಲು ಒತ್ತಡ ಹೇರಲು ತೀರ್ಮಾನಿಸಲಾಯಿತು.

ಜಿಲ್ಲಾ ಸಂಘದ ಅಧ್ಯಕ್ಷ ಅಣಬೇರು ಶಿವಮೂರ್ತಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಅವರಿಗೆ ಸಂಘದಿಂದ ಮನವಿ ಸಲ್ಲಿಸಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರಂತೆ ಆರ್‌ಟಿಇ ಶುಲ್ಕ ಬಾಕಿ ಹಣ ವಾರದೊಳಗೆ ಬಿಡುಗಡೆ ಮಾಡದಿದ್ದರೇ ಜು.17ರಂದು ನಗರದ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅನುದಾನ ಬಾರದೆ ಸಮಸ್ಯೆ:

ಅಂದು ನಗರದಲ್ಲಿ ಜಿಲ್ಲೆಯ ಖಾಸಗಿ ಶಾಲೆಗಳ ಮುಖ್ಯಸ್ಥರು ಮತ್ತು ಪೋಷಕರು ಸೇರಿ ಪ್ರತಿಭಟನೆ ನಡೆಸಲಾಗುತ್ತದೆ. ಆರ್‌ಟಿಇ ಹಣ ಬರದಿರುವುದರಿಂದ ಶಾಲೆಯ ಆಡಳಿತ ಮಂಡಳಿಯವರು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಒಂದು ಶಾಲೆಯಲ್ಲಿ ಕನಿಷ್ಠ 20ರಿಂದ 200 ಮಕ್ಕಳವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪೋಷಕರಿಂದಲೂ ಹಣ ಕಟ್ಟಿಸಿಕೊಳ್ಳಲಾಗದೆ ಸರಕಾರದಿಂದಲೂ ಅನುದಾನ ಬಾರದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದರು.

ಸುಪ್ರಿಂಗೆ ಮರು ಅರ್ಜಿ:

ಈಗಾಗಲೇ 2019ರ ಆರ್‌ಟಿಇ ತಿದ್ದುಪಡಿಯಿಂದ ಅನುದಾನ ರಹಿತ ಶಾಲೆಗಳಿಗೆ ಆರ್‌ಟಿಇ ಅಡಿ ರಾಜ್ಯದಲ್ಲಿ ಕೇವಲ 5 ಸಾವಿರ ಸೀಟುಗಳು ಮಾತ್ರ ತುಂಬಲು ಅವಕಾಶ ಮಾಡಿಕೊಟ್ಟಿದ್ದಾರೆ. ತಿದ್ದುಪಡಿಯಿಂದ ಸುಮಾರು 1,50 ಲಕ್ಷ ಬಡ ಪೋಷಕರಿಗೆ ಅನ್ಯಾಯವಾಗಿದ್ದು, ತಿದ್ದುಪಡಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಅದರಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ರಾಜ್ಯ ಆರ್‌ಟಿಇ ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಯೋಗಾನಂದ್‌ ನೇತೃತ್ವದಲ್ಲಿ ಸುಪ್ರಿಂ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜಪ್ಪ, ಉಪಾಧ್ಯಕ್ಷ ವಿ.ವಿ. ಸಿಂಗ್‌, ಆರ್‌. ಶಿವಕುಮಾರ್‌ ಶೆಟ್ಟಿ, ಹೊನ್ನಾಳಿ ಕೆ. ರಾಜು, ಮುಖಂಡ ಭೈರಪ್ಪ, ಕರಿಬಸಪ್ಪ ಕಬ್ಬೂರು, ಎಚ್‌.ಎಸ್‌. ರಾಜಶೇಖರ್‌, ಡಿ. ಮಹೇಶ್ವರಪ್ಪ, ಪಿ.ಎಂ. ರೇವಣಸಿದ್ದಪ್ಪ, ಬಿ. ಲಲಿತಮ್ಮ, ವೀರೇಶ್‌ ಬಿರಾದಾರ್‌, ಸಿ.ಎಂ. ವಿಜಯ್‌ಕುಮಾರ್‌, ಕೆ. ಮಹಾಂತೇಶ್‌, ಎಚ್‌. ಕೊಟ್ರೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ