ಆ್ಯಪ್ನಗರ

ಪಿಯು ಮಂಡಳಿ ನಿರ್ದೇಶಕರ ನೇಮಕಕ್ಕೆ ಆಗ್ರಹ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷ ಣ ಇಲಾಖೆಗೆ ಸಚಿವರನ್ನು ಹಾಗೂ ಪಿಯು ಮಂಡಳಿಗೆ ನಿರ್ದೇಶಕರನ್ನು ನೇಮಿಸಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 15 Dec 2018, 5:00 am
ಹರಿಹರ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷ ಣ ಇಲಾಖೆಗೆ ಸಚಿವರನ್ನು ಹಾಗೂ ಪಿಯು ಮಂಡಳಿಗೆ ನಿರ್ದೇಶಕರನ್ನು ನೇಮಿಸಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web pu board urges appointment of directors
ಪಿಯು ಮಂಡಳಿ ನಿರ್ದೇಶಕರ ನೇಮಕಕ್ಕೆ ಆಗ್ರಹ


ಹಳೆ ಪಿ.ಬಿ. ರಸ್ತೆಯ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿದ ವಿದ್ಯಾರ್ಥಿಗಳು ತಹಸೀಲ್ದಾರ್‌ ಗ್ರೇಡ್‌ 2 ವೆಂಕಟಮ್ಮರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಮುಖಂಡರು, ಸರಕಾರದ ಒಳ ಜಗಳದಿಂದ ತೆರವಾದ ಶಿಕ್ಷ ಣ ಸಚಿವರ ಹುದ್ದೆ ಖಾಲಿ ಉಳಿದಿದೆ. ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷ ಣದ ನಾನಾ ತರಗತಿಗಳ ಪರೀಕ್ಷೆಗಳು ಸಮೀಸುತ್ತಿದ್ದು, ಕೂಡಲೆ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಕಳೆದ 2 ವರ್ಷಗಳ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇಲಾಖೆಗೆ ತೀವ್ರ ಮುಖಭಂಗವಾಗಿದ್ದಲ್ಲದೆ, ಲಕ್ಷಾಂತರ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದರು. ಇನ್ನೇನು ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿದ್ದು, ಮಂಡಳಿಯು ಸಾರಥಿಯೇ ಇಲ್ಲದ ರಥದಂತೆ ಆಗಿದೆ. ಇದು ಹೀಗೆ ಮುಂದುವರಿದರೆ ಮತ್ತೆ ಅಂತಹ ಅವಘಡಗಳು ಸಂಭವಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಕೂಡಲೆ ಸರಕಾರ ಇಲಾಖೆಗೆ ಸಚಿವರನ್ನು ಹಾಗೂ ಪಿಯು ಮಂಡಳಿಗೆ ನಿರ್ದೆಶಕರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಕಿಂಗ್‌ಪಿನ್‌ ಶಿವಕುಮಾರನಿಗೆ ಶಿಕ್ಷೆಯಾಗಲಿ:

2016ನೇ ಸಾಲಿನ ಪಿಯು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿದ್ದ ನಂತರ ಶಿವಕುಮಾರ ಆರಾಮವಾಗಿ ಓಡಾಡಿಕೊಂಡಿದ್ದ. ಈಗ ಮತ್ತೆ ಪೊಲೀಸ್‌ ಪೇದೆ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ರಾಜ್ಯ ಸರಕಾರ ಕೂಡಲೆ ಕಾನೂನು ಕ್ರಮ ಜರುಗಿಸಿ ಶಿವಕುಮಾರನಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ನಗರ ಕಾರ್ಯದರ್ಶಿ ಭರತ್‌ಕುಮಾರ್‌, ಕುಮಾರ ಹನಗವಾಡಿ, ರವಿ ಕೆ., ನರೇಂದ್ರ, ಸವಿತ, ಪೂಜಾ, ಕಾವ್ಯ, ವಾಣಿ, ಅಂಬಿಕಾ, ಶರತ್‌, ಭರತ್‌ ಕೆ., ರಾಘವೇಂದ್ರ, ಸ್ವಾಮಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ