ಆ್ಯಪ್ನಗರ

ಜಿಲ್ಲೆ ಕೆಲವೆಡೆ ಹನಿದ ಮಳೆ

ಜಿಲ್ಲೆಯ ಕೆಲವೆಡೆ ಗುರುವಾರ ಮಳೆಯಾಗಿದೆ. ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಭಾಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಎರಡು ದಿನದ ಹಿಂದೆ ಸುರಿದ ಮಳೆ ಈಗ ಮತ್ತೆ ಮುಂದುವರಿದಂತಾಗಿದೆ.

Vijaya Karnataka 12 May 2018, 3:22 pm
ದಾವಣಗೆರೆ : ಜಿಲ್ಲೆಯ ಕೆಲವೆಡೆ ಗುರುವಾರ ಮಳೆಯಾಗಿದೆ. ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಭಾಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಎರಡು ದಿನದ ಹಿಂದೆ ಸುರಿದ ಮಳೆ ಈಗ ಮತ್ತೆ ಮುಂದುವರಿದಂತಾಗಿದೆ.
Vijaya Karnataka Web rainfall in the district
ಜಿಲ್ಲೆ ಕೆಲವೆಡೆ ಹನಿದ ಮಳೆ


ದಾವಣಗೆರೆ ನಗರದಲ್ಲಿ ಸಂಜೆ ಮಳೆ ಸುರಿಯಿತು. ಮಳೆಗಿಂತ ಗಾಳಿಯ ವೇಗ ಜೋರಿತ್ತು. ಗಾಳಿ ತಣ್ಣಗಾದ ನಂತರ ಕೆಲಕಾಲ ತುಂತುರು ಮಳೆ ಸುರಿಯಿತು. ತಾಲೂಕಿನ ಕೆಲವೆಡೆ ಕೂಡ ಮಳೆಯಾಗಿದೆ. ಗಾಳಿಯಿಂದ ಭತ್ತದ ಬೆಳೆಗೆ ಕೊಂಚ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಚನ್ನಗಿರಿ ಪಟ್ಟಣ ಸೇರಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಗಾಳಿ ಮಳೆಗೆ ಪಟ್ಟಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚಿನ ಕಾಲ ವಿದ್ಯುತ್‌ ಕೈ ಕೊಟ್ಟಿತ್ತು. ಹೊನ್ನಾಳಿ ಸೇರಿ ನ್ಯಾಮತಿ ಸುತ್ತುಮುತ್ತಾ ಒಂದು ತಾಸಿಗೂ ಹೆಚ್ಚು ಕಾಲ ಬಿರು ಮಳೆ ಸುರಿದಿದೆ. ಉಳಿದಂತೆ ಜಿಲ್ಲೆಯ ನಾನಾ ಕಡೆ ಚದುರಿದಂತೆ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ