ಆ್ಯಪ್ನಗರ

ಉಚಿತ ಶೂ, ಸಾಕ್ಸ್‌ ಪೂರೈಕೆಯ ಅನುದಾನ ಬಿಡುಗಡೆಗೆ ಮನವಿ

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಶೂ, ಸಾಕ್ಸ್‌ ಪೂರೈಕೆಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಸರಕಾರವನ್ನು ಒತ್ತಾಯಿಸಿದೆ.

Vijaya Karnataka 29 Aug 2019, 5:00 am
ದಾವಣಗೆರೆ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಶೂ, ಸಾಕ್ಸ್‌ ಪೂರೈಕೆಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಸರಕಾರವನ್ನು ಒತ್ತಾಯಿಸಿದೆ.
Vijaya Karnataka Web request the release of a free shoe and socks supply grant
ಉಚಿತ ಶೂ, ಸಾಕ್ಸ್‌ ಪೂರೈಕೆಯ ಅನುದಾನ ಬಿಡುಗಡೆಗೆ ಮನವಿ


ಈ ಕುರಿತು ಬುಧವಾರ ಉಪ ವಿಭಾಗಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ ವೇದಿಕೆ ಕಾರ್ಯಕರ್ತರು, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಈಗಾಗಲೇ ಮೂರು ತಿಂಗಳು ಕಳೆದು, ಮೊದಲ ಸೆಮಿಸ್ಟರ್‌ ಅರ್ಧ ಮುಗಿದಿದೆ. ಸರಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಮಾಡುವ ಶೂ ಮತ್ತು ಸಾಕ್ಸ್‌ ನೀಡುವ ಪ್ರಕ್ರಿಯೆಯನ್ನು ಇದುವರೆಗೂ ಆರಂಭಿಸಿಲ್ಲ. ಈ ಸಂಬಂಧ ಇಲಾಖೆಯು ಶಾಲೆಗಳಿಗೆ ಶೂ ಮತ್ತು ಸಾಕ್ಸ್‌ ಖರೀದಿಸುವ ಬಾಬ್ತು ಅನುದಾನದ ಹಣವನ್ನು ಇನ್ನೂ ಮಂಜೂರು ಮಾಡಿರುವುದಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಜತೆ ಎರಡನೇ (ಜೊತೆ) ಹಂತದ ಸಮವಸ್ತ್ರವನ್ನು ಕಳೆದ ಎರಡು ವರ್ಷಗಳಿಂದ ತರಿಸದೆ ಸ್ಥಗಿತಗೊಳಿಸಿದೆ. ಈ ಮಧ್ಯೆ ಇಲಾಖೆ ಸರಕಾರಿ ಶಾಲೆ, ವಿದ್ಯಾರ್ಥಿ ಹಾಗೂ ಶಿಕ್ಷಕ ವರ್ಗವನ್ನು ನಿರ್ಲಕ್ಷ ಭಾವದಿಂದ ನೋಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಇದನ್ನು ಕೂಡಲೇ ಸರಿಪಡಿಸಿಕೊಂಡು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಪರಂಪರಾಗತ ಮತ್ತು ಘನ ಸರಕಾರಿ ಶಾಲೆಗಳನ್ನು ನೆರೆಹೊರೆ ಶಾಲೆಗಳಂತೆ ಪೋ›ತ್ಸಾಹಿಸುವ ನಿಟ್ಟಿನಲ್ಲಿಮತ್ತು ವಿದ್ಯಾರ್ಥಿಗಳನ್ನು ಬೆಂಬಲಿಸುವ ಸಲುವಾಗಿ ಸರಕಾರ ಶಿಕ್ಷಣ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ವೇದಿಕೆ ಜಿಲ್ಲಾಅಧ್ಯಕ್ಷ ಕುಂದೂರು ಪರಮೇಶ್ವರಪ್ಪ ಒತಾಯಿಸಿದರು.

ಸರಕಾರಿ ಶಾಲೆಗಳಲ್ಲಿಪೂರ್ವ ಪ್ರಾಥಮಿಕ ಮತ್ತು ಆಂಗ್ಲಮಾಧ್ಯಮ ತರಗತಿಗಳನ್ನು ಎಸ್‌ಡಿಎಂಸಿ ಸಹಯೋಗದಲ್ಲಿಆರಂಭಿಸಿರುವ ಪರಿಣಾಮ ಮತ್ತು ಸಮುದಾಯದ ಸಹಭಾಗಿತ್ವದ ಪ್ರಭಾವದಿಂದಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ವಿದ್ಯಾರ್ಥಿಗಳಾಗಿದ್ದು ಇವರು ಕೂಡ ಶೂ ಮತ್ತು ಸಾಕ್ಸ್‌ ಇಲ್ಲದೆ ಶಾಲೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಹಾಲಿವಾಣದ ಆಂಜನೇಯ ಶಿವಕ್ಕಳವರ್‌, ಮತ್ತಿ ಗ್ರಾಮದ ಪಿ.ಎಂ.ಮಂಜುನಾಥ್‌, ಸಿದ್ದನಮಠ ಗ್ರಾಮದ ತಿಮ್ಮೇಶಪ್ಪ, ಎಸ್‌ಪಿಎಸ್‌ ನಗರ ಶಾಲಾ ಸಮಿತಿ ಮಂಜುನಾಥ್‌ ಇತರರು ಇದ್ದರು.

ಜಿಲ್ಲೆಯಲ್ಲಿ1498 ಶಾಲೆಗಳು
ಜಿಲ್ಲೆಯಲ್ಲಿಕಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಸೇರಿದಂತೆ ಒಟ್ಟು 1498 ಶಾಲೆಗಳಿದ್ದು 1,40,650 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಿಂದಿನ ವರ್ಷ ನೀಡಿದ ಹಳೆಯ ಹರಿದು ಹೋಗಿರುವ ಶೂ ಹಾಕಿಕೊಂಡು ಬರುತ್ತಿದ್ದಾರೆ. ಹಾಗಾಗಿ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್‌ ಪೂರೈಕೆ ಮಾಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ವೇದಿಕೆ ಅಧ್ಯಕ್ಷ ಪರಮೇಶ್ವರಪ್ಪ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ