ಆ್ಯಪ್ನಗರ

ಹ್ಯಾಟ್ರಿಕ್‌ ಬಾರಿಸಿದ ಶಾಮನೂರು

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್‌ ಬಾರಿಸಿದ್ದಾರೆ. 2008 ರ ಕ್ಷೇತ್ರ ಪುನರ್‌ ವಿಂಗಡಣೆ ನಂತರ ದಾವಣಗೆರೆ ಕ್ಷೇತ್ರವನ್ನು ಇಬ್ಬಾಗವಾಗಿಸಿ ಉತ್ತರ, ದಕ್ಷಿಣ ಕ್ಷೇತ್ರಗಳು ರೂಪುಗೊಂಡವು. 2008 ರಿಂದಲೂ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಮನೂರು ಶಿವಶಂಕರಪ್ಪ ಈ ಬಾರಿ ಸೇರಿ ಮೂರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

Vijaya Karnataka 16 May 2018, 2:09 pm
ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್‌ ಬಾರಿಸಿದ್ದಾರೆ. 2008 ರ ಕ್ಷೇತ್ರ ಪುನರ್‌ ವಿಂಗಡಣೆ ನಂತರ ದಾವಣಗೆರೆ ಕ್ಷೇತ್ರವನ್ನು ಇಬ್ಬಾಗವಾಗಿಸಿ ಉತ್ತರ, ದಕ್ಷಿಣ ಕ್ಷೇತ್ರಗಳು ರೂಪುಗೊಂಡವು. 2008 ರಿಂದಲೂ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಮನೂರು ಶಿವಶಂಕರಪ್ಪ ಈ ಬಾರಿ ಸೇರಿ ಮೂರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
Vijaya Karnataka Web shamanoor scored a hat trick
ಹ್ಯಾಟ್ರಿಕ್‌ ಬಾರಿಸಿದ ಶಾಮನೂರು


ಇವರಿಗೆ 2013 ರಲ್ಲಿ ಕಾಂಗ್ರೆಸ್‌ನಿಂದ ಬಂಡೆದ್ದು ಜೆಡಿಎಸ್‌ನಿಂದ ಕಣದಲ್ಲಿದ್ದ ಸೈಯದ್‌ ಸೈಫುಲ್ಲಾ ಹೆಚ್ಚಿನ ಸ್ಪರ್ಧೆ ನೀಡಿದ್ದರು. ಆದರೂ ಅವರು ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಯಿಂದ ಕಣದಲ್ಲಿದ್ದ ಯಶವಂತರಾವ್‌ ಜಾಧವ್‌ ತೀವ್ರ ಸ್ಪರ್ಧೆ ನೀಡಿದ್ದರು. ಈ ಸ್ಪರ್ಧೆ ನಡುವೆಯೂ ಗೆಲುವು ಸಾಧಿಸಿದ್ದಾರೆ.

ಕಡಿಮೆಯಾದ ಅಂತರ


2008 ರಲ್ಲಿ ಇದೇ ಅಭ್ಯರ್ಥಿಗಳು ಕಣದಲ್ಲಿದ್ದರು. ಆಗ ಶಾಮನೂರು 41,675 ಮತ ಪಡೆದರೆ, ಯಶವಂತರಾವ್‌ ಜಾಧವ್‌ 35,317 ಮತ ಪಡೆದಿದ್ದರು. ಕಡಿಮೆ ಅಂತರದಲ್ಲಿ ಶಾಮನೂರು ಜಯಗಳಿದ್ದರು. ನಂತರ 2013 ರಲ್ಲಿ ಶಾಮನೂರು ಶಿವಶಂಕರಪ್ಪ 66,320 ಮತ ಪಡೆದರೆ ಜೆಡಿಎಸ್‌ ಸೈಯದ್‌ ಸೈಫುಲ್ಲಾ 26, 612 ಮತ ಪಡೆದಿದ್ದರು. 40158 ಮತಗಳಿಂದ ಗೆದ್ದಿದ್ದರು. ಈ ಬಾರಿ ಗೆಲುವಿನ ಅಂತರ ಕಡಿಮೆ ಆಗಿದ್ದು 15,884 ಮತಗಳಿಂದ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ