ಆ್ಯಪ್ನಗರ

ವಿಜೃಂಭಣೆಯ ಶನೇಶ್ವರ ಜಯಂತ್ಯುತ್ಸವ

ಜಿಲ್ಲಾದ್ಯಂತ ಶನೇಶ್ವರ ದೇವಾಲಯಗಳಲ್ಲಿ ಸೋಮವಾರ ಶನೇಶ್ವರ ಸ್ವಾಮಿಯ ಜಯಂತ್ಯುತ್ಸವ ಭಕ್ತಿ, ವಿಜೃಂಭಣೆಯಿಂದ ನಡೆಯಿತು. ನಗರದ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ನಾನಾ ಅಭಿಷೇಕ, ತೊಟ್ಟಿಲೋತ್ಸವ, ರಥೋತ್ಸವ, ಅನ್ನಸಂರ್ಪಣೆ ಕೂಡ ನಡೆಯಿತು. ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು.

Vijaya Karnataka 4 Jun 2019, 5:00 am
ದಾವಣಗೆರೆ : ಜಿಲ್ಲಾದ್ಯಂತ ಶನೇಶ್ವರ ದೇವಾಲಯಗಳಲ್ಲಿ ಸೋಮವಾರ ಶನೇಶ್ವರ ಸ್ವಾಮಿಯ ಜಯಂತ್ಯುತ್ಸವ ಭಕ್ತಿ, ವಿಜೃಂಭಣೆಯಿಂದ ನಡೆಯಿತು. ನಗರದ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ನಾನಾ ಅಭಿಷೇಕ, ತೊಟ್ಟಿಲೋತ್ಸವ, ರಥೋತ್ಸವ, ಅನ್ನಸಂರ್ಪಣೆ ಕೂಡ ನಡೆಯಿತು. ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು.
Vijaya Karnataka Web sheneshwara jayanti festival of celebration
ವಿಜೃಂಭಣೆಯ ಶನೇಶ್ವರ ಜಯಂತ್ಯುತ್ಸವ


ನಗರದ ಕೆ.ಟಿ. ಜಂಬಣ್ಣ ನಗರದ ಶನೇಶ್ವರ ದೇವಳದಲ್ಲಿ ರಥೋತ್ಸವ ಮತ್ತು ಜಯಂತ್ಯುತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 6 ರಿಂದಲೇ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಂತರ ತೊಟ್ಟಿಲೋತ್ಸವ ನಡೆಯಿತು. ಪುರೋಹಿತರಾದ ವಿಲಾಸ ಭಟ್‌ ಮತ್ತು ವೃಂದದಿಂದ ಶನಿಹೋಮ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು. ನಂತರ 11 ಗಂಟೆಗೆ ಮಹಿಳೆಯರ ಪೂರ್ಣಕುಂಭದೊಂದಿಗೆ ರಥೋತ್ಸವ ನಡೆಯಿತು. ಪ್ರಮುಖ ಬೀದಿಗಳಲ್ಲಿ ತೇರು ಸಂಚರಿಸಿತು, ಬಡಾವಣೆಯ ಜನತೆ ಪಾಲ್ಗೊಂಡಿದ್ದರು. ಆ ನಂತರ ಅನ್ನ ಸಂತರ್ಪಣೆ ನಡೆಯಿತು.

ಇಲ್ಲಿನ ಕೆಟಿಜೆ ನಗರದ ಶನೈಶ್ಚರ ದೇವಾಲಯ ಟ್ರಸ್ಟ್‌ನ ವಿದ್ಯಾಗಣಪತಿ, ಅಭಯಹಸ್ತ ಆಂಜನೇಯ, ಶ್ರೀ ಜಗದಾಂಬ, ಶ್ರೀನವಗ್ರಹ ಸಹಿತ ಶ್ರೀ ಶನೈಶ್ಚರ ದೇವಾಲಯದಲ್ಲೂ ಜಯಂತ್ಯುತ್ಸವ ಭಕ್ತಿಯಿಂದ ಜರುಗಿತು. ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್‌ ರಥೋತ್ಸವಕ್ಕೆ ಚಾಲನೆ ನೀಡಿದರು. ಟ್ರಸ್ಟ್‌ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ನಂತರ ಅನ್ನ ಸಂತರ್ಪಣೆ ನಡೆಯಿತು.

ಹದಡಿ ರಸ್ತೆಯ ಕೊಪ್ಪದಾಂಬ ಸೇವಾ ಟ್ರಸ್ಟ್‌ನ ಶ್ರೀ ಕ್ಷೇತ್ರ ನವಸ್ಥಾನದಲ್ಲೂ ವಿಶೇಷ ಪೂಜೆಗಳು ಜರುಗಿದವು. ಬೆಳಗ್ಗೆ 6.30ಕ್ಕೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಅಲಂಕಾರ ಸೇವೆ, ನಂತರ ತೊಟ್ಟಿಲೋತ್ಸವ ನಡೆಯಿತು. ಇದೇ ವೇಳೆ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ, ಕೆಂಡಾರ್ಚನೆ ನಡೆದಿದ್ದು ಕೂಡ ವಿಶೇಷ. ಟ್ರಸ್ಟ್‌ ಅಧ್ಯಕ್ಷೆ ಶಾಂತಮ್ಮ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ