ಆ್ಯಪ್ನಗರ

ವರದಕ್ಷಿಣೆ ಕಿರುಕುಳ: ಎಸ್‌ಐ ತಾಯಿ, ಮಗನಿಗೆ 7 ವರ್ಷ ಸಜೆ

ವರದಕ್ಷಿಣೆ ಕಿರುಕುಳವೇ ಮಹಿಳೆ ಸಾವಿಗೆ ಕಾರಣ ಎಂಬ ಆರೋಪ ಹೊತ್ತಿದ್ದ ಪೊಲೀಸ್‌ ಅಧಿಕಾರಿಯಾಗಿರುವ ತಾಯಿ ಮತ್ತು ಮಗನಿಗೆ ತಲಾ 7 ವರ್ಷ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

Vijaya Karnataka 10 Jul 2019, 5:00 am
ದಾವಣಗೆರೆ : ವರದಕ್ಷಿಣೆ ಕಿರುಕುಳವೇ ಮಹಿಳೆ ಸಾವಿಗೆ ಕಾರಣ ಎಂಬ ಆರೋಪ ಹೊತ್ತಿದ್ದ ಪೊಲೀಸ್‌ ಅಧಿಕಾರಿಯಾಗಿರುವ ತಾಯಿ ಮತ್ತು ಮಗನಿಗೆ ತಲಾ 7 ವರ್ಷ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
Vijaya Karnataka Web si mother son sentenced to seven years for dowry harassment
ವರದಕ್ಷಿಣೆ ಕಿರುಕುಳ: ಎಸ್‌ಐ ತಾಯಿ, ಮಗನಿಗೆ 7 ವರ್ಷ ಸಜೆ


ಹುಬ್ಬಳ್ಳಿಯ ಮಹಿಳಾ ಪೊಲೀಸ್‌ ಠಾಣೆ ಪಿಎಸ್ಸೈ ಲೀಲಾವತಿ ಮತ್ತು ಪುತ್ರ ನವೀನ್‌ ಕುಮಾರ್‌ ಶಿಕ್ಷೆಗೆ ಗುರಿಯಾಗಿರುವವರು. ನವೀನ್‌ ಕುಮಾರ್‌ ದಾವಣಗೆರೆಯ ಸರಸ್ವತಿ ಬಡಾವಣೆಯ ವಾಸಿ ನಿವೃತ್ತ ಎಂಜಿನಿಯರ್‌ ಬಸಪ್ಪ ಎಂಬುವವರ ಮಗಳಾದ ಶರ್ಮಿಳಾ ಅವರನ್ನು ಫೆ.17, 2014 ರಂದು ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ 10 ಲಕ್ಷ ರೂ. ನಗದು, 40 ತೊಲ ಚಿನ್ನ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು. ಆದರೂ ಹೆಚ್ಚಿನ ವರದಕ್ಷಿಣೆ ತರಲು ಒತ್ತಾಯಿಸಿ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದರು ಎಂಬ ಆರೋಪ ಹೊತ್ತಿದ್ದರು.

ಆ ನಂತರ ತವರಿಗೆ ಬಂದ ಶರ್ಮಿಳಾಗೆ ವಕೀಲರಿಂದ ನೋಟಿಸ್‌ ನೀಡಿ ಮಾನಸಿಕ ಹಿಂಸೆ ನೀಡಿದ್ದರಿಂದ ಅವರು ಸೆ. 7, 2015 ರಂದು ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಳು ಎಂದು ಅವರ ತಂದೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿ ಡಿವೈಎಸ್ಪಿ ಅಶೋಕ್‌ ಕುಮಾರ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ಕುಲಕರ್ಣಿ ಅಂಬಾದಾಸ್‌ ಈ ತೀರ್ಪು ನೀಡಿದ್ದಾರೆ. ಸರಕಾರರ ಪರವಾಗಿ ಸರಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ