ಆ್ಯಪ್ನಗರ

ಅಡಕೆ ಬೆಳೆಗಿಂತ ರೇಷ್ಮೆ ಹೆಚ್ಚು ಲಾಭದಾಯಕ

ಅಡಕೆ ಬೆಳೆಗಿಂತ ಹೆಚ್ಚು ಲಾಭದಾಯಕವಾದದ್ದು ರೇಷ್ಮೆ ಬೆಳೆ ಎಂಬುದಾಗಿ ಚಿತ್ರದುರ್ಗದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಹರ್ಷ ಹೇಳಿದರು.

Vijaya Karnataka 25 Jun 2019, 5:00 am
ಹೊನ್ನಾಳಿ : ಅಡಕೆ ಬೆಳೆಗಿಂತ ಹೆಚ್ಚು ಲಾಭದಾಯಕವಾದದ್ದು ರೇಷ್ಮೆ ಬೆಳೆ ಎಂಬುದಾಗಿ ಚಿತ್ರದುರ್ಗದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಹರ್ಷ ಹೇಳಿದರು.
Vijaya Karnataka Web silk is more profitable than acacia crop
ಅಡಕೆ ಬೆಳೆಗಿಂತ ರೇಷ್ಮೆ ಹೆಚ್ಚು ಲಾಭದಾಯಕ


ಪಟ್ಟಣದ ತಾಪಂ ಸಾಮರ್ಥ್ಯ‌ ಸೌಧದಲ್ಲಿ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡುವ ಸಂಬಂಧ ಸೋಮವಾರ ಹಮ್ಮಿಕೊಂಡಿದ್ದ ರೈತರ ತರಬೇತಿ, ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಡಕೆ ಬೆಳೆಗೆ ಅತಿ ಹೆಚ್ಚು ನೀರು ಬೇಕು. ಹೆಚ್ಚು ಖರ್ಚು ಕೂಡಾ ಭರಿಸಬೇಕು. ಅದು ಆದಾಯ ತಂದು ಕೊಡಲು ಆರು ವರ್ಷ ಕಾಯಬೇಕು. ಆದರೆ, ರೇಷ್ಮೆ ಬೆಳೆಗೆ ಕೇವಲ ಒಂದು ಅಥವಾ ಎರಡು ಬಾರಿ ನೀರು ಕೊಟ್ಟರೆ ಸಾಕು. ಕೃಷಿ ಮಾಡಿದ ಆರು ತಿಂಗಳಿಗೆ ಆದಾಯ ತಂದುಕೊಡಲು ಆರಂಭಿಸತ್ತದೆ ಎಂದರು.

ಯಾವ ರೈತರಿಗೆ ನೀರಿನ ಸೌಲಭ್ಯ ಕಡಿಮೆ ಇದೆಯೋ ಅಂಥವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಬೆಳೆ ಕೈಗೊಂಡರೆ ಅವರಿಗೆ ಕೂಲಿ ರೂಪದಲ್ಲಿ ಪ್ರತಿ ಎಕರೆಗೆ 44 ಸಾವಿರ ಸಹಾಯ ಧನ ಮತ್ತು ಸಾಮಾಗ್ರಿ ವೆಚ್ಚಕ್ಕಾಗಿ 30 ಸಾವಿರ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟು 70 ಸಾವಿರ ರೂ. ಗಳನ್ನು ಯಾವ ಬೆಳೆಗೆ ಸರಕಾರ ನೀಡುತ್ತದೆ ಹೇಳಿ ಎಂದು ರೈತರನ್ನು ಪ್ರಶ್ನಿಸಿದ ಅವರು, ಈ ಸೌಲಭ್ಯ ಬೇರೆ ಯಾವ ಬೆಳೆಗೂ ಇಲ್ಲ ಎಂದು ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ. ಶ್ರೀನಿವಾಸಲು ಮಾತನಾಡಿ, ಇತ್ತೀಚೆಗೆ ಸಾಕಷ್ಟು ಅಡಕೆ ಬೆಳೆಗಾರರು ರೇಷ್ಮೆ ಬೆಳೆಯತ್ತ ವಾಲುತ್ತಿದ್ದಾರೆ. ಈಗಿನ ಬರಗಾಲದ ಪರಿಸ್ಥಿತಿಯಲ್ಲಿ ರೇಷ್ಮೆ ಬೆಳೆ ಬಹಳ ಸೂಕ್ತ ಎಂದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌ ಮಾತನಾಡಿ, ಜಿಪಂ ಅನುದಾನದಲ್ಲಿ ಕಳೆದ ವರ್ಷ 25 ಲಕ್ಷ ಕ್ಕೂ ಹೆಚ್ಚಿನ ಅನುದಾನವನ್ನು ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಕೊಡಿಸಿದ್ದೇನೆ ಎಂದರು.

ತಾಪಂ ಸದಸ್ಯ ಕೆ.ಎಲ್‌. ರಂಗಪ್ಪ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಸದಸ್ಯರಾದ ಶಿವಾನಂದ್‌, ತಾಲೂಕಿನ ರೇಷ್ಮೆ ಇಲಾಖೆಯ ಪ್ರದರ್ಶಕ ಟಿ.ಎಲ್‌. ಜಗದೀಶ್‌, ಸಿಬ್ಬಂದಿ ಬಸವಂತಪ್ಪ, ಹಾಗೂ ಮಾದನಬಾವಿ, ಮಾರಿಕೊಪ್ಪ, ಬೇಲಿಮಲ್ಲೂರು ಭಾಗದ ನೂರಕ್ಕು ಎಚ್ಚು ರೇಷ್ಮೆ ಬೆಳೆಗಾರರು ಹಾಜರಿದ್ದರು.

ಜಿಲ್ಲೆಯಲ್ಲಿ ಜಗಳೂರು ಮತ್ತು ಹೊನ್ನಾಳಿಯಲ್ಲಿ ಮಾತ್ರ ರೇಷ್ಮೆ ಬೆಳೆಯಲಾಗುತ್ತದೆ. ಇದು ಜಿಲ್ಲೆಯಾದ್ಯಂತ ಪಸರಿಸಬೇಕು. ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದಾಗಬೇಕು.
- ಎಂ.ಆರ್‌. ಮಹೇಶ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ