ಆ್ಯಪ್ನಗರ

ಮನೆಗೆ ನುಗ್ಗಿ ಹಾಡು ಹಗಲೇ ಕಳ್ಳತನ

ಮಹಾನಗರ ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಹಾಡು ಹಗಲೇ ಮನೆ ಒಳಗೆ ನುಗ್ಗಿದ ಕಳ್ಳರು, ಒಂದು ಕೆಜಿ ಚಿನ್ನ ಮತ್ತು 30 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.

Vijaya Karnataka 17 Aug 2019, 5:00 am
ದಾವಣಗೆರೆ : ಮಹಾನಗರ ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಹಾಡು ಹಗಲೇ ಮನೆ ಒಳಗೆ ನುಗ್ಗಿದ ಕಳ್ಳರು, ಒಂದು ಕೆಜಿ ಚಿನ್ನ ಮತ್ತು 30 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web sneak into the house and steal the song
ಮನೆಗೆ ನುಗ್ಗಿ ಹಾಡು ಹಗಲೇ ಕಳ್ಳತನ


ಈ ಬಡಾವಣೆಯ ದುರ್ಗಾಂಭಿಕಾ ಶಾಲೆ ಹಿಂಭಾಗದಲ್ಲಿರುವ ಕೃಷಿಕರಾದ ಚನ್ನಪ್ಪ ಎಂಬುವವರ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ. ಮಹಾಲಕ್ಷ್ಮೇ ಹಬ್ಬಕ್ಕೆಂದು ಬ್ಯಾಂಕ್‌ನಲ್ಲಿದ್ದ ಎಲ್ಲ ಒಡವೆಯನ್ನು ಅವರು ಮನೆಗೆ ತಂದಿಟ್ಟು ಕೊಂಡಿದ್ದರು. ಈ ಘಟನೆ ನಡೆದಾಗ ಚನ್ನಪ್ಪ ಮನೆಯಲ್ಲಿ ಇರಲಿಲ್ಲ, ಅವರ ತಾಯಿ ಮತ್ತು ಪತ್ನಿ ಇಬ್ಬರೇ ಹೆಣ್ಣುಮಕ್ಕಳು ಇದ್ದಾಗ ಕಳ್ಳರು ತಮ್ಮ ಕೈ ಚಳಕ ತೋರಿಸಿ, ಚಿನ್ನ, ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ಕಂದಾಯ ರಶೀದಿ, ದಾಖಲೆಗಳನ್ನು ನೀಡುವಂತೆ ಕೇಳಿ ಮಹಿಳೆಯರ ಗಮನ ಬೇರೆಡೆ ಸೆಳೆದು ಅವರನ್ನು ಮನೆ ಮೇಲಕ್ಕೆ ಕರೆದೊಯ್ದಿದ್ದಾರೆ. ಆಗ ಕಳ್ಳರ ಟೀಮಿನ ವ್ಯಕ್ತಿಯೊಬ್ಬ ಒಳಗೆ ಬೀಗ ಹಾಕದೆ ಬಿಟ್ಟಿದ್ದ ಬೀರುವಿನಲ್ಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಆ ನಂತರ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಕಳ್ಳರು ಕೂಡ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದು, ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ