ಆ್ಯಪ್ನಗರ

ಶ್ರೀವೀರಭದ್ರಸ್ವಾಮಿ, ಕಾಳಮ್ಮದೇವಿ ಜೋಡಿ ತೇರು

ತಾಲೂಕಿನ ಕುಂಕುವ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಸ್ವಾಮಿ, ಶ್ರೀ ಕಾಳಮ್ಮ ದೇವಿಯ ಜೋಡಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು.

Vijaya Karnataka 23 May 2019, 5:00 am
ನ್ಯಾಮತಿ : ತಾಲೂಕಿನ ಕುಂಕುವ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಸ್ವಾಮಿ, ಶ್ರೀ ಕಾಳಮ್ಮ ದೇವಿಯ ಜೋಡಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು.
Vijaya Karnataka Web sreeveerabhadraswamy and kalmadevi are the two
ಶ್ರೀವೀರಭದ್ರಸ್ವಾಮಿ, ಕಾಳಮ್ಮದೇವಿ ಜೋಡಿ ತೇರು


ಗ್ರಾಮದ ಭಕ್ತರು ಕಳಸವನ್ನು ರಾಜ ಬೀದಿಗಳಲ್ಲಿ ಕೊಂಬು, ಕಹಳೆ, ತಮಟೆ, ಬಾಜಭಜಂತ್ರಿ, ಮಂಗಳಕರ ವಾದ್ಯದೊಂದಿಗೆ ಶ್ರೀ ವೀರಭದ್ರೇಶ್ವರಸ್ವಾಮಿ, ಭದ್ರಕಾಳಮ್ಮ ದೇವಿ, ಆಂಜನೇಯ ಸ್ವಾಮಿ ಮತ್ತು ರಂಗನಾಥ ಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಮಂಗಳವಾರ ರಾತ್ರಿ ರಥಕ್ಕೆ ಧ್ವಜಾರೋಹಣ, ಕಳಸಾರೋಹಣ ನೆರವೇರಿಸಲಾಯಿತು.

ನಾನಾ ಹೂವಿನ ಹಾರ, ಮೊಸಂಬಿ ಹಣ್ಣುಗಳಿಂದ ಸಿಂಗರಿಸಿದ ಜೋಡಿ ರಥಕ್ಕೆ ಭಲೇಬಾನದ ಎಡೆ ರಥದ ಗಾಲಿಗೆ ಹಾಕಿ ಪೂಜೆ ನೆರವೇರಿಸಿ ಶ್ರೀ ವೀರಭದ್ರೇಶ್ವರಸ್ವಾಮಿ, ಭದ್ರಕಾಳಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಜೋಡಿ ರಥದಲ್ಲಿ ಪ್ರತಿಷ್ಠಾಪಿಸಿ ಉದ್ಘೋಷದೊಂದಿಗೆ ಭಕ್ತರು ರಥಕ್ಕೆ ಹೂವು, ಉತ್ತತ್ತಿ, ಮಂಡಕ್ಕಿ ತೂರಿ ಹರಕೆ ತೀರಿಸಿ ರಥವನ್ನು ಎಳೆದರು.

ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಮತ್ತು ರಥಕ್ಕೆ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ನ್ಯಾಮತಿ , ಹೊನ್ನಾಳಿ, ದಾವಣಗೆರೆ , ಶಿವಮೊಗ್ಗ , ಹಾವೇರಿ ಸೇರಿದಂತೆ ಹಲವಾರು ಊರಿನ ನುರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ