ಆ್ಯಪ್ನಗರ

ನಾಲ್ಕು ದಿನ ನಂತರ ಮಹಾಸಭೆಯಲ್ಲಿ ಚರ್ಚೆ: ಶಾಮನೂರು

ಪ್ರತ್ಯೇಕವಾಗಿದ್ದ ಲಿಂಗಾಯತ - ವೀರಶೈವ ಮಹಾಸಭಾ ಒಂದಾಗುವ ಕುರಿತು ನಾಲ್ಕು ದಿನದ ನಂತರ ಬೆಂಗಳೂರಲ್ಲಿ ಹಿರಿಯರ, ಸ್ವಾಮೀಜಿಗಳ ಜತೆ ಸಭೆ ನಡೆಸಿ ಮಹಾಸಭಾ ತೀರ್ಮಾನ ಕೈಗೊಳ್ಳಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

Vijaya Karnataka 12 Jun 2018, 2:51 pm
ದಾವಣಗೆರೆ : ಪ್ರತ್ಯೇಕವಾಗಿದ್ದ ಲಿಂಗಾಯತ - ವೀರಶೈವ ಮಹಾಸಭಾ ಒಂದಾಗುವ ಕುರಿತು ನಾಲ್ಕು ದಿನದ ನಂತರ ಬೆಂಗಳೂರಲ್ಲಿ ಹಿರಿಯರ, ಸ್ವಾಮೀಜಿಗಳ ಜತೆ ಸಭೆ ನಡೆಸಿ ಮಹಾಸಭಾ ತೀರ್ಮಾನ ಕೈಗೊಳ್ಳಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
Vijaya Karnataka Web talk four days later at the general assembly shamanoor
ನಾಲ್ಕು ದಿನ ನಂತರ ಮಹಾಸಭೆಯಲ್ಲಿ ಚರ್ಚೆ: ಶಾಮನೂರು


ದಾವಣಗೆರೆ ತಮ್ಮ ನಿವಾಸದಲ್ಲಿ ಸೋಮವಾರ 'ವಿಜಯ ಕರ್ನಾಟಕ'ದ ಜತೆ ಮಾತನಾಡಿದ ಅವರು, ಜೂನ್‌ 16ರ ಸುಮಾರಿಗೆ ತಾವು ಮತ್ತೆ ಬೆಂಗಳೂರಿಗೆ ತೆರಳಲಿದ್ದು, ಆಗ ಮಹಾಸಭಾದ ಪದಾಧಿಕಾರಿಗಳು, ಹಿರಿಯರೊಂದಿಗೆ ಈ ಪ್ರಸ್ತಾಪದ ಬಗ್ಗೆ ಚಿಂತನ ಮಂಥನ ನಡೆಸುವುದಾಗಿ ಹೇಳಿದರು.

''ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರಕಾರ ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆಯುತ್ತಿದೆ. ಎರಡೂ ಒಂದೇ ಎಂದು ನಾವು ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಇದ್ದೇವೆ'' ಎಂದು ಹೇಳಿದ ಅವರು, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗೆ ಮುಂದಾಗಲಿಲ್ಲ.

ಷರತ್ತುಗಳು ಪರಿಶೀಲನೆ ...


ಜಾಗತಿಕ ಲಿಂಗಾಯತ ಮಹಾಸಭಾ ಷರತ್ತು ವಿಧಿಸಿದೆ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ ಇಂತಹ ಯಾವುದೇ ಪ್ರಸ್ತಾವ ಮಹಾಸಭಾಕ್ಕೆ ಈವರೆಗೂ ಸಲ್ಲಿಕೆ ಆಗಿಲ್ಲ. ವೀರಶೈವ ಮಹಾಸಭಾದಲ್ಲಿ ಸ್ಥಾನ ಕೇಳಿದರೆ ಕೊಡಬಹುದು. ನಾನೀಗ ದಾವಣಗೆರೆಯಲ್ಲಿ ಇದ್ದೇನೆ, ನಾಲ್ಕು ದಿನದ ನಂತರ ಬೆಂಗಳೂರಿಗೆ ತೆರಳಲಿದ್ದು ಅಲ್ಲಿ ನಮ್ಮ ಹಿರಿಯರ, ಸ್ವಾಮೀಜಿಗಳ ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಲಾಗುವುದು. ಹಿರಿಯರೆಲ್ಲಾ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ. ಎರಡೂ ಒಂದಾಗುವುದು ಒಳ್ಳೆಯದೇ, ತಪ್ಪೇನಿಲ್ಲ ಎಂದಷ್ಟೇ ಹೇಳಿ ಹೆಚ್ಚಿನ ಪ್ರತಿಕ್ರಿಯೆಗೆ ಆಸಕ್ತಿ ತೋರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ