ಆ್ಯಪ್ನಗರ

ಕೊನೆ ಸುತ್ತು ಅಭ್ಯರ್ಥಿಗಳ ಅಬ್ಬರದ ಪ್ರಚಾರ

ಚುನಾವಣಾ ಪ್ರಚಾರಕ್ಕೆ ಗುರುವಾರ ಸಂಜೆ ಐದಕ್ಕೆ ತೆರೆ ಬೀಳಲಿದ್ದು, ಕೊನೇ ದಿನದಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದರು. ಅಭ್ಯರ್ಥಿಗಳಷ್ಟೇ ಅಲ್ಲ ಪಕ್ಷಗಳ ಕೆಲ ಮುಖಂಡರು ಕೂಡ ತಮ್ಮ ಪಟಾಲಂನೊಂದಿಗೆ ತಮ್ಮ ನಾಯಕರ ಪರ ರಸ್ತೆಗಿಳಿದು ಮತ ಯಾಚಿಸಿದರು. ಜಿಲ್ಲೆಯ ಮಟ್ಟಿಗೆ ಯಾವುದೇ ಬಿಸಿ ಬಿಸಿ ಆರೋಪ, ಪ್ರತ್ಯಾರೋಪಗಳಿಲ್ಲದೆ ತಣ್ಣಗೆ ಚುನಾವಣೆ ಪ್ರಚಾರ ನಡೆದಿದೆ.

Vijaya Karnataka 12 May 2018, 2:33 pm
ದಾವಣಗೆರೆ : ಚುನಾವಣಾ ಪ್ರಚಾರಕ್ಕೆ ಗುರುವಾರ ಸಂಜೆ ಐದಕ್ಕೆ ತೆರೆ ಬೀಳಲಿದ್ದು, ಕೊನೇ ದಿನದಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದರು. ಅಭ್ಯರ್ಥಿಗಳಷ್ಟೇ ಅಲ್ಲ ಪಕ್ಷಗಳ ಕೆಲ ಮುಖಂಡರು ಕೂಡ ತಮ್ಮ ಪಟಾಲಂನೊಂದಿಗೆ ತಮ್ಮ ನಾಯಕರ ಪರ ರಸ್ತೆಗಿಳಿದು ಮತ ಯಾಚಿಸಿದರು. ಜಿಲ್ಲೆಯ ಮಟ್ಟಿಗೆ ಯಾವುದೇ ಬಿಸಿ ಬಿಸಿ ಆರೋಪ, ಪ್ರತ್ಯಾರೋಪಗಳಿಲ್ಲದೆ ತಣ್ಣಗೆ ಚುನಾವಣೆ ಪ್ರಚಾರ ನಡೆದಿದೆ.
Vijaya Karnataka Web the last round of campaigns is the rampant campaign
ಕೊನೆ ಸುತ್ತು ಅಭ್ಯರ್ಥಿಗಳ ಅಬ್ಬರದ ಪ್ರಚಾರ


ಗುರುವಾರ ಸಂಜೆ 5ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಂತರ ಒಂದು ದಿನ ಅಭ್ಯರ್ಥಿಗಳು ಪಾದಯಾತ್ರೆಯಲ್ಲಿ ಮನೆಗಳಿಗೆ ತೆರಳಿ ಮತ ಯಾಚಿಸಬಹುದು. ಹಾಗಾಗಿ ಕೊನೇ ಕ್ಷಣದಲ್ಲಿ ಮತದಾರರ ಒಲೈಸಿಕೊಳ್ಳಲು ಅಬ್ಬರದ ಪ್ರಚಾರಕ್ಕೆ ಇಳಿದಿದ್ದರು.

ಕಾಂಗ್ರೆಸ್‌ ಸಂಜೆ ಪ್ರಚಾರ:

ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಬುಧವಾರ ಬೆಳಗ್ಗೆ ದೊಡ್ಡಬಾತಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಸಂಜೆ ದಾವಣಗೆರೆ ದಕ್ಷಿಣ ವಿಧಾನ ಸಭೆ ಕ್ಷೇತ್ರದ 34 ನೇ ವಾರ್ಡ್‌ನಲ್ಲಿ ರೋಡ್‌ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಸಂಜೆವರೆಗೂ ತಮ್ಮ ನಿವಾಸದಲ್ಲಿಯೇ ಇದ್ದು ತಮ್ಮ ಕ್ಷೇತ್ರದ ಪ್ರಮುಖ ಲೀಡರ್‌ಗಳ ಜತೆ ಮಾತುಕತೆ ನಡೆಸಿದರು. ನಂತರ ಸಂಜೆ ಮತ್ತೊಂದಿಷ್ಟು ಪ್ರಮುಖರ ಜತೆ ಸಭೆ ನಡೆಸಿ ತದನಂತರ ಅಜಾದ್‌ನಗರದಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದರು.

ಬಿಜೆಪಿ ಬಿರುಸು:

ಬಿಜೆಪಿ ಅಭ್ಯರ್ಥಿಗಳು ಕೂಡ ಬಿರುಸಿನ ಪ್ರಚಾರ ನಡೆಸಿದರು. ದಾವಣಗೆರೆ ಉತ್ತರ ವಿಧಾಸಭೆ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಬೆಳಗ್ಗೆ ನಗರದ 11 ಮತ್ತು 17 ನೇ ವಾರ್ಡ್‌ನಲ್ಲಿ ಪ್ರಚಾರ ನಡೆಸಿದರು. ಮಧ್ಯಾಹ್ನದ ನಂತರ ತುರ್ಚುಘಟ್ಟ, ಚಂದ್ರನಹಳ್ಳಿ, ಗಿರಿಯಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.

ಉತ್ತರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಇವರು ಬೇತೂರು, ಕಾಡಜ್ಜಿ, ದೊಡ್ಡಬಾತಿ ಸೇರಿ ಹಾಗೂ 30 ನೇ ವಾರ್ಡ್‌ನಲ್ಲಿ ಬೆಂಬಲಿಗರ ಜತೆ ಪ್ರಚಾರ ನಡೆಸಿ ಮತ ಯಾಚಿಸಿದರು. ಎರಡೂ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗಳು ಕೂಡ ಪ್ರಚಾರ ನಡೆಸಿದರು. ಪಕ್ಷೇತರ ಅಭ್ಯರ್ಥಿಗಳು ಮತಯಾಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ