ಆ್ಯಪ್ನಗರ

20 ಜೋಡಿಗಳ ಸಾಮೂಹಿಕ ವಿವಾಹ 6ರಂದು

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆಯಿಂದ ನಗರದ ರೇಣುಕ ಮಂದಿರದಲ್ಲಿ ಮೇ 5, 6ರಂದು 8ನೇ ವರ್ಷದ ವಧು ವರರ ಸಮಾವೇಶ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ತಿಳಿಸಿದರು.

Vijaya Karnataka 5 May 2018, 2:09 pm
ದಾವಣಗೆರೆ : ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆಯಿಂದ ನಗರದ ರೇಣುಕ ಮಂದಿರದಲ್ಲಿ ಮೇ 5, 6ರಂದು 8ನೇ ವರ್ಷದ ವಧು ವರರ ಸಮಾವೇಶ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ತಿಳಿಸಿದರು.
Vijaya Karnataka Web the mass wedding of 20 couples is on 6th
20 ಜೋಡಿಗಳ ಸಾಮೂಹಿಕ ವಿವಾಹ 6ರಂದು


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 5ರ ಬೆಳಗ್ಗೆ 10.30ಕ್ಕೆ ವಧು ವರರ ಸಮಾವೇಶ, 6ರಂದು ಬೆಳಗ್ಗೆ 9.30ಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರಿಗಾಗಿ 15ನೇ ಸಾಮೂಹಿಕ ವಿವಾಹ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ಅಂದು ಧ್ವಜಾರೋಹಣ ಹರ ಗುರು ಚರ ಮೂರ್ತಿಗಳಿಂದ ನೆರವೇರಲಿದೆ. ಸಮಾರಂಭದ ಸಾನ್ನಿಧ್ಯ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ತ್ರೀನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಪ್ರಸಾದ ಸ್ವಾಮೀಜಿ ವಹಿಸಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾವಿ ಬೆಟ್ಟಪ್ಪ, ಎನ್‌.ಜಿ. ನಾಗನಗೌಡರು ಭಾಗವಹಿಸಲಿದ್ದಾರೆ. ವಿಶೇಷ ಸನ್ಮಾನ ಪಾಲಿಕೆ ಸದಸ್ಯೆ ಶೋಭಾ ಪಲ್ಲಾಗಟ್ಟೆ ಶಿವಾನಂದಪ್ಪ. ಸಮಾಜದ ಗಣ್ಯರಾದ ವಾಣಿ ಶಿವಣ್ಣ, ಕಾಂತಪ್ಪ ಮೇಷ್ಟ್ರು, ಎಸ್‌.ವೀರಪ್ಪ, ಎಚ್‌.ಜಿ.ಶಂಕರ್‌, ಅಂದನೂರು ರಾಜೇಶ್‌ಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಕ್ರಿಯಾಶೀಲ ಸಂಘಟನಾ ಚತುರ ಚತುರೆ ಪ್ರಶಸ್ತಿ ಎಚ್‌.ವೀರಣ್ಣ ಕಿತ್ತೂರು, ಸರೋಜಮ್ಮ ಮುಂಡಾಸ, ಪಾರ್ವತಿ ಮತ್ತಿಹಳ್ಳಿ, ಶಕ್ತಿ ಪ್ರಸಾದ್‌, ಕೆ.ವಿ.ಸುರೇಶ್‌, ಬಾದಾಮಿ ಚಂದ್ರಶೇಖರ್‌ ಅವರಿಗೆ ನೀಡಲಾಗುವುದು. ಇದೇ ವೇಳೆ 20 ಜೋಡಿಗಳ ವಿವಾಹ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹದಡಿ ನಟರಾಜ್‌, ಎಂ.ದೊಡ್ಡಪ್ಪ, ಜಿ.ಶಶಿಧರ್‌, ಉಮಾಕರ ಪ್ರಭು, ಲಿಂಗರಾಜ್‌ ಇದ್ದರು.

ಶ್ರಾವಣ ಮಾಸದಲ್ಲಿ ಗ್ರಾಮ ವಾಸ್ತವ್ಯ

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶ್ರೀ ವಚನಾನಂದ ಸ್ವಾಮೀಜಿ ಶ್ರಾವಣ ಮಾಸದಲ್ಲಿ 29 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ 6 ರಿಂದ ಯೋಗಾಸಾನ, 9ಕ್ಕೆ ಲಿಂಗಪೂಜೆ, 10 ಭಕ್ತರ ಮನೆಗೆ ಭೇಟಿ ಮತ್ತು ಸಂಜೆ ಧಾರ್ಮಿಕ ಕಾರ್ಯಕ್ರಮ. ನಂತರ ಬೇರೆ ಗ್ರಾಮದಲ್ಲಿ ವಾಸ್ತವ್ಯ ಮಾಡುವರು. ಇದರಿಂದ ಯುವ ಪೀಳಿಗೆಗೆ ಧರ್ಮದ ಆಚರಣೆ ಬಗ್ಗೆ ತಿಳಿಸಲು ಸಹಕಾರಿಯಾಗಲಿದೆ ಎಂದು ಉದ್ಯಮಿ ಬಿ.ಸಿ. ಉಮಾಪತಿ ತಿಳಿಸಿದರು.

ನಾನು ಯಾವುದೇ ರೀತಿಯಲ್ಲಿ ರಾಜಕೀಯ ಪ್ರವೇಶ ಮಾಡಲ್ಲ. ಸ್ವಾರ್ಥ, ವ್ಯವಹಾರಕ್ಕಾಗಿ ಮನುಷ್ಯ ಬೆಳೆಯಬಾರದು. ಸಮಾಜ ಸಂಘಟಿಸುವ ಮೂಲಕ ಸುಶಿಕ್ಷಿತರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಅಳಿಲು ಸೇವೆ ಮಾಡಲಾಗುತ್ತಿದೆ.

- ಬಿ.ಸಿ.ಉಮಾಪತಿ, ಹರ ಸೇವಾ ಸಂಸ್ಥೆ ಅಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ