ಆ್ಯಪ್ನಗರ

ಜ್ವರಕ್ಕೆ ಹೊಸಲಕ್ಕಂಪುರ ಜನರು ಹೈರಾಣು

ತಾಲೂಕಿನ ಹೊಸ ಲಕ್ಕಂಪುರ ಗ್ರಾಮದಲ್ಲಿಜನರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿತು.

Vijaya Karnataka 29 Aug 2019, 5:00 am
ಜಗಳೂರು: ತಾಲೂಕಿನ ಹೊಸ ಲಕ್ಕಂಪುರ ಗ್ರಾಮದಲ್ಲಿಜನರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿತು.
Vijaya Karnataka Web the newborns are feverish
ಜ್ವರಕ್ಕೆ ಹೊಸಲಕ್ಕಂಪುರ ಜನರು ಹೈರಾಣು


ಸ್ವಚ್ಛತೆಯಿಂದ ವಂಚಿತವಾದ 9ಕ್ಕೂ ಹೆಚ್ಚು ಮಂದಿಗೆ ತೀವ್ರ ಜ್ವರವಿದ್ದ ಕಾರಣ ಇವರ ತಪಾಸಣೆ ನಡೆಸಿ, ರಕ್ತ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಜತೆಗೆ ಆರೋಗ್ಯ ಇಲಾಖೆಯ ಸಿಬ್ಬಂಧಿದಿ ಗ್ರಾಮದಲ್ಲಿನ ನೂರಾರು ರೋಗಿಗಳ ತಪಾಸಣೆ ನಡೆಸಿ 101 ಮಂದಿಗೆ ಸೊಳ್ಳೆ ಪರದೆಗಳ ವಿತರಿಸಿದರು.

ಸ್ವಚ್ಛತೆ ಮರೀಚಿಕೆ:
ಗ್ರಾಮದಲ್ಲಿಈ ಹಿಂದೆ ಕಳೆದ ಎರಡು ವರ್ಷಗಳ ಹಿಂದೆ ಜನರಿಗೆ ಡೆಂಗೆ, ಚಿಕೂನ್‌ ಗುನ್ಯಾ ಜ್ವರ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆಯವರು ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದರು. ಚರಂಡಿ ಸ್ವಚ್ಛತೆ ಇಲ್ಲದೇ ಸೊಳ್ಳೆ ಮತ್ತು ನೊಣಗಳ ಸಂತತಿ ಹೆಚ್ಚಾಗಿದ್ದು, ಹಗಲಿರುಳು ಸೊಳ್ಳೆಗಳ ಕಚ್ಚುವಿಕೆಯಿಂದ ಜನರಿಗೆ ಜ್ವರ ಕಾಣಿಸಿಕೊಂಡಿದೆ. ಕುಡಿಯುವ ನೀರಿನ ತೊಟ್ಟಿ ಸ್ವಚ್ಛತೆ ಇಲ್ಲ, ಮನೆಯ ಬಳಿಯಲ್ಲಿಯೇ ತಿಪ್ಪೇರಾಶಿ ಇರುವುದರಿಂದ ಪ್ರತಿ ವರ್ಷ ಈ ಗ್ರಾಮದ ಜನರು ಜ್ವರದಿಂದ ಬಳಲುವಂತಾಗಿದೆ.

ತುಂಬಿದ ಚರಂಡಿ:
ಗ್ರಾಮದಲ್ಲಿನಿರ್ಮಾಣವಾದ ಚರಂಡಿಗಳು ಮಣ್ಣು ಕಲ್ಲು, ಕಸ ಕಡ್ಡಿಯಿಂದ ತುಂಬಿ ಹೂತು ಹೋಗಿದೆ. ಮಲೀನ ನೀರು ಗ್ರಾಮದಿಂದ ಹೊರಗಡೆ ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿಯೇ ತಗ್ಗು ಗುಂಡಿಗಳಲ್ಲಿತಿಂಗಳುಗಟ್ಟಲೇ ಸಂಗ್ರಹವಾಗಿ ನಿಂತು, ಸೊಳ್ಳೆಗಳ ಉತ್ತತ್ತಿ ತಾಣವಾಗಿ ಪರಿಣಮಿಸಿದೆ. ಬಳಕೆಯ ನೀರು ದುರ್ವಾಸನೆ ಬೀರಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ.

ಗ್ರಾಪಂ ನಿರ್ಲಕ್ಷತ್ರ್ಯ:
ಗ್ರಾಮದ ರಸ್ತೆ ಬದಿಯ ಸುಸಜ್ಜಿತವಾದ ಚರಂಡಿ ನಿರ್ಮಿಸದೇ ನಿರ್ಲಕ್ಷತ್ರ್ಯ ವಹಿಸಿದ್ದರಿಂದ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮದಲ್ಲಿಆಗಿಂದಾಗ್ಗೆ ಜ್ವರ ಸೇರಿದಂತೆ ನಾನಾ ಖಾಯಿಲೆಗಳಿಂದ ಬಳಲುವಂತಾಗಿದೆ. ಚರಂಡಿ ಪಕ್ಕದಲ್ಲಿಗಿಡಗಂಟೆಗಳು ಬೆಳೆದು ತಿಪ್ಪೆರಾಶಿಯ ಸಂಗ್ರಹದಿಂದ ಸ್ವಚ್ಛತೆ ಮರೀಚಿಕೆಯಾಗಿದ್ದರು ಗ್ರಾಪಂ ಯಾವುದೇ ಕ್ರಮಕೈಗೊಂಡಿಲ್ಲ.

ಮೂಲ ಸೌಲಭ್ಯಗಳ ಕೊರತೆ:
ಗ್ರಾಮದಲ್ಲಿಬಾಕ್ಸ್‌ ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಎಲ್ಲಾಚರಂಡಿಗಳನ್ನು ಸ್ವಚ್ಛತೆ ಮಾಡಿ ಗಿಡಗಂಟಿ ತಿಪ್ಪೆರಾಶಿಗಳನ್ನು ತೆರವುಗೊಳಿಸಿ ಸೂಕ್ತ ಚಿಕಿತ್ಸೆ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಗ್ರಾಪಂಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದೇ ವೇಳೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ತಾಲೂಕು ವೈದ್ಯಾಧಿಧಿಕಾರಿ ಡಾ.ನಾಗರಾಜ್‌, ರಾತ್ರಿಯ ವೇಳೆ ಮಲಗುವಾಗ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಯನ್ನು ಬಳಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ನಾಗರಾಜ್‌, ಬಸವನಕೋಟೆ ವೈದ್ಯ ಡಾ.ಸಿದ್ದೇಶ್‌, ಆರೋಗ್ಯ ನಿರೀಕ್ಷಕ ಪ್ರಶಾಂತ ಕುಮಾರ್‌, ಆಶಾ ಕಾರ್ಯಕರ್ತೆ ಸೌಭಾಗ್ಯ, ಲಕ್ಷಿತ್ರ್ಮ ಸೇರಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ