ಆ್ಯಪ್ನಗರ

ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ; ಬಸವರಾಜ ಬೊಮ್ಮಾಯಿ ಘೋಷಣೆ

ಸರಕಾರ ವಿಧಾನ ಸೌಧದಲ್ಲಿದೆ ಎಂಬುದು ನಮ್ಮ ಭಾವನೆ. ಆದರೆ ನಿಜವಾದ ಸರಕಾರ ಗ್ರಾಮೀಣ ಪ್ರದೇಶದಲ್ಲಿದೆ. ಈ ತತ್ವದಡಿ ಇಡೀ ಸರಕಾರವನ್ನು ಜನರ ಮನೆ ಬಾಗಿಲಿಗೆ ತರಬೇಕು ಎಂಬ ಅಚಲ‌ ನಿರ್ಧಾರ ನಮ್ಮದು ಎಂದರು. ಅಭಿವೃದ್ಧಿ ಜನರ ಸುತ್ತ ಆಗಬೇಕು. ಅಭಿವೃದ್ಧಿ ಸುತ್ತ ಜನ ಸುತ್ತಾಡಬಾರದು ಎಂದ ಬೊಮ್ಮಾಯಿ, ಜನರ ಬಳಿ ಅಭಿವೃದ್ಧಿ ಹೋದಾಗ ಸ್ಥಿರ ಬದುಕು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ 26ರ ನಂತರ ನಿಮ್ಮ ರೇಷನ್ ನಿಮ್ಮ‌‌ಮನೆ ಬಾಗಿಲಿಗೆ ಬರುತ್ತದೆ ಎಂದು ತಿಳಿಸಿದರು.

Vijaya Karnataka Web 16 Oct 2021, 3:35 pm
ದಾವಣಗೆರೆ : ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದರು.
Vijaya Karnataka Web Basavaraja Bommai


ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿ ಮಾತನಾಡಿದರು. ಸರಕಾರ ವಿಧಾನ ಸೌಧದಲ್ಲಿದೆ ಎಂಬುದು ನಮ್ಮ ಭಾವನೆ. ಆದರೆ ನಿಜವಾದ ಸರಕಾರ ಗ್ರಾಮೀಣ ಪ್ರದೇಶದಲ್ಲಿದೆ. ಈ ತತ್ವದಡಿ ಇಡೀ ಸರಕಾರವನ್ನು ಜನರ ಮನೆ ಬಾಗಿಲಿಗೆ ತರಬೇಕು ಎಂಬ ಅಚಲ‌ ನಿರ್ಧಾರ ನಮ್ಮದು ಎಂದರು. ಅಭಿವೃದ್ಧಿ ಜನರ ಸುತ್ತ ಆಗಬೇಕು. ಅಭಿವೃದ್ಧಿ ಸುತ್ತ ಜನ ಸುತ್ತಾಡಬಾರದು ಎಂದ ಬೊಮ್ಮಾಯಿ, ಜನರ ಬಳಿ ಅಭಿವೃದ್ಧಿ ಹೋದಾಗ ಸ್ಥಿರ ಬದುಕು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ 26ರ ನಂತರ ನಿಮ್ಮ ರೇಷನ್ ನಿಮ್ಮ‌‌ಮನೆ ಬಾಗಿಲಿಗೆ ಬರುತ್ತದೆ. ಅಕ್ಕಿ ಬೇಳೆ ನಿಮ್ಮ ಮನೆಗೆ ತಲುಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು. ಸಾಮಾಜಿಕ ಭದ್ರತೆ ಸೇವೆಗಳು ನಿಮ್ಮ ಮನೆಗೆ ಬರಬೇಕು ಎಂದ ಸಿಎಂ ಬೊಮ್ಮಾಯಿ, ಜನವರಿ 26ರ ನಂತರ ಎಲ್ಲ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗಬೇಕು, ಈ ನಿಟ್ಟಿನಲ್ಲಿ ಸರಕಾರ ಸಾಗಿದೆ. ಅಧಿಕಾರ ಹೆಪ್ಪುಗಟ್ಟಿ ವಿಧಾನಸೌಧದಲ್ಲಿ‌‌ ಕೂರಬಾರದು. ಜೇನು ತುಪ್ಪದ ರೀತಿ ಗ್ರಾಮೀಣ ಭಾಗಕ್ಕೆ ಬರಬೇಕು ಎಂದು ಮಾರ್ಮಿಕವಾಗಿ ನುಡಿದರು.
‘ನಾವು ಜಾತಿ ಲೆಕ್ಕಾಚಾರ ಇಟ್ಟು ರಾಜಕೀಯ ಮಾಡಲ್ಲ, ನೀತಿ ಮೇಲೆ ರಾಜಕೀಯ ಮಾಡುತ್ತೇವೆ’; ಡಿಕೆಶಿ
ಬ್ರೋಕರ್‌ಗಳಿಗೆ ಬ್ರೇಕ್: ಗ್ರಾಮ ವಾಸ್ತವ್ಯದ ಮೂಲಕ ಬ್ರೋಕರ್‌ಗಳ ಹಾವಳಿ ತಪ್ಪಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ, ಸ್ಟಾರ್ ಅಂಗಿ‌ ಹಾಕಿಕೊಂಡು ಸಾವಿರಾರು ರೂಪಾಯಿ ಗಳಿಸುತ್ತಿದ್ದವರಿಗೆ ಬ್ರೇಕ್ ಹಾಕುತ್ತೇವೆ ಎಂದು ಖಡಕ್ಕಾಗಿ ಹೇಳಿದರು. ಮಹಾತ್ಮಗಾಂಧಿ ಕಲ್ಪನೆಯಂತೆ ಗ್ರಾಮ ಸ್ವರಾಜ್ಯ ಪ್ರಾರಂಭ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 4 ಲಕ್ಷ ಮನೆ ಕಟ್ಟಲು ನಿರ್ಧಾರ ಮಾಡಿದ್ದೇವೆ. ಹಿಂದಿನ ಸರ್ಕಾರ 9 ಲಕ್ಷ ಮನೆಗಳಿಗೆ ಕೇವಲ 3 ಲಕ್ಷ ಕೋಟಿ ಹಣ ಇಟ್ಟಿದ್ದರು ಎಂದು ಲೇವಡಿ ಮಾಡಿದ ಸಿಎಂ, ಸ್ಲಂಗಳಲ್ಲಿ ವಾಸಿಸುವವರಿಗೆ 1 ಲಕ್ಷ ಮನೆ ಕಟ್ಟಿ ಕೊಡುತ್ತೇವೆ. ಜಲ ಜೀವನ್ ಮಿಷನ್ ಯೋಜನೆಗೆ 2 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. 750 ಗ್ರಾಮಗಳಲ್ಲಿ ಅಮೃತ ಯೋಜನೆ ಅನುಷ್ಠಾನ ಆಗುತ್ತಿದೆ. 75 ಸಾವಿರ ಎಸ್ಸಿ ಎಸ್ಟಿ ಮಕ್ಕಳಿಗೆ ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ಕೊಟ್ಟಿದ್ದೇವೆ ಎಂದರು.
ಗುತ್ತಿಗೆದಾರರ ಮೇಲಿನ ಐಟಿ ದಾಳಿಗೂ ಬಿಎಸ್‌ವೈಗೂ ಯಾವುದೇ ಸಂಬಂಧ ಇಲ್ಲ: ಬಿವೈ ವಿಜಯೇಂದ್ರ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಕಾರ್ಯಕ್ರಮಗಳನ್ನು ನೆನಪಿಸಿದ ಸಿಎಂ ಬೊಮ್ಮಾಯಿ, ಅಭಿವೃದ್ಧಿಯಲ್ಲಿ ಬದಲಾವಣೆ ತಂದ ನಾಯಕ ಯಡಿಯೂರಪ್ಪ. ಪ್ರಗತಿ ಚಕ್ರ ನಿರಂತರವಾಗಿರಬೇಕು. ನಮ್ಮ ರಾಜ್ಯದ ಜನ ಬದುಕು ಶ್ರೀಮಂತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ‌ತೆಗೆದುಕೊಂಡು ಹೋಗುತ್ತೇವೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ದಿನಕ್ಕೆ 20 ತಾಸು ಕೆಲಸ ಮಾಡುವ ಉಮೇದು ಇದೆ. ಉತ್ತಮ ಸಚಿವ ಸಂಪುಟ ಪಡೆ ಇದೆ. ಅಭಿವೃದ್ಧಿ ಕಲ್ಪನೆಯ ಶಾಸಕರ ಪಡೆ ಇದೆ. ಹಾಗಾಗಿ ಜಡಗಟ್ಟಿದ ವ್ಯವಸ್ಥೆ ತೊಲಗಿಸುತ್ತೇವೆ ಎಂದು ಬೊಮ್ನಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ