ಆ್ಯಪ್ನಗರ

ಏ.4 ರಿಂದ 8 ಉಚ್ಚಂಗಿದುರ್ಗ ಉತ್ಸವಾಂಭೆ ಜಾತ್ರೆ

Vijaya Karnataka 29 Mar 2019, 5:00 am
ಹರಪನಹಳ್ಳಿ : ಮಧ್ಯ ಕರ್ನಾಟಕದ ಪ್ರಸಿದ್ಧ ಎ ಶ್ರೇಣಿಯ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಶಕ್ತಿ ದೇವತೆ ಉಚ್ಚಂಗೆಮ್ಮ ದೇವಿ ಜಾತ್ರಾ ಮಹೋತ್ಸವ ಏಪ್ರಿಲ್‌ 4 ರಿಂದ 8 ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗುತ್ತಿದೆ.
Vijaya Karnataka Web uchangadurga festivities festival from 4th to 8th
ಏ.4 ರಿಂದ 8 ಉಚ್ಚಂಗಿದುರ್ಗ ಉತ್ಸವಾಂಭೆ ಜಾತ್ರೆ


ಏಪ್ರಿಲ್‌ 4 ರಂದು ಮಹಾಚತುರ್ದಶಿ ಹಾಗೂ ಓಕುಳಿ ಗುಣಿ ಪೂಜೆ, ಏ.5 ರಂದು ಯುಗಾದಿ ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮಹಾ ಪೂಜೆ, ಏ.6 ರಂದು ವಿಕಾರಿನಾಮ ಸಂವತ್ಸರ ಆರಂಭದಂದು ಉಚ್ಚಂಗೆಮ್ಮನ ಉತ್ಸವ ಮೂರ್ತಿಯನ್ನು ನಾನಾ ವಾದ್ಯಗಳಲ್ಲಿ ಪಾದಗಟ್ಟೆಗೆ ತೆಗೆದುಕೊಂಡು ಹೋಗಿ ಓಕುಳಿ ಉತ್ಸವ ಜರುಗಲಿದೆ. ಏ.7 ರಂದು ಚಂದ್ರ ದರ್ಶನ ಹಾಗೂ ಆನೆಗೊಂಡದ ಉತ್ಸವ, ಏ.8 ರಂದು ಮಹಾಪೂಜೆ ಹಾಗೂ ಭಕ್ತರಿಂದ ನಾನಾ ಸೇವೆ ನಡೆಯಲಿವೆ.

ಮೂಲ ಸೌಲಭ್ಯಕ್ಕೆ ಆದ್ಯತೆ:

ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು ಲಕ್ಷಾಂತರ ಭಕ್ತಾದಿಗಳು ಉಚ್ಚಂಗೆಮ್ಮನ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ವಿಶೇಷವಾಗಿ ಜಾತ್ರೆ ಪಕ್ಕದ ಹಾಲಮ್ಮನ ತೋಪಿನಲ್ಲಿ ನಡೆಯಲಿದ್ದು, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಮತ್ತು ಶ್ರೀ ಉಚ್ಚಂಗೆಮ್ಮ ದೇವಿ ಆಡಳಿತ ಮಂಡಳಿಯಿಂದ ಬರುವ ಭಕ್ತಾದಿಗಳಿಗೆ ಯಾವುದೇ ರೀತಿ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸಿದ್ಧತೆ ನಡೆಸಿದೆ.

ನೀರು, ಭದ್ರತೆ, ಸ್ವಚ್ಛತೆ:
ನೀರಿನ ತೊಂದರೆಯಾಗದಂತೆ ಟ್ಯಾಂಕರ್‌ ಮೂಲಕ ನೀರು ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರ, ಜಾತ್ರೆ ನಡೆಯುವ ಜಾಗದ ಸ್ವಚ್ಛತೆ, ಸಾರಿಗೆ ಇಲಾಖೆಯಿಂದ ದಾವಣಗೆರೆ ಹಾಗೂ ಹರಪನಹಳ್ಳಿಯಿಂದ ಹಾಲಮ್ಮನ ತೋಫಿಗೆ ಬಸ್‌ ವ್ಯವಸ್ಥೆ, ಶಾಂತಿ ಸುವ್ಯವಸ್ಥೆಗಾಗಿ ಹೆಚ್ಚು ಪೊಲೀಸ್‌ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರ್‌ ಪ್ರಸಾದ್‌ ತಿಳಿಸಿದ್ದಾರೆ.

ಸೌಕರ್ಯಕ್ಕೆ ಆದ್ಯತೆ
ತಾಲೂಕು ಆಡಳಿತ, ಶ್ರೀ ಉಚ್ಚಂಗೆಮ್ಮೆದೇವಿ, ಹಾಲಮ್ಮ ದೇವಸ್ಥಾನದ ಸಮಿತಿ ಒಳಗೊಂಡು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಾತ್ರೆ ಯಶಸ್ವಿಯಾಗಿ ನಡೆಸಲು ತಯಾರಿ ನಡೆಸಲಾಗಿದೆ ಎನ್ನುತ್ತಾರೆ ಉತ್ಸವಾಂಭ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಿವಕುಮಾರ ಸ್ವಾಮಿ.

ಜಾತ್ರೆಗೆ ವಿಶೇಷ ಬಸ್‌
ಜಾತ್ರೆಗೆ ವಿಶೇಷವಾಗಿ ಹರಪನಹಳ್ಳಿ ಹಾಗೂ ದಾವಣಗೆರೆಯಿಂದ ಉಚ್ಚಂಗಿದುರ್ಗದ ಹಾಲಮ್ಮನ ತೋಫಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ನೂತನವಾಗಿ ಅಣಜಿ ಕ್ರಾಸ್‌ ನಿಂದ ಆನಗೋಡಿಗೆ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ಡಿಟಿಒ ಮಂಜುನಾಥ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ