ಆ್ಯಪ್ನಗರ

‘ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’: ಕ್ಷಮೆ ಕೇಳಿದ ವಚನಾನಂದ ಸ್ವಾಮೀಜಿ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಕ್ಷಮೆ ಕೇಳಿದ್ದಾರೆ.

Vijaya Karnataka Web 15 Jan 2020, 5:38 pm

ದಾವಣಗೆರೆ: ಮಂಗಳವಾರ ಮುರುಗೇಶ್‌ ನಿರಾಣಿಯನ್ನು ಮಂತ್ರಿ ಮಾಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮ ಕೈ ಬಿಡಲಿದೆ ಎಂಬುದಾಗಿ ಬೆದರಿಸುವ ದಾಟಿಯಲ್ಲಿ ಮಾತನಾಡಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೋಪಕ್ಕೆ ಗುರಿಯಾಗಿದ್ದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಬುಧವಾರ ಕ್ಷಮೆ ಕೋರಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಕ್ಷಮೆ ಕೇಳಿದ್ದಾರೆ.

“ನನ್ನ ಜತೆ ಸಮಾಜವಿದೆ. ಸಮಾಜಕ್ಕಾಗಿ ನಾನು. ನನ್ನಿಂದ ಯಾವುದಾದರೂ ತಪ್ಪುಗಳಾಗಿದ್ರೆ ಕ್ಷಮಿಸಿ,” ಎಂಬುದಾಗಿ ಅವರು ನೆರೆದಿದ್ದ ಜನರ ಮುಂದೆ ಹೇಳಿದ್ದಾರೆ. ಪರೋಕ್ಷವಾಗಿ ಮಂಗಳವಾರ ಸಿಎಂ ವಿರುದ್ಧ ಮಾತಾಡಿದನ್ನು ಪ್ರಸ್ತಾಪಿಸಿದ ಸ್ವಾಮೀಜಿ, ‌’ನನ್ನಿಂದ ತಪ್ಪಾಗಿದ್ದರೆ ಅದನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ’ ಎಂದು ವಿನಂತಿ‌ಸಿಕೊಂಡಿದ್ದಾರೆ.

ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ v/s ಯಡಿಯೂರಪ್ಪ, ವೇದಿಕೆಯಿಂದ ಹೊರನಡೆಯಲೆತ್ನಿಸಿದ ಸಿಎಂ

“ನಾನು ಇನ್ನೂ ಸಣ್ಣವ. ನಾನು ಮನಸ್ಸು ಮಾಡಿದ್ದರೆ ಯಾವುದೋ ದೇಶದಲ್ಲಿ ವಾಸವಾಗಬಹುದಿತ್ತು. ಆದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಬಂದಿದ್ದೇನೆ‌,” ಎಂಬುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ