ಆ್ಯಪ್ನಗರ

ಚಿರತೆ ಹೊಕ್ಕ ತೂಬಿಗೆ ಬೆಂಕಿಯಿಟ್ಟ ಗ್ರಾಮಸ್ಥರು

ಮಾಗಡಿ ಗ್ರಾಮದ ಕೆರೆ ತೂಬಿನಲ್ಲಿ ಅವಿತುಕೊಂಡ ಚಿರತೆಯನ್ನು ಗ್ರಾಮಸ್ಥರು ಬೆಂಕಿ ಹಚ್ಚಿ ಸುಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ವಿಕ ಸುದ್ದಿಲೋಕ 19 Apr 2017, 9:18 am
ಜಗಳೂರು : ತಾಲೂಕಿನ ಮಾಗಡಿ ಗ್ರಾಮದ ಕೆರೆ ತೂಬಿನಲ್ಲಿ ಅವಿತುಕೊಂಡ ಚಿರತೆಯನ್ನು ಗ್ರಾಮಸ್ಥರು ಬೆಂಕಿ ಹಚ್ಚಿ ಸುಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web villagers put fire to cheetah
ಚಿರತೆ ಹೊಕ್ಕ ತೂಬಿಗೆ ಬೆಂಕಿಯಿಟ್ಟ ಗ್ರಾಮಸ್ಥರು


ತಾಲೂಕಿನ ಕೊಂಡುಕುರಿ ಅರಣ್ಯಧಾಮ ಅಂಚಿನಲ್ಲಿರುವ ಮಡ್ರಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಮಾಗಡಿ ಗ್ರಾಮದಲ್ಲಿ ರಾತ್ರಿ 8 ಗಂಟೆಗೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿ ಚಿರತೆ ಓಡಿಸಿದ್ದಾರೆ. ಹೆದರಿ ಗ್ರಾಮದ ಕೆರೆ ತೂಬಿನೊಳಗೆ ಚಿರತೆ ಅವಿತುಕೊಂಡಿದೆ. ತೂಬಿನ ಎರಡು ಕಿಂಡಿಗಳನ್ನು ಮುಚ್ಚಿ ಚಿರತೆಯನ್ನು ಸಜೀವವಾಗಿ ಗ್ರಾಮಸ್ಥರು ಸುಟ್ಟಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಬಂಧಿಸಿದಂತೆ ಗ್ರಾಮಸ್ಥರನ್ನು ಕೇಳಿದಾಗ ಯಾವ ವ್ಯಕ್ತಿಯೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅರಣ್ಯಾಧಿಕಾರಿ ದಿನೇಶ್ ತಿಳಿಸಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ