ಆ್ಯಪ್ನಗರ

ದಿಢೀರ್‌ ಸಿಂಗಾರಗೊಳ್ಳುತ್ತಿವೆ ಗ್ರಾಮಗಳು!

ಈಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆಯ ಸದ್ದು . ಗ್ರಾಮಗಳಲ್ಲಿನ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಸಂತೆ ಮೈದಾನ, ಕುಡಿವ ನೀರು ಸಂಗ್ರಹಿಸುವ ಟ್ಯಾಂಕ್‌ಗಳು, ಪಂಚಾಯಿತಿ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮದ ಮುಖ್ಯ ಬೀದಿ ಸೇರಿದಂತೆ ಎಲ್ಲ ಕಡೆಯೂ ಗುಡಿಸಿ-ಸಿಂಗರಿಸುವ ಕೆಲಸಕ್ಕೆ ವೇಗ ಬಂದಿದೆ.

Vijaya Karnataka 15 Aug 2018, 5:00 am
ಯಳನಾಡು ಮಂಜು ದಾವಣಗೆರೆ
Vijaya Karnataka Web villages in the immediate aftermath
ದಿಢೀರ್‌ ಸಿಂಗಾರಗೊಳ್ಳುತ್ತಿವೆ ಗ್ರಾಮಗಳು!


ಈಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆಯ ಸದ್ದು . ಗ್ರಾಮಗಳಲ್ಲಿನ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಸಂತೆ ಮೈದಾನ, ಕುಡಿವ ನೀರು ಸಂಗ್ರಹಿಸುವ ಟ್ಯಾಂಕ್‌ಗಳು, ಪಂಚಾಯಿತಿ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮದ ಮುಖ್ಯ ಬೀದಿ ಸೇರಿದಂತೆ ಎಲ್ಲ ಕಡೆಯೂ ಗುಡಿಸಿ-ಸಿಂಗರಿಸುವ ಕೆಲಸಕ್ಕೆ ವೇಗ ಬಂದಿದೆ. ಇದಕ್ಕೆ ಹೊಸ್ತಿಲಿನಲ್ಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರಣವಲ್ಲ. ಗ್ರಾಮ ನೈರ್ಮಲ್ಯಕ್ಕೆ ತಾನು ನೀಡಿದ ಹಣವನ್ನು ಪಂಚಾಯಿತಿಗಳು ಹೇಗೆ ಖರ್ಚು ಮಾಡಿಕೊಂಡಿವೆ ಎಂಬುದರ ಬಗ್ಗೆ ಪರಿಶೀಲಿಸಲೆಂದು ಕೇಂದ್ರ ಸರಕಾರ ತಂಡವೊಂದನ್ನು ಕಳುಹಿಸುತ್ತಿದೆ. ಇದರ ಸುಳಿವು ಅರಿತ ರಾಜ್ಯ ಸರಕಾರವೇ, ''ತಕ್ಷಣ ಊರು ಸ್ವಚ್ಛಗೊಳಿಸಿ, ಸಿಂಗಾರವಾಗಿಟ್ಟುಕೊಳ್ಳಿ,'' ಎಂದು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಆದೇಶವೊಂದನ್ನು ಹೊರಡಿಸಿದೆ. ಅಧ್ಯಯನಕ್ಕೆ ಬರಲಿರುವ ಕೇಂದ್ರ ತಂಡ ಗ್ರಾಮ ನೈರ್ಮಲ್ಯ ಬಗ್ಗೆ ಮೌಲ್ಯಮಾಪನ ಮಾಡಿ ಮಾರ್ಕ್ಸ್‌ ನೀಡಲಿದೆ. ಅದರಲ್ಲಿ ಒಳ್ಳೆಯ ಅಂಕ ಪಡೆದರೆ, ಮತ್ತಷ್ಟು ಅನುದಾನ-ಕೀರ್ತಿ ಎಂಬ ಆಸೆಯಲ್ಲಿ ಎಲ್ಲೆಲ್ಲೂ ಸ್ವಚ್ಛತೆಯ ಸಡಗರ.

''ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸಾವಿರಾರು ಕೋಟಿ ಅನುದಾನ ಗ್ರಾಮಗಳಿಗೆ ಹರಿದು ಬಂದಿದೆ. ಈ ಹಣದ ಸದುಪಯೋಗ ಆಗಿರುವ ಕುರಿತು ತಂಡ ಅಧ್ಯಯನ ನಡೆಸಿ,ಗ್ರಾಮಗಳಲ್ಲಿ ಆಗಿರುವ ಸ್ವಚ್ಛತೆ ಕೆಲಸಗಳಿಗೆ ತಕ್ಕಂತೆ

ಜಿಲ್ಲಾವಾರು ಶ್ರೇಣಿ ನೀಡಲಿದೆ. ಇದಕ್ಕಾಗಿ ಎಲ್ಲ ಕಡೆಯೂ ಸ್ವಚ್ಛತೆಗೆ ವೇಗ ಬಂದಿದೆ,'' ಎಂದು ಅಧಿಕಾರಿಯೊಬ್ಬರು ವಿಜಯ ಕರ್ನಾಟಕಕ್ಕೆ ತಿಳಿಸಿದರು.

ತಂಡ ದಿಢೀರ್‌ ಭೇಟಿ


ಸರ್ವೇಕ್ಷಣಾ ತಂಡ ಭೇಟಿ ನೀಡುವ ದಿನಾಂಕ ಪ್ರಕಟಿಸದೆ ದಿಢೀರ್‌ ಹಾಜರಾಗುತ್ತಿದೆ. ರಾಜ್ಯಕ್ಕೆ ಒಂದೆರಡು ದಿನದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಗ್ರಾಮಗಳ ವೀಕ್ಷಣೆಗೆ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ 2018 ಕಾರ್ಯಕ್ರಮಕ್ಕೆ ಹೊಸದಿಲ್ಲಿ ಮಟ್ಟದಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ನೂರು ಅಂಕಗಳಿಗೆ ಈ ಪರೀಕ್ಷೆ ನಡೆಯಲಿದೆ. ಸರ್ವೇಕ್ಷಣೆ ಹೊಣೆಯನ್ನು ಒಂದು ಎನ್‌ಜಿಒಗೆ ವಹಿಸಲಾಗಿದೆ.

ಮೊದಲ ಹಂತದಲ್ಲಿ ಈ ತಂಡ ರಾಜ್ಯದಲ್ಲಿ ದಾವಣಗೆರೆ, ಹಾಸನ, ಬಳ್ಳಾರಿ ಮೂರು ಜಿಲ್ಲೆಗಳ ಗ್ರಾಮಗಳಿಗೆ ಭೇಟಿ ನೀಡಲಿದೆ. ಈ ತಂಡ ಗ್ರಾಮ ನೈರ್ಮಲ್ಯದ ಬಗ್ಗೆ ಮೌಲ್ಯಮಾಪನ ಮಾಡಲಿದೆ. ಶೌಚಾಲಯ ನಿರ್ಮಾಣದ ಪ್ರಗತಿ, ಜಿಯೋ ಟ್ಯಾಗ್‌ ಫೋಟೋ ಆರೋಹಣ, ಬಯಲು ಶೌಚಮುಕ್ತ ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ ಹಾಗೂ ನಿರುಪಯುಕ್ತ ಶೌಚಾಲಯಗಳನ್ನು ತಂಡ ವೀಕ್ಷಿಸಲಿದೆ.

ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮವನ್ನು ಕೇಂದ್ರ ಶುರು ಮಾಡಿದ್ದು ತಂಡ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ, ಇಲ್ಲಿನ ಕೆಲ ಗ್ರಾಮಗಳಲ್ಲಿ ನೈರ್ಮಲ್ಯದ ಮೌಲ್ಯಮಾಪನ ಮಾಡಲಿದೆ.

- ಎಸ್‌.ಅಶ್ವತಿ, ಸಿಇಒ, ಜಿಪಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ