ಆ್ಯಪ್ನಗರ

ಗೆಲುವಿನ ಲೆಕ್ಕಾಚಾರದ ಕಾರುಬಾರು, ಬೆಟ್ಟಿಂಗ್‌ ಜೋರು

ಚುನಾವಣೆ ಎಂಬ ಪ್ರಜಾಪ್ರಭುತ್ವದ ಮಹಾ ಸಂಗ್ರಾಮ ಮುಗಿದಿದೆ. ಕಳೆದ 40 ದಿನಗಳಿಂದ ಇದ್ದ ರಾಜಕೀಯ ಪ್ರಭಾವಳಿ ಈಗ ಇಳಿಯುತ್ತಿದೆ. ಈ ಹಿಂದೆ ಜನರ ನಡುವೆ ಯಾರಿಗೆ ಮತ ಹಾಕೋಣ, ಯಾರಿಗೆ ಹಾಕಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಯಾರು ಗೆಲ್ಲಬಹುದೆಂಬ ಲೆಕ್ಕಾಚಾರದ ಚರ್ಚೆ ನಡೆಯುತ್ತಿದೆ.

Vijaya Karnataka 14 May 2018, 3:33 pm
ಹರಿಹರ : ಚುನಾವಣೆ ಎಂಬ ಪ್ರಜಾಪ್ರಭುತ್ವದ ಮಹಾ ಸಂಗ್ರಾಮ ಮುಗಿದಿದೆ. ಕಳೆದ 40 ದಿನಗಳಿಂದ ಇದ್ದ ರಾಜಕೀಯ ಪ್ರಭಾವಳಿ ಈಗ ಇಳಿಯುತ್ತಿದೆ. ಈ ಹಿಂದೆ ಜನರ ನಡುವೆ ಯಾರಿಗೆ ಮತ ಹಾಕೋಣ, ಯಾರಿಗೆ ಹಾಕಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಯಾರು ಗೆಲ್ಲಬಹುದೆಂಬ ಲೆಕ್ಕಾಚಾರದ ಚರ್ಚೆ ನಡೆಯುತ್ತಿದೆ.
Vijaya Karnataka Web winning the car winning betting
ಗೆಲುವಿನ ಲೆಕ್ಕಾಚಾರದ ಕಾರುಬಾರು, ಬೆಟ್ಟಿಂಗ್‌ ಜೋರು


ಚಹಾ, ಕಿರಾಣಿ ಅಂಗಡಿ, ಹೋಟಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಬಸ್‌, ಆಟೋ, ರೈಲುಗಳಲ್ಲಿ, ನಗರದಲ್ಲಿ, ಹಳ್ಳಿಯಲ್ಲಿ, ಪರಿಚಯ ಇರಲಿ, ಬಿಡಲಿ ನಾಲ್ಕೈದು ಜನರ ನಡುವೆ ಈಗ ಕ್ಷೇತ್ರ, ಜಿಲ್ಲೆ, ರಾಜ್ಯದ ದಿಕ್ಕು, ದೆಸೆ ಹೇಗಾಗಬಹುದೆಂಬ ಲೆಕ್ಕಾಚಾರದ್ದೆ ಕಾರು, ಬಾರು.

ಒಂದೆಡೆ ಇದು ಚರ್ಚೆಗೆ ಸೀಮಿತವಾಗಿದ್ದರೆ, ಇನ್ನೊಂದೆಡೆ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಅಭ್ಯರ್ಥಿಯೆ ಗೆಲ್ಲುತ್ತಾನೆಂದು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಬೆಟ್ಟಿಂಗ್‌ ಮೊತ್ತ ಸಾವಿರದಿಂದ ಒಂದು ಲಕ್ಷ ದವರೆಗೂ ಸಾಗುತ್ತದೆ.

ಚರ್ಚೆಯ ಸಂದರ್ಭದಲ್ಲಿ ಇಂತಹ ಅಭ್ಯರ್ಥಿಯೆ ಏಕೆ ಗೆಲ್ಲುತ್ತಾನೆ, ಹೇಗೆ ಗೆಲ್ಲುತ್ತಾನೆಂಬ ಕಾರಣಗಳನ್ನೂ ನೀಡುತ್ತಾರೆ. ಸೋಲುವ ಅಭ್ಯರ್ಥಿ ಏಕೆ ಸೋಲುತ್ತಾರೆಂಬ ಅಂಶಗಳನ್ನು ಬಿಡಿ, ಬಿಡಿಯಾಗಿ ಬಿಚ್ಚಿಡುತ್ತಾರೆ. ಒಟ್ಟಾರೆ ಎಣಿಕೆ ನಡೆಯುವ ಮೇ 15ರ ವರೆಗೂ ಇಂತಹ ಚರ್ಚೆ ನಡೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ