ಆ್ಯಪ್ನಗರ

ಕೆಲಸ ಸಿಗದಿದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

ವಿದ್ಯಾವಂತನಾಗಿದ್ದರೂ, ಉದ್ಯೋಗವಿಲ್ಲ ಎಂದು ಮನನೊಂದ ಯುವಕನೊಬ್ಬ ಸಿಎಂ ಕುಮಾರಸ್ವಾಮಿಗೆ ಉದ್ಯೋಗ ಸೃಷ್ಟಿಸುವಂತೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊಸನಗರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Vijaya Karnataka 4 Jul 2018, 5:00 am
ದಾವಣಗೆರೆ : ವಿದ್ಯಾವಂತನಾಗಿದ್ದರೂ, ಉದ್ಯೋಗವಿಲ್ಲ ಎಂದು ಮನನೊಂದ ಯುವಕನೊಬ್ಬ ಸಿಎಂ ಕುಮಾರಸ್ವಾಮಿಗೆ ಉದ್ಯೋಗ ಸೃಷ್ಟಿಸುವಂತೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊಸನಗರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
Vijaya Karnataka Web young man commits suicide
ಕೆಲಸ ಸಿಗದಿದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ


ಬಿ.ಅನಿಲ್‌(22)ಜಮೀನಿನಲ್ಲಿ ನೇಣಿಗೆ ಶರಣಾದವ. ಬಸವಾಪಟ್ಟಣದಲ್ಲಿ ಬಿಎ ಪದವಿ ಮುಗಿಸಿ, ಕೆಎಎಸ್‌, ಐಎಎಸ್‌ ಮಾಡಲು ಕನಸು ಹೊತ್ತು ಟ್ರೈನಿಂಗ್‌ ಹೋಗಲು ಸಿದ್ದತೆ ಮಾಡಿಕೊಂಡಿದ್ದ. ಮೂವರು ಮಕ್ಕಳಲ್ಲಿ, ಒಬ್ಬ ದಾವಣಗೆರೆ ವಿವಿಯಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದು, ಇನ್ನೊಬ್ಬ ಅಂಗಡಿ ನಡೆಸುತ್ತಿದ್ದಾನೆ.

ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಾ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉದ್ದೇಶಿಸಿ ಮಾತನಾಡಿದ ಅನಿಲ್‌, ಪದವೀಧರ ವಿದ್ಯಾರ್ಥಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಕಡೆಗಣಿಸಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ಈ ಎರಡು ಸರಕಾರ ವಿಫಲವಾಗಿವೆ. ಕೇವಲ ರಾಜಕಾರಣಿಗಳು ತಮ್ಮ ಮಕ್ಕಳು, ಸಂಬಂಧಿಕರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೆಲಸ ಸಿಗುತ್ತಿಲ್ಲ. ಸರಕಾರಗಳ ಈ ನಡೆಗೆ ಬೇಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿನಿಂದ ಇತರೆ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರಿಗೆ ಕೆಲಸ ಸಿಗುವಂತಾಗಲಿ. ಇದನ್ನು ಸಿಎಂ ಪರಿಗಣನೆಗೆ ತೆಗೆದುಕೊಳ್ಳಲಿ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ವಿದ್ಯಾವಂತರಿದ್ದು, ಅವರೆಲ್ಲ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಆದ್ದರಿಂದ ನಾನೊಬ್ಬ ಬಡ ವಿದ್ಯಾರ್ಥಿಯಾಗಿ, ಬಡಕುಟುಂಬದ ವ್ಯಕ್ತಿಯಾಗಿ, ನಿರುದ್ಯೋಗ ಯುವಕನಾಗಿ ಸರಕಾರಕ್ಕೆ ನನ್ನ ಸಾವಿನ ವರದಿ ನೀಡುತ್ತಿದ್ದೇನೆ. ಸರಕಾರ ನನ್ನ ಸಾವಿನಿಂದಾದರೂ ಎಚ್ಚೆತ್ತು ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ಮತ್ತು ಬಡತನ ನಿವಾರಣೆ ಮಾಡಲಿ. ನನ್ನ ಸಾವು ವಿದ್ಯಾವಂತ ಯುವಕರಿಗೆ ಹಾಗೂ ಕೆಲಸ ಇಲ್ಲದವರಿಗೆ ಮಾತ್ರ ಅರ್ಥವಾಗುತ್ತದೆ. ಆದ್ದರಿಂದ ಸರಕಾರ ಉದ್ಯೋಗ ಸೃಷ್ಟಿಸಿ ಯುವಕರನ್ನು ಉಳಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬಸವಪಟ್ಟಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ