ಆ್ಯಪ್ನಗರ

ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನಿಂದ ಮಹಿಳೆಯರಿಗೆ ವಿಶೇಷ ಕೊಡುಗೆ

ಮಹಿಳಾ ದಿನಾಚರಣೆಯ ಪ್ರಯುಕ್ತ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮಹಿಳೆಯರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ಅದೇನೆಂದರೆ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಕ್ಯಾಬ್ ಸೇವೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Vijaya Karnataka Web 7 Mar 2020, 4:54 pm
ಪುರುಷರಂತೆ ಮಹಿಳೆಯರೂ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಇದೀಗ ಡ್ರೈವಿಂಗ್ ಸೀಟ್ ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಓರೆಗಚ್ಚುತ್ತಿದ್ದಾರೆ.
Vijaya Karnataka Web cab

ಇತ್ತೀಚಿನ ದಿನಗಳಲ್ಲಿ ಮಹಿಳಾ ಚಾಲಕರ ಸಂಖ್ಯೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಕ್ಯಾಬ್ ಡ್ರೈವರ್‌ಗಳ ಜಗತ್ತಿನಲ್ಲಿ ಪುರುಷರ ಪ್ರಾಬಲ್ಯವಿದೆ. ಆದರೆ ದೆಹಲಿಯಲ್ಲಿ ಒಂದು ಸಣ್ಣ ಕ್ಯಾಬ್ ಕಂಪನಿ ಇದೆ, ಅಲ್ಲಿ ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಸ್ತ್ರೀಯರೇ ಆಗಿದ್ದಾರೆ.

ಭಾರತದಲ್ಲಿ ಮಹಿಳೆಯರ ಸುರಕ್ಷತೆಯೇ ಒಂದು ದೊಡ್ಡ ಸವಾಲಿನ ವಿಷಯ. ಆದ್ದರಿಂದ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರೇ ಕ್ಯಾಬ್ ಅನ್ನು ಡ್ರೈವ್ ಮಾಡುವುದು ಒಂದು ಉತ್ತಮ ಸೇವೆಯೆಂದೇ ಹೇಳಬಹುದು. 'ಸಾಧಿಸಿದರೆ ಸಬಳ ನುಂಗಬಹುದು' ಎನ್ನುವ ಮಾತಿನಂತೆ, ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ, ಸಾಧಿಸಬಹುದು. ಅವಳ ಸಾಧನೆಯ ತುಡಿತಕ್ಕೆ ಊರುಗೋಲಾಗಿ, ಮಹಿಳಾ ದಿನಾಚರಣೆಯ ಪ್ರಯುಕ್ತ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮಹಿಳೆಯರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ಅದೇನೆಂದರೆ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಕ್ಯಾಬ್ ಸೇವೆ.



ಈ ಕ್ಯಾಬ್ ಸೇವೆಯು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಮತ್ತು ಆರ್ಥಿಕತೆಯ ದೃಷ್ಟಿಯಿಂದಲೂ ಅನುಕೂಲವಾಗಿದೆ. ಈ ಕ್ಯಾಬ್ ಸೇವೆಗಳನ್ನು ತರಬೇತಿ ಪಡೆದ ಮಹಿಳಾ ಚಾಲಕಿಯರು ಸಮವಸ್ತ್ರವನ್ನು ಧರಿಸಿ ಕ್ಯಾಬ್ ನ್ನು ಚಲಾಯಿಸುತ್ತಾರೆ. ಈ ಕ್ಯಾಬ್ ಸೇವೆಗಳು ದೆಹಲಿ-ಎನ್‌ಸಿಆರ್‌ನ ಎಲ್ಲಾ ಸ್ಥಳಗಳಿಗೆ ಮತ್ತು ಎರಡು ಹೊರವಲಯದ ಸ್ಥಳಗಳಾದ ಆಗ್ರಾ ಮತ್ತು ಜೈಪುರಕ್ಕೆ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ