ಆ್ಯಪ್ನಗರ

ಮಹಿಳಾ ಸ್ವಾತಂತ್ರ್ಯಕ್ಕೆ ಶರಣರ ಕ್ರಾಂತಿಯೇ ಕಾರಣ

ಹುಬ್ಬಳ್ಳಿ : ಬಸವಾದಿ ಶರಣರು 12ನೇ ಶತಮಾನದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಹಳ ಶ್ರಮವಹಿಸಿದ್ದಾರೆ. ಶರಣರ ಕ್ರಾಂತಿಯಿಂದ ಸಮಾಜದಲ್ಲಿ ಮಹಿಳೆ ಉನ್ನತ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದು ಬಸವಕೇಂದ್ರದ ಅಧ್ಯಕ್ಷ ಡಾ ಬಿ. ವ್ಹಿ. ಶಿರೂರ ಹೇಳಿದರು.

ವಿಕ ಸುದ್ದಿಲೋಕ 21 May 2017, 4:30 am

ಹುಬ್ಬಳ್ಳಿ : ಬಸವಾದಿ ಶರಣರು 12ನೇ ಶತಮಾನದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಹಳ ಶ್ರಮವಹಿಸಿದ್ದಾರೆ. ಶರಣರ ಕ್ರಾಂತಿಯಿಂದ ಸಮಾಜದಲ್ಲಿ ಮಹಿಳೆ ಉನ್ನತ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದು ಬಸವಕೇಂದ್ರದ ಅಧ್ಯಕ್ಷ ಡಾ ಬಿ. ವ್ಹಿ. ಶಿರೂರ ಹೇಳಿದರು.

ನಗರದ ಕರ್ನಾಟಕ ವಚನ ಸಾಹಿತ್ಯ ಪರಿಷತ್‌, ಮಹಾಮಾನವತಾವಾದಿ ಬಸವಣ್ಣ ಕುರಿತು ಏರ್ಪಡಿಸಿದ್ದ ನಿಬಂಧ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಬಸವತತ್ವ ಚಿಂತನ ಮಂಥನ ಆದರ್ಶ ಪಾಲನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಕಿರಿಯರ ವಿಭಾಗದಲ್ಲಿ ಜ್ಯೋತಿ ಶಾಂತಪ್ಪ ವಿಬೂತಿ, ಮೇಘಾ ಶಾಂತಪ್ಪ ವಿಬೂತಿ, ಹಿರಿಯರ ವಿಭಾಗದಲ್ಲಿ ಉಮಾ ಸತೀಶ ಅಣ್ಣಿಗೇರಿ, ರಮಾ ನಿಲಪ್ಪಗೌಡರ, ರೇಣುಕಾ ಕಮತರ, ಅಶೋಕ ಸೋಭಾನದ, ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕ (ಶೇ.94) ಪಡೆದು ಪಾಸಾದ ಉಷಾ ಉಮೇಶ ಉಗಲಾಟ ಅವರನ್ನು ಸನ್ಮಾನಿಸಲಾಯಿತು.

ಕವಸಾಪ ಜಿಲ್ಲಾಧ್ಯಕ್ಷ ಸುವರ್ಣಲತಾ ಗದಿಗೆಪ್ಪಗೌಡರ ಅಧ್ಯಕ್ಷ ತೆ ವಹಿಸಿದ್ದರು. ಪ್ರೊ ಎನ್‌.ಆರ್‌. ಬಾಳಿಕಾಯಿ ಮಾತನಾಡಿದರು. ಅನ್ನಪೂರ್ಣ ಅಗಡಿ ಸ್ವಾಗತಿಸಿದರು. ಸುರೇಶ ಡಿ. ಹೊರಕೇರಿ ನಿರೂಪಿಸಿದರು. ಮಾಲಾಭಾಯಿ ಗಜಕೋಶ ವಂದಿಸಿದರು.

ಭಾರತಿ ಹಿರೇಗೌಡರ, ಪ್ರಮೀಳಾ ಹಟ್ಟಿಹೋಳಿ ವಚನಗಳನ್ನು ಹಾಡಿದರು. ಗುರುಸಿದ್ಧೇಶ್ವರ ಮಹಿಳಾ ಮಂಡಳದ ಅಧ್ಯಕ್ಷ ನಿರ್ಮಲಾ ಹಿರೇಮಠ, ಸುಲೋಚನಾ ಶಿರ್ಸಿಕರ, ನಿರ್ಮಲಾ ಅಂಗಡಿ, ಸುರಜ, ಸುವರ್ಣಲತಾ ಗದಿಗೆಪ್ಪಗೌಡರ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ