Please enable javascript.ಬೈಕ್ ಸವಾರನ ಮೇಲೆ ಪೊಲೀಸ್ ದೌರ್ಜನ್ಯ!ಹೆಲ್ಮೆಟ್ ವಾಗ್ವಾದ:ಮಧ್ಯೆ ಪ್ರವೇಶಿಸಿದವನಿಗೇ ಗುದ್ದು - ಬೈಕ್ ಸವಾರನ ಮೇಲೆ ಪೊಲೀಸ್ ದೌರ್ಜನ್ಯ!ಹೆಲ್ಮೆಟ್ ವಾಗ್ವಾದ:ಮಧ್ಯೆ ಪ್ರವೇಶಿಸಿದವನಿಗೇ ಗುದ್ದು - Vijay Karnataka

ಬೈಕ್ ಸವಾರನ ಮೇಲೆ ಪೊಲೀಸ್ ದೌರ್ಜನ್ಯ!ಹೆಲ್ಮೆಟ್ ವಾಗ್ವಾದ:ಮಧ್ಯೆ ಪ್ರವೇಶಿಸಿದವನಿಗೇ ಗುದ್ದು

ವಿಕ ಸುದ್ದಿಲೋಕ 31 Mar 2013, 5:00 am
Subscribe

ಹುಬ್ಬಳ್ಳಿ:ಹೆಲ್ಮೆಟ್ ಧರಿಸದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಲು ಬಂದ ಮತ್ತೊಬ್ಬ ಬೈಕ್ ಸವಾರನ ಮೇಲೆ ಉತ್ತರ

ಬೈಕ್ ಸವಾರನ ಮೇಲೆ ಪೊಲೀಸ್ ದೌರ್ಜನ್ಯ!ಹೆಲ್ಮೆಟ್ ವಾಗ್ವಾದ:ಮಧ್ಯೆ ಪ್ರವೇಶಿಸಿದವನಿಗೇ ಗುದ್ದು
ಹುಬ್ಬಳ್ಳಿ:ಹೆಲ್ಮೆಟ್ ಧರಿಸದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಲು ಬಂದ ಮತ್ತೊಬ್ಬ ಬೈಕ್ ಸವಾರನ ಮೇಲೆ ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಇಲ್ಲಿನ ನೇಕಾರ ನಗರದ ಅಜ್ಮೀರ ಬಡಾವಣೆಯ ನಿವಾಸಿ ಮೊದೀನ್ ಸಾಹೇಬ್ ಮುಳಗುಂದ ಎಂಬಾತನೇ ಗಾಯಗೊಂಡಿದ್ದು, ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ವಿವರ
ನೇಕಾರ ನಗರದ ಅಜ್ಮೀರ್ ಬಡಾವಣೆಯ ಮೋದಿನ್‌ಸಾಹೇಬ್ (ಗೌಂಡಿ) ಹಾಗೂ ಸಹಕಾರ್ಮಿಕ ಅಲ್ಲಾವುದ್ದೀನ್ ಮಲ್ಲೂರ (ಟೈಲ್ಸ್ ಮೇಸ್ತ್ರಿ) ಎಂಬುವವರು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ನವನಗರಕ್ಕೆ ಮನೆ ಕಟ್ಟಡ ನಿರ್ಮಾಣ ಕೆಲಸಕ್ಕೆ ತೆರಳುತ್ತಿದ್ದರು. ಅಲ್ಲಾವುದ್ದೀನ್ ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದರು. ಹಳೇ ಬಸ್ ನಿಲ್ದಾಣದ ಎದುರು ಕರ್ತವ್ಯದ ಮೇಲಿದ್ದ ಪಿಎಸ್‌ಐ ಆರ್.ಎಸ್. ನಾಯಕ ತಂಡ ಅವರನ್ನು ತಡೆದು ನೂರು ರೂ. ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಜತೆಗೆ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲಾವುದ್ದೀನ್ ಹತ್ತಿರ ನಕಲು ಪತ್ರಗಳು ಇದ್ದುದರಿಂದ ಮೂಲ ದಾಖಲೆ ಪತ್ರಗಳನ್ನು ತೋರಿಸುವಂತೆ ಸೂಚಿಸಿದ್ದಾರೆ. ಮೂಲ ದಾಖಲೆ ಪತ್ರಗಳು ಇಲ್ಲದಿದ್ದರೆ 500 ರೂ. ದಂಡ ಭರಿಸು ಎಂದಿದ್ದಾರೆ. ಆದರೆ ಮೂಲ ದಾಖಲೆ ಪತ್ರಗಳು ಮನೆಯಲ್ಲಿವೆ ಎಂದ ಅಲ್ಲಾವುದ್ದೀನ್, ಈಗ ನನ್ನ ಬಳಿ ಕೇವಲ ನೂರು ರೂ. ಮಾತ್ರ ಇದೆ ಎಂದು ಕೊಡಲು ಮುಂದಾದರು.
ಹಾಗಾದರೆ ಬೈಕ್‌ನ್ನು ಕೋರ್ಟ್‌ಗೆ ಬಂದು ತೆಗೆದುಕೊಂಡು ಹೋಗು ಎಂದು ಪೊಲೀಸರು ಸೂಚಿಸಿದ್ದಾರೆ. ಈ ಮಧ್ಯೆ ಮೋದಿನಸಾಹೇಬ್ ನನ್ನ ಬೈಕ್ ಒಯ್ದು ಮೂಲ ದಾಖಲೆಗಳನ್ನು ತೆಗೆದುಕೊಂಡು ಬಾ ಎಂದು ಅಲ್ಲಾವುದ್ದೀನ್‌ಗೆ ಹೇಳಿದಾಗ ಇಷ್ಟಕ್ಕೇ ಕೆರಳಿದ ಪೊಲೀಸರು ಮೋದಿನ್‌ಸಾಹೇಬ್ ಮೇಲೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.
ನಂತರ ಪೊಲೀಸರು ಮೋದಿನ್‌ಸಾಹೇಬ್‌ನನ್ನು ಠಾಣೆಗೆ ಕರೆದೊಯ್ದು ಎಂಟು ಜನ ಪೇದೆಗಳೊಂದಿಗೆ ಮತ್ತೆ ಥಳಿಸಿದ್ದಾರೆ. ಇದರಿಂದ ಮುಖಕ್ಕೆ ಗಾಯವಾಗಿ ರಕ್ತ ಸುರಿಯತೊಡಗಿದೆ. ನಂತರ ಪೊಲೀಸರು ಗಾಯಾಳುವಿನ ಕೈಯಲ್ಲಿ 500 ರೂ. ನೀಡಿ ಈ ಕುರಿತು ದೂರು ನೀಡಬೇಡ, ವೈದ್ಯರ ಹತ್ತಿರ ಚಿಕಿತ್ಸೆ ಪಡೆದುಕೊ ಎಂದು ಸಮಾಧಾನ ಪಡಿಸಿ ಕಳುಹಿಸಿದ್ದಾರೆ ಎಂದು ಗಾಯಾಳು ಮೋದಿನ್‌ಸಾಹೇಬ್ ದೂರಿದ್ದಾರೆ.
40 ಡಿಗ್ರಿ ತಲುಪಿದ ಉಷ್ಣಾಂಶ!
ಭಾರಿ ಬಿಸಿಲಿನ ಮಧ್ಯೆಯೂ ಹೆಲ್ಮೆಟ್ ಧರಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ನಾಗರಿಕರು ತಿರುಗಿ ಬೀಳುತ್ತಿರುವ ಪ್ರಕರಣ ಇದೇ ಮೊದಲಲ್ಲ. ಕಳೆದ ವಾರ ಕೂಡ ಯುವಕನೊಬ್ಬ ಹೆಲ್ಮೆಟ್‌ಗಾಗಿ ಪೊಲೀಸರು ದಂಡ ಕೇಳಿದ್ದರಿಂದ ರಸ್ತೆಗೆ ಅಡ್ಡ ಮಲಗಿ ಪ್ರತಿಭಟಿಸಿದ್ದ. ಶನಿವಾರ ಕೂಡ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿ ನಗರದಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಉಸಿರುಗಟ್ಟುವಷ್ಟು ಧಗೆ ಇದ್ದುದರಿಂದ ಗಾರೆ ಕೆಲಸ ಮಾಡುವ ಕಾರ್ಮಿಕ ಹೆಲ್ಮೆಟ್ ಧರಿಸಿರಲಿಲ್ಲ. ಅದಕ್ಕಾಗಿ ಆತ ದಂಡ ಕಟ್ಟಲು ಮುಂದಾದರೂ ಪೊಲೀಸರು ಆತನ ಮೇಲೆ ಮುಗಿ ಬಿದ್ದಿದ್ದಾರೆ. ಹವಾನಿಯಂತ್ರಿತ ಮತ್ತು ಸುಸಜ್ಜಿತ ವಾಹನಗಳಲ್ಲಿ ತಿರುಗಾಡುವ ಅಧಿಕಾರಿಗಳಿಗೆ ನಾಗರಿಕರ ಸಮಸ್ಯೆಯ ಆಳ ಅರ್ಥವಾಗದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ