Please enable javascript.ಕೈಗಾರಿಕೆಗಳ ಸದ್ಬಳಕೆ ಅನಿವಾರ್ಯ - ಕೈಗಾರಿಕೆಗಳ ಸದ್ಬಳಕೆ ಅನಿವಾರ್ಯ - Vijay Karnataka

ಕೈಗಾರಿಕೆಗಳ ಸದ್ಬಳಕೆ ಅನಿವಾರ್ಯ

ವಿಕ ಸುದ್ದಿಲೋಕ 2 Aug 2014, 4:26 am
Subscribe

ಹುಬ್ಬಳ್ಳಿ :ಉತ್ತರ ಕರ್ನಾಟಕ ಅನೇಕ ಅಮೂಲ್ಯವಾದ ಕೈಗಾರಿಕೆಗಳನ್ನು ಹೊಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಉಗ್ರಾಣ ನಿಯಂತ್ರಣಾಧಿಕಾರಿ ಓ.ಪಿ.ಖರೆ ಅಭಿಪ್ರಾಯಪಟ್ಟರು.

ಕೈಗಾರಿಕೆಗಳ ಸದ್ಬಳಕೆ ಅನಿವಾರ್ಯ
ಹುಬ್ಬಳ್ಳಿ :ಉತ್ತರ ಕರ್ನಾಟಕ ಅನೇಕ ಅಮೂಲ್ಯವಾದ ಕೈಗಾರಿಕೆಗಳನ್ನು ಹೊಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಉಗ್ರಾಣ ನಿಯಂತ್ರಣಾಧಿಕಾರಿ ಓ.ಪಿ.ಖರೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ಸಭಾಭವನದಲ್ಲಿ ಶುಕ್ರವಾರ ಸಂಸ್ಥೆಯ 86ನೇ ಸಂಸ್ಥಾಪಕರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆಗಳ ಕೊರತೆ ಈ ಭಾಗವನ್ನು ಕಾಡುತ್ತಿದೆ. ಆದ್ದರಿಂದ ದೊಡ್ಡ ಅಥವಾ ಬೃಹತ್ ಗಾತ್ರದ ಕೈಗಾರಿಕೆಗಳು ನೆಲೆ ಕಂಡುಕೊಂಡಲ್ಲಿ ಆರ್ಥಿಕವಾಗಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಸರಬರಾಜು ಘಟಕಗಳಿಗೆ ಪೂರಕವಾಗುತ್ತದೆ ಎಂದರು.

ನೈರುತ್ಯ ರೈಲ್ವೆ ವಲಯ 1,200 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದ್ದು, ಇದರಲ್ಲಿ ಡಿಸೇಲ್‌ಗಾಗಿ 900 ಕೋಟಿ ರೂ. ಹಾಗೂ ಇತರೆ ಸರಕುಗಳ ಖರೀದಿಗೆ 300 ಕೋಟಿ ಹಣ ವ್ಯಯಿಸಲಾಗುತ್ತಿದೆ ಎಂದ ಅವರು, ಆನ್‌ಲೈನ್ ಮೂಲಕ ಉದ್ಯಮಿಗಳು ಟೆಂಡರ್ ಪಡೆದುಕೊಂಡು ನೈರುತ್ಯ ರೈಲ್ವೆ ವಲಯದ ನಾನಾ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ವಾಣಿಜ್ಯ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧಾರವಾಡದ ಎಂ.ಎಂ.ಇಂಡಸ್ಟ್ರೀಸ್ ಕಂಟ್ರೋಲ್ಸ್ ಪ್ರೈ.ಲಿ.ನ ಸುಧೀರ ಮಾಂಡೆ, ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ, ಪ್ರತಿಭಾವಂತರನ್ನು ಗುರುತಿಸುವ ಕಣ್ಣುಗಳ ಕೊರತೆ ಇದೆ. ಈ ಭಾಗದಲ್ಲಿ ಹಲವು ಉದ್ದಿಮೆಗಳು ಸ್ಥಾಪನೆಯಾಗಿದ್ದು, ಪ್ರತಿಭಾವಂತರಿಗೆ ಅವಕಾಶ ನೀಡಬೇಕಾಗಿದೆ ಎಂದರು.

ತಮ್ಮ ಎಂ.ಎಂ. ಇಂಡಸ್ಟ್ರಿಯಲ್ ಕಂಟ್ರೋಲ್ಸ್ ಸಂಸ್ಥೆಯಲ್ಲಿ ಯಂತ್ರ ಮಾನವಗಳು ಕಾರ್ಯ ನಿರ್ವಹಿಸಿದರೂ ಅದರ ನಿರ್ವಹಣೆಯನ್ನು ಸ್ಥಳೀಯ ಜನರೆ ಮಾಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ಸ್ಥಳೀಯ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಾವಂತರು ಹೊರಹೊಮ್ಮುತ್ತಿದ್ದರೂ ಅವಕಾಶಗಳ ಕೊರತೆಯಿಂದ ಪ್ರತಿಭೆ ಹೊರಹೊಮ್ಮುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ನಗರದ ಫಾಸ್ಟನರ್ಸ್‌ ಆ್ಯಂಡ್ ಅಲೈಡ್ ಪ್ರೊಡಕ್ಷನ್ ಪ್ರೈ.ಲಿ.ನ ವೀರೇಂದ್ರ ಕೌಜಲಗಿ, ಎಕ್ಸಲ್ ಫುಡ್ಸ್ ಪ್ರೈ.ಲಿ.ನ ಪ್ರಕಾಶ ಕನ್ನೂರ, ಬೆಳಗಾವಿಯ ಪೋಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೋರೇಶನ್‌ನ ಶ್ರೀಧರ ಉಪ್ಪಿನ, ಗೋಕಾಕ ನಿರ್ಮಲ ಜ್ಯುವೆಲರ್ಸ್‌ ನ ಓಂಕಾರಮಲ್ ರಾಠೋಡ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕೆಸಿಸಿಐ ವತಿಯಿಂದ ಪುರಸ್ಕರಿಸಲಾಯಿತು. ಕೋಗಿಲೆ ಕೊಟ್ರೇಶ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷರಾದ ರಮೇಶ ಪಾಟೀಲ್, ಕೆ.ಡಿ.ಕೋಟೆಕರ್,ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಜಂಟಿ ಗೌರವ ಕಾರ್ಯದರ್ಶಿ ಸುನೀಲ ರಾಯ್, ಮಾಜಿ ಅಧ್ಯಕ್ಷರಾದ ಸಿ.ವಿ.ಪಾಟೀಲ, ಮದನ್ ದೇಸಾಯಿ, ಎನ್.ಪಿ.ಜವಳಿ, ಡಿ.ಎಸ್.ಗುಡ್ಡೋಡಗಿ, ವಿ.ಪಿ.ಲಿಂಗನಗೌಡರ, ಎಂ.ಸಿ.ಹಿರೇಮಠ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ಸ್ವಾಗತಿಸಿದರು. ಜಗದೀಶ ಮಳಗಿ ನಿರೂಪಿಸಿದರು. ಸುನೀಲ ರಾಯ್ ವಂದಿಸಿದರು.

ಚಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ