ಆ್ಯಪ್ನಗರ

10ಸಾವಿರ ಸಸಿ ನೆಡುವ ಕಾರ‍್ಯಕ್ರಮ: 28ಕ್ಕೆ ಸಭೆ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಜೂ.5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ರಾಜ್ಯಾದ್ಯಂತ 25ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

Vijaya Karnataka 25 May 2019, 5:00 am
ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಜೂ.5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ರಾಜ್ಯಾದ್ಯಂತ 25ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
Vijaya Karnataka Web 10000 planting program meeting 28th
10ಸಾವಿರ ಸಸಿ ನೆಡುವ ಕಾರ‍್ಯಕ್ರಮ: 28ಕ್ಕೆ ಸಭೆ


ಪ್ರತಿ ಜಿಲ್ಲೆಯಲ್ಲೂ ಸರಿಸುಮಾರು 1 ಲಕ್ಷ ಸಸಿ ಸಂಗ್ರಹಿಸಿ ಪರಿಸರ ದಿನಾಚರಣೆ ದಿನದಂದು ನೆಟ್ಟು ಪೋಷಿಸಲಾಗುವುದು. ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ನಗರದಲ್ಲಿ 10 ಸಾವಿರ ಸಸಿ ನೆಡಲಾಗುವುದು ಎಂದು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಎ.ಕೆ.ನಾಗರಾಜಪ್ಪ ತಿಳಿಸಿದ್ದಾರೆ.

ಪ್ರಾಧಿಕಾರದ ನಿರ್ದೇಶನದಂತೆ ತಾಲೂಕಿನ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು, ಹಾಸ್ಟೇಲ್‌ಗಳು, ಸಮುದಾಯ ಭವನ, ಗ್ರಾಮ ಪಂಚಾಯಿತಿಯ ಸ್ಥಳಗಳಲ್ಲಿ ಸಸಿ ನೆಡಲು ಯೋಜಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಸುಮಾರು 10 ಸಾವಿರ ಸಸಿ ನೆಡಲು ಚಿಂತಿಸಲಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಯಲದ ಹೊಸ ಆವರಣದಲ್ಲಿ ಒಂದು ಸಾವಿರ ಸಸಿ ನೆಡಲಾಗುವುದು.

ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಯಿಂದ ಬೇವು, ಅರಳಿ, ಕಾಡು ಬಾದಾಮಿ, ಹೊನ್ನೆ ಸೇರಿದಂತೆ ಇತರೆ ಸಸಿ ಒದಗಿಸಾಗುತ್ತಿದೆ. ಈ ಕಾರ್ಯದಲ್ಲಿ ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಪರಸರ ರಕ್ಷ ಣೆ ಕೇವಲ ಸರಕಾರಿ ಕೆಲಸವಲ್ಲ, ಇದು ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಿದೆ. ಈ ಮಹೋನ್ನತ ಕಾರ್ಯದಲ್ಲಿ ನಾಗರಿಕರು, ಸಂಘ ಸಂಸ್ಥೆಗಳು, ಎನ್ಜಿಓಗಳು, ಕೈಗಾರಿಕೊದ್ಯಮಿಗಳು, ವ್ಯಾಪಾರಸ್ಥರು ಪಾಲ್ಗೊಳ್ಳಬೇಕು.

ತಾಲೂಕಿನ ಯಾವುದೇ ಸಂಘ ಸಂಸ್ಥೆಗಳು, ನಾಗರಿಕರು ಸದುದ್ದೇಶÜದಿಂದ ಈ ಕಾರ್ಯದಲ್ಲಿ ಭಾಗವಹಿಸಿದರನ್ನು ಅಭಿನಂದಿಸಲಾಗುವುದು. ಈ ಕುರಿತಂತೆ ಚರ್ಚಿಸಲು ಮೇ 28ರಂದು ಸಂಜೆ 5.15ಕ್ಕೆ ತಿಮ್ಮಾಪುರದಲ್ಲಿರುವ ನೂತನ ನ್ಯಾಯಾಲಯಗಳ ಸಂಕೀರ್ಣದ 1ನೇ ಮಹಡಿ ಸಭಾಭನದಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ವಕೀಲರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆ, ಎನ್‌ಜಿಓ ಗಳು ಭಾಗಹಿಸಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9380935734 ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ