ಆ್ಯಪ್ನಗರ

130 ಕೋಟಿ ರೂ. ಸಾಲ ವಿತರಣೆ

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಗ್ರಾಹಕ ಸಂಪರ್ಕ ಮೇಳದಲ್ಲಿ130 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಸಾಲ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನ ಮೇರೆಗೆ ಅ. 4ರಿಂದ 10ರ ವರೆಗೆ ಸಂಘಟಿಸಲಾಗಿದ್ದ

Vijaya Karnataka 15 Oct 2019, 5:00 am
ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಗ್ರಾಹಕ ಸಂಪರ್ಕ ಮೇಳದಲ್ಲಿ130 ಕೋಟಿ ರೂ. ಸಾಲ ವಿತರಣೆ ಮಾಡಿದೆ.
Vijaya Karnataka Web 130 crores debt issuance
130 ಕೋಟಿ ರೂ. ಸಾಲ ವಿತರಣೆ

ಸಾಲ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನ ಮೇರೆಗೆ ಅ. 4ರಿಂದ 10ರ ವರೆಗೆ ಸಂಘಟಿಸಲಾಗಿದ್ದ ಗ್ರಾಹಕ ಸಂಪರ್ಕ ಸೇತು ಕಾರ್ಯಕ್ರಮದಲ್ಲಿಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಅತ್ಯಂತ ಕ್ರಿ0åÜÞಶೀಲವಾಗಿ ಪಾಲುಗೊಂಡು 8400 ಜನರಿಗೆ ವಿವಿಧ ಉದ್ದೇಶಕ್ಕೆ ಸಂಬಂಧಿಸಿ 130 ಕೋಟಿ ರೂ. ಸಾಲ ವಿತರಿಸಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ತಿಳಿಸಿದ್ದಾರೆ.

ವಿವಿಧ ಸಾಲ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿಅರಿವು ಮೂಡಿಸಲು ನಮ್ಮ ನಡೆ ಗ್ರಾಹಕರಡೆಗೆ ಎಂಬ ಶೀರ್ಷಿಕೆಯಡಿ ಬ್ಯಾಂಕ್‌ ಹುಬ್ಬಳ್ಳಿ, ಬೆಳಗಾವಿ, ಉಡುಪಿ ಮತ್ತು ಮಂಗಳೂರಿನಲ್ಲಿವಿಶೇಷ ಮಳಿಗೆ ಸ್ಥಾಪಿಸಿತ್ತಲ್ಲದೆ ಈ ಮಳಿಗೆಗಳಿಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ಜನ ಭೇಟಿ ನೀಡಿ ಸಾಲ ಯೋಜನೆಗಳ ಕುರಿತು ಮಾಹಿತಿ ಪಡೆದರು. ಅಲ್ಲದೇ ಸಾಲ ಪಡೆಯುವ ಬಗೆಗೆ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ