ಆ್ಯಪ್ನಗರ

ಅಪರಿಚಿತ ವ್ಯಕ್ತಿಯಿಂದ 21.41 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿಪರಿಚಿತಗೊಂಡ ಅಪರಿಚಿತ ವ್ಯಕ್ತಿ ಬೆಲೆಬಾಳುವ ವಸ್ತುಗಳನ್ನೊಳಗೊಂಡ ಪಾರ್ಸೆಲ್‌ ಕಳುಹಿಸುವುದಾಗಿ ಹೇಳಿ ಇಲ್ಲಿಯ ವ್ಯಕ್ತಿಯೊಬ್ಬರನ್ನು ನಂಬಿಸಿ 21.41 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.

Vijaya Karnataka 4 Dec 2019, 5:00 am
ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿಪರಿಚಿತಗೊಂಡ ಅಪರಿಚಿತ ವ್ಯಕ್ತಿ ಬೆಲೆಬಾಳುವ ವಸ್ತುಗಳನ್ನೊಳಗೊಂಡ ಪಾರ್ಸೆಲ್‌ ಕಳುಹಿಸುವುದಾಗಿ ಹೇಳಿ ಇಲ್ಲಿಯ ವ್ಯಕ್ತಿಯೊಬ್ಬರನ್ನು ನಂಬಿಸಿ 21.41 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.
Vijaya Karnataka Web 21 41 lakh from an unknown person fraud
ಅಪರಿಚಿತ ವ್ಯಕ್ತಿಯಿಂದ 21.41 ಲಕ್ಷ ರೂ. ವಂಚನೆ

ಫೇಸ್‌ಬುಕ್‌ನಲ್ಲಿಪರಿಚಯವಾದ ಅಪರಿಚಿತ ವ್ಯಕ್ತಿ ಲಂಡನ್‌ನಲ್ಲಿಆಯಿಲ್‌ ಕಂಪನಿಯಲ್ಲಿಕೆಲಸ ಮಾಡುವುದಾಗಿ ಹೇಳಿ ನಗರದ ವ್ಯಕ್ತಿಯನ್ನು ನಂಬಿಸಿದ್ದಾನೆ. ನಂತರ ಏರ್‌ಪೋರ್ಟ್‌ ಪಾರ್ಸಲ್‌ ಕಚೇರಿ ಆಫೀಸರ್‌ ಎಂದು ಹೇಳಿ ಮಹಿಳೆ ಮತ್ತು ವ್ಯಕ್ತಿಯೊಬ್ಬರು ಮಾತನಾಡಿ ಪಾರ್ಸೆಲ್‌ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಪಾರ್ಸಲ್‌ ಪಡೆಯಲು ಹಣ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.

ಇದನ್ನು ನಂಬಿದ ವ್ಯಕ್ತಿ ಅಕ್ಟೋಬರ್‌ 5 ರಿಂದ ನವೆಂಬರ್‌ 21ರ ವರೆಗೆ ಅವರ ಖಾತೆಗೆ ಒಟ್ಟು 21,41,500 ರೂ. ವರ್ಗಾಯಿಸಿದ್ದಾರೆ. ಆದರೆ, ಅವರಿಗೆ ಪಾರ್ಸಲ್‌ ನೀಡದೇ, ವಂಚಿಸಿದ್ದಾರೆ. ಈ ಬಗ್ಗೆ ಇಲ್ಲಿಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ